Viral Video: ಚಾಲಕನಿಲ್ಲದ ಕಾರನ್ನು ನಿಲ್ಲಿಸಲು ಕಿಟಕಿಯೊಳಗೆ ಹಾರಿದ ಯುವಕ!

ವಾಹನಗಳನ್ನು ಪಾರ್ಕ್ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಮುಖ್ಯವಾಗಿ ಇಳಿಜಾರು ಪ್ರದೇಶಗಳಲ್ಲಿ ಇಂತಹ ಜಾಗರೂಕತೆಯನ್ನು ವಹಿಸಬೇಕು. ಆದರೆ ಕೆಲವೊಮ್ಮೆ ಹ್ಯಾಂಡ್ ಬ್ರೇಕ್ ಹಾಕುವುದಕ್ಕೆ ಮರೆಯುತ್ತಾರೆ. 

Written by - Bhavishya Shetty | Last Updated : May 2, 2022, 03:52 PM IST
  • ಚಲಿಸುವ ಕಾರಿನೊಳಗೆ ಹಾರಿದ ಯುವಕ
  • ಇಳಿಜಾರಿನಲ್ಲಿ ಸಾಗುತ್ತಿದ್ದ ಕಾರನ್ನು ತಡೆಯಲು ಸಾಹಸ
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
Viral Video: ಚಾಲಕನಿಲ್ಲದ ಕಾರನ್ನು ನಿಲ್ಲಿಸಲು ಕಿಟಕಿಯೊಳಗೆ ಹಾರಿದ ಯುವಕ!   title=
Man Jumps Through Window

ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುವ ಕೆಲವೊಂದು ವಿಡಿಯೋಗಳು ಎದೆ ಝಲ್‌ ಎನ್ನುವಂತೆ ಮಾಡುತ್ತದೆ. ಅಂತಹದ್ದೇ ದೃಶ್ಯವೊಂದು ಇದೀಗ ವೈರಲ್‌ ಆಗಿದ್ದು, ಇಳಿಜಾರಿನಲ್ಲಿ ಡ್ರೈವರ್‌ ಇಲ್ಲದ ಕಾರೊಂದು ಸಾಗುತ್ತಿದ್ದಾಗ ಅದರೊಳಗೆ ಯುವಕನೋರ್ವ ಜಂಪ್‌ ಮಾಡಿ ಅದನ್ನು ತಡೆದಿದ್ದಾನೆ. ಈ ದೃಶ್ಯ  ನೋಡಿದರೆ ಭಯವಾಗುತ್ತದೆ. 

ಇದನ್ನು ಓದಿ: ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!

ವಾಹನಗಳನ್ನು ಪಾರ್ಕ್ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಮುಖ್ಯವಾಗಿ ಇಳಿಜಾರು ಪ್ರದೇಶಗಳಲ್ಲಿ ಇಂತಹ ಜಾಗರೂಕತೆಯನ್ನು ವಹಿಸಬೇಕು. ಆದರೆ ಕೆಲವೊಮ್ಮೆ ಹ್ಯಾಂಡ್ ಬ್ರೇಕ್ ಹಾಕುವುದಕ್ಕೆ ಮರೆಯುತ್ತಾರೆ. ಇದು ಕೂಡ ಅಂತಹ ಅಜಾಗರೂಕತೆಯಿಂದ ಸಂಭವಿಸಿದ ಘಟನೆಯಾಗಿದೆ.  ಆದರೆ ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. 

ವಿಡಿಯೋದಲ್ಲಿ ಏನಿದೆ: 
r/BeAmazed ಎಂಬ ರೆಡ್ಡಿಟ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿದೆ. ಇಬ್ಬರು ಯುವಕರು ಭಯಗೊಂಡು ರಸ್ತೆಯತ್ತ ಓಡಿ ಬರುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಷ್ಟರಲ್ಲಿ ಕಾರೊಂದು ಇಳಿಜಾರಿನಿಂದ ಸಾಗುತ್ತಾ ಬರುತ್ತಿರುತ್ತದೆ. ಇದನ್ನು ಕಂಡ ಓರ್ವ ಯುವಕ ಕಾರಿನ ಕಿಟಕಿಯೊಳಗೆ ಹಾರಿ ತಕ್ಷಣ ಹ್ಯಾಂಡ್‌ ಬ್ರೇಕ್‌ ಹಾಕಿದ್ದಾನೆ. ಹೀಗಾಗಿ ಸ್ವಲ್ಪದೂರ ಹೋಗಿ ವಾಹನ ನಿಂತಿದೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್‌ ಆ ರಸ್ತೆಯಲ್ಲಿ ಯಾವುದೇ ಬೇರೆ ವಾಹನವಾಗಲಿ, ಮಕ್ಕಳು- ಹಿರಿಯರು ಯಾರೂ ಸಾಗುತ್ತಿರಲಿಲ್ಲ. ಹೀಗಾಗಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ. 

 

 

ಇದನ್ನು ಓದಿ: ನಿಯತ್ತಾಗಿ ಎಕ್ಸಾಂ ಬರೆದ್ರೂ, ಇದೆಂಥಾ ಶಿಕ್ಷೆ, ಮಹಿಳಾ PSI ಅಭ್ಯರ್ಥಿಯ ಕಣ್ಣೀರ ಕಥೆ..!

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇನ್ನು ಯುವಕನ ಕಾರ್ಯಕ್ಕೆ ವಿಡಿಯೋ ನೋಡಿದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಸುಲಭದ ಮಾತಲ್ಲ. ಚಲಿಸುತ್ತಿರುವ ಕಾರಿನೊಳಗೆ ಜಂಪ್‌ ಮಾಡಿ ವಾಹನವನ್ನು ನಿಲ್ಲಿಸುವುದು ಸುಲಭದ ಮಾತಲ್ಲ. ಹೀಗಿರುವಾಗ ಈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News