ಚೀನಾ ಕೊರೊನಾವೈರಸ್ ಅಪ್ಡೇಟ್ಗಳು: ಕೊರೊನಾ ಮಹಾಮಾರಿಯನ್ನು ಜಗತ್ತಿಗೆ ಉಡುಗೊರೆಯಾಗಿ ನೀಡಿದ ಚೀನಾ ಕಳೆದ ಎರಡು ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದೆ. ಈ ರೋಗವನ್ನು ನಿಯಂತ್ರಿಸಲು ಅವರು ಇಂತಹ ವಿಲಕ್ಷಣ ವಿಧಾನಗಳನ್ನು ಬಳಸುತ್ತಿದ್ದು ಇದರಿಂದಾಗಿ ಜನರಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ.
ಇದೀಗ ಚೀನಾದಲ್ಲಿ ಅಚ್ಚರಿಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಚೀನಾದ ಶಾಂಘೈ ನಗರದ ಅಧಿಕಾರಿಗಳು ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಿ, ಪಾಲಿಥಿನ್ನಲ್ಲಿ ಪ್ಯಾಕ್ ಮಾಡಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದ್ದಾರೆ. ಶವಾಗಾರಕ್ಕೆ ಕರೆದೊಯ್ದ ಸಿಬ್ಬಂದಿ ಆತನನ್ನು ಪರೀಕ್ಷಿಸಿದಾಗ ವೃದ್ಧ ಉಸಿರಾಡುತ್ತಿದ್ದದ್ದು ಗೊತ್ತಾಗಿದೆ. ಆ ಬಳಿಕ ಮತ್ತೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಚೀನಾದ ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮಾರ್ಚ್ 1 ರಿಂದ ಲಾಕ್ಡೌನ್ ಆಗಿರುವ ಶಾಂಘೈ :
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಸುಮಾರು 25 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಶಾಂಘೈ ನಗರದಲ್ಲಿ ಕರೋನವೈರಸ್ನ ಹೊಸ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಇದರಿಂದಾಗಿ ಮಾರ್ಚ್ 1 ರಿಂದ ಶಾಂಘೈನಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಲಾಕ್ಡೌನ್ನಿಂದಾಗಿ ಜನರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ ಮತ್ತು ಆಹಾರ ಮತ್ತು ಪಾನೀಯದ ಸಮಸ್ಯೆಗಳು ಅವರನ್ನು ಬೆಂಬಿಡದೆ ಕಾಡುತ್ತಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಜನರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
A senior citizen was mistaken for dead by staff at an elderly care centre and sent to the morgue. He has since been taken back to the hospital and is in stable condition. pic.twitter.com/35vCaExLFa
— South China Morning Post (@SCMPNews) May 2, 2022
ಇದನ್ನೂ ಓದಿ- Covid 4th Wave in India: ಭಾರತಕ್ಕೂ ಕಾಲಿಟ್ಟಿತೇ ಕರೋನಾ ನಾಲ್ಕನೇ ಅಲೆ ; ICMR ತಜ್ಞರು ಹೇಳಿದ್ದೇನು ?
ಜೀವಂತ ವ್ಯಕ್ತಿಯನ್ನು ಮೃತ ಎಂದು ಘೋಷಿಸಿದ ವೈದ್ಯರು:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಪ್ರಕಾರ, ಶಾಂಘೈನ ಪುಟುವೊ ಜಿಲ್ಲೆಯ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶವಾಗಾರದ ಹೊರಗೆ ವ್ಯಾನ್ ಅನ್ನು ನಿಲ್ಲಿಸಲಾಗಿದೆ. ಆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಇಬ್ಬರು ಕಾರ್ಮಿಕರು ಪಿಪಿಇ ಕಿಟ್ಗಳನ್ನು ಧರಿಸಿದ ಮೃತದೇಹವನ್ನು ವ್ಯಾನ್ನಿಂದ ಹಳದಿ ಚೀಲದಲ್ಲಿ ಸಾಗಿಸುತ್ತಿದ್ದಾರೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬ್ಯಾಗನ್ನು ತೆರೆದು ಈ ವ್ಯಕ್ತಿ ಸತ್ತಿಲ್ಲ ಎಂದು ಹೇಳುತ್ತಾನೆ. ಇದರ ನಂತರ, ಇತರ ಉದ್ಯೋಗಿ ಕೂಡ ಪರೀಕ್ಷಿಸಿ ನೋಡುತ್ತಾನೆ. ಆಗ ಆ ವ್ಯಕ್ತಿ ಮೃತಪಟ್ಟಿಲ್ಲ ಎಂದು ದೃಢಪಟ್ಟಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ
ಆದಾಗ್ಯೂ, ಸಂಪೂರ್ಣ ನಿರ್ಲಕ್ಷ್ಯದಿಂದ, ಉದ್ಯೋಗಿ ಮತ್ತೆ ಚೀಲವನ್ನು ಮುಚ್ಚುತ್ತಾನೆ. ಇದನ್ನು ಕಂಡ ದಾರಿಹೋಕರು ಅದನ್ನು ವಿರೋಧಿಸುತ್ತಾರೆ. ಅದರ ನಂತರ ಉದ್ಯೋಗಿ ಈ ಮಾಹಿತಿಯನ್ನು ಒಳಗೆ ಶವಾಗಾರದ ಉಸ್ತುವಾರಿಗೆ ತಿಳಿಸುತ್ತಾನೆ. ಇದಾದ ಬಳಿಕ ಪ್ರಭಾರಿಯವರ ಸೂಚನೆ ಮೇರೆಗೆ ವೃದ್ಧರನ್ನು ಈ ಬ್ಯಾಗ್ನಿಂದ ಹೊರತೆಗೆದು ಗಾಲಿ ಕುರ್ಚಿಯಲ್ಲಿ ಕೂರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಈ ಘಟನೆ ವೈರಲ್ ಆದ ನಂತರ ಇದೀಗ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ ನೌಕರರ ವಿರುದ್ಧ ಕ್ರಮದ ಮಾತುಗಳನ್ನಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- Omicron ಹೊಸ ರೂಪಾಂತರಿಗಳು ಸಂಕಷ್ಟ ಹೆಚ್ಚಿಸಲಿವೆ, ಅಪಾಯಕಾರಿ ಸಾಬೀತಾಗಬಹುದು 4ನೆ ಅಲೆ
ಒಂದೇ ದಿನದಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ
ಶಾಂಘೈನಲ್ಲಿ ಭಾನುವಾರ 7333 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಈ ವೇಳೆ ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. 32 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಆಡಳಿತ ಮಂಡಳಿ ಜನರ ಬಗ್ಗೆ ಈ ರೀತಿ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಕಂಡು ನಗರದ ಜನತೆ ಕಂಗಾಲಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.