ಗರ್ಮಿ ಗರ್ಮಿ ಎನ್ನುತ್ತಲೇ ವೇದಿಕೆಗೆ ಏರಿದ ನೋರಾ ಫತೇ, ರಣವೀರ್ ಸಿಂಗ್..! ಮುಂದೆ ಆಗಿದ್ದೇನು?

ಮೊರೊಕನ್ ಸುಂದರಿ ನೋರಾ ಫತೇಹಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,ಈಗ ಅವರು ರಣವೀರ್ ಸಿಂಗ್ ಜೊತೆ ಹಾಟ್ ಡ್ಯಾನ್ಸ್ ಮಾಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.ಡ್ಯಾನ್ಸ್ ದೀವಾನೆ ಜೂನಿಯರ್ಸ್ ಸಹ-ತೀರ್ಪುಗಾರರಾಗಿರುವ ನೋರಾ ರಣವೀರ್ ಸಿಂಗ್ ಅವರ ಜೊತೆಗೆ ಸ್ಟ್ರೀಟ್ ಡ್ಯಾನ್ಸರ್ 3D ಚಿತ್ರದ ಗರ್ಮಿ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Written by - Zee Kannada News Desk | Last Updated : May 6, 2022, 02:35 PM IST
  • ಮೊರೊಕನ್ ಸುಂದರಿ ನೋರಾ ಫತೇಹಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,ಈಗ ಅವರು ರಣವೀರ್ ಸಿಂಗ್ ಜೊತೆ ಹಾಟ್ ಡ್ಯಾನ್ಸ್ ಮಾಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.
  • ಈ ಚಿತ್ರದ ಟ್ರೈಲರ್ ಸಾಕಷ್ಟು ಸದ್ದು ಮಾಡಿದ್ದು, ದಿವ್ಯಾಂಗ್ ಠಕ್ಕರ್ ನಿರ್ದೇಶಿಸಿರುವ ಈ ಸಿನಿಮಾ ವಿಶ್ವದಾದ್ಯಂತ ಮೇ 13, 2022 ರಂದು ಬೆಳ್ಳಿ ಪರದೆಗೆ ಬರಲಿದೆ.
ಗರ್ಮಿ ಗರ್ಮಿ ಎನ್ನುತ್ತಲೇ ವೇದಿಕೆಗೆ ಏರಿದ ನೋರಾ ಫತೇ, ರಣವೀರ್ ಸಿಂಗ್..! ಮುಂದೆ ಆಗಿದ್ದೇನು? title=
Photo Courtesy: Instagram

ಮುಂಬೈ: ಮೊರೊಕನ್ ಸುಂದರಿ ನೋರಾ ಫತೇಹಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,ಈಗ ಅವರು ರಣವೀರ್ ಸಿಂಗ್ ಜೊತೆ ಹಾಟ್ ಡ್ಯಾನ್ಸ್ ಮಾಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.ಡ್ಯಾನ್ಸ್ ದೀವಾನೆ ಜೂನಿಯರ್ಸ್ ಸಹ-ತೀರ್ಪುಗಾರರಾಗಿರುವ ನೋರಾ ರಣವೀರ್ ಸಿಂಗ್ ಅವರ ಜೊತೆಗೆ ಸ್ಟ್ರೀಟ್ ಡ್ಯಾನ್ಸರ್ 3D ಚಿತ್ರದ ಗರ್ಮಿ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

 
 
 
 

 
 
 
 
 
 
 
 
 
 
 

A post shared by Ranveer Singh (@ranveersingh)

ಈ ವಿಡಿಯೋದಲ್ಲಿ ರಣವೀರ್ ಮತ್ತು ನೋರಾ ಪರಸ್ಪರ ಒಬ್ಬಬ್ಬರನ್ನು ಮೀರಿಸುವಂತೆ ಸ್ಟೆಪ್ ಹಾಕಿದ್ದಾರೆ.ಅದರಲ್ಲೂ ಕೊನೆಯಲ್ಲಿ ನೋರಾಳ ನಡೆಗೆ ರಣವೀರ್ ನೀಡಿರುವ ಪ್ರತಿಕ್ರಿಯೆಯಂತೂ ಸಾಕಷ್ಟು ಗಮನ ಸೆಳೆದಿದೆ.ನೋರಾ ಸಿಲ್ವರ್ ಬಾಡಿಕಾನ್ ಡ್ರೆಸ್ ನ್ನು ಧರಿಸಿದರೆ, ರಣವೀರ್ ಸಿಂಗ್ ರೆಟ್ರೋ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ : ತೆರೆಮೇಲೆ ಅಬ್ಬರಿಸಲು ಸಜ್ಜಾದ 'ಮಾರ್ಟಿನ್‌'! ರಿಲೀಸ್‌ ಡೇಟ್‌ ಫಿಕ್ಸ್

ರಣವೀರ್ ಸಿಂಗ್ ಅವರು ೮೩ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರ ನಿರ್ವಹಿಸುವುದರ ಮೂಲಕ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಅವರು ಮನೀಶ್ ಶರ್ಮಾ ನಿರ್ಮಿಸಿದ YRF ನ 'ಜಯೇಶ್‌ಭಾಯ್ ಜೋರ್ದಾರ್' ನಲ್ಲಿಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ 'ಅರ್ಜುನ್ ರೆಡ್ಡಿ' ಖ್ಯಾತಿಯ ಶಾಲಿನಿ ಪಾಂಡೆ ಕಾಣಿಸಿಕೊಂಡಿದ್ದಾರೆ, ಇದೆ ಮೊದಲ ಬಾರಿಗೆ ಅವರು ರಣವೀರ ಸಿಂಗ್ ಜೊತೆ ಬಾಲಿವುಡ್ ನ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಒಮಿಕ್ರಾನ್‌ ಪತ್ತೆ: ದೇಶದಲ್ಲಿ 3,545 ಹೊಸ ಕೊರೊನಾ ಪ್ರಕರಣ ದಾಖಲು

ಈ ಚಿತ್ರವು ವಿಶೇಷವಾಗಿ ಸ್ತ್ರೀದ್ವೇಷ ಮತ್ತು ಹೆಣ್ಣು ಭ್ರೂಣಹತ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ವಿಡಂಬನೆ ಮೂಲಕ ಚಿತ್ರಿಸಲಾಗಿದೆ. ಈ ಚಿತ್ರದ ಟ್ರೈಲರ್ ಸಾಕಷ್ಟು ಸದ್ದು ಮಾಡಿದ್ದು, ದಿವ್ಯಾಂಗ್ ಠಕ್ಕರ್ ನಿರ್ದೇಶಿಸಿರುವ ಈ ಸಿನಿಮಾ ವಿಶ್ವದಾದ್ಯಂತ ಮೇ 13, 2022 ರಂದು ಬೆಳ್ಳಿ ಪರದೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News