ಹುಬ್ಬಳ್ಳಿ : ಸ್ಥಳೀಯ ಪೊಲೀಸರನ್ನು ನಾನು ಅಭಿನಂದಿಸುತ್ತೆನೆ. ಸರ್ಕಾರಕ್ಕೆ ಮುಜುಗರ ತರುವಂತಹ ಘಟನೆ ನಡೆಯುತ್ತಿತ್ತು. ಪೊಲೀಸರು ಇದನ್ನೆಲ್ಲಾ ತಪ್ಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ಈ ಘಟನೆ ಹಿಂದೆ ಕಾಣದ ಕೈಗಳು ಯಾವವೂ? ಅಂತವರ ಮೇಲೆ ಕ್ರಮ ತೆಗೆದುಕೊಳ್ಳಿ. ಅಮಾಯಕ ಮಕ್ಕಳು ಈ ಘಟನೆ ನೋಡುತ್ತಾ ಇದ್ದಾರೆ. ಅಂತಹವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಹಿನ್ನೆಲೆಯನ್ನು ನೋಡಬೇಕು. ಅವರ ಮೇಲೆ ಯಾವುದಾದರೂ ಕೇಸ್ ಇದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಕೇಸ್ಗಳು ಇಲ್ಲವಾದ್ರೆ ಅವರನ್ನ ಬಿಟ್ಟು ಬಿಡಲಿ. ನಾನು ಅಧಿಕಾರಿಗಳಲ್ಲಿ ಈ ಬಗ್ಗೆ ಮನವಿ ಮಾಡುತ್ತೆನೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ದಕ್ಕೆ ಆಗಬಾರದು. ಎಲ್ಲರೂ ಶಾಂತಿಯಿಂದ ಬದುಕಬೇಕು. ಕಲ್ಲು ತೂರಾಟ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ ನಾನು ಸಹಮತ ಕೊಡುತ್ತೆನೆ. ನಮ್ಮ ಪಕ್ಷ ಸಮಾಜಘಾತುಕ ಘಟನೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಇದನ್ನೂ ಓದಿ : ಐದು ಸಾವಿರ ಜನರಿಗೆ ಇಫ್ತಾರ್ ಕೂಟ ಆಯೋಜಿಸಿದ ಸಚಿವ ಎಂಟಿಬಿ ನಾಗರಾಜ್
ಹಿಜಾಬ್, ಹಲಾಲ್ ವಿಚಾರದಲ್ಲಿ ಸರ್ಕಾರ ಪ್ರಾರಂಭದಲ್ಲಿ ಚಿವುಟಿ ಹಾಕಬೇಕಾಗಿತ್ತು. ಹುಬ್ಬಳ್ಳಿಯ ಗಲಭೆ ಪ್ರಕರಣ ಪೂರ್ವ ನಿಯೋಜಿತ. ಡಿಜೆ ಹಳ್ಳಿ ,ಕೆಜಿ ಹಳ್ಳಿ ಘಟನೆ ನಡೆಯಲು ಕಾರಣಿಭೂತರಾದವರು ಈಗಲೂ ಆರಾಮವಾಗಿ ಓಡಾಡುತ್ತಿದ್ದಾರೆ. ಒಂದು ಪಕ್ಷದ ಮುಖಂಡರ ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಲಾಠಿ, ಬಂದೂಕು ಹಿಡಿದ ಸಮಾಜದ ರಕ್ಷಣೆಗೆ ನಿಂತ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿರಾತಕರು, ಕಲ್ಲು ತೂರಾಟ ನಡೆಸಿ, ತಲೆ ಹೊಡೆದು ಹಾಕಿದ್ರು. ಪೊಲೀಸ್ ವಾಹನಗಳ ನೆಲಕ್ಕುರುಳಿಸಿ ದಾಂದಲೇ ನಡೆಸಿದ್ರು. ಇಡೀ ಘಟನೆ ಇಡೀ ಘಟನೆ ಹುಬ್ಬಳ್ಳಿ ಜನರನ್ನ ಒಂದು ವಾರ ಕಾಲ ಭಯದಲ್ಲಿ ಬದುಕುವಂತೆ ಮಾಡಿತ್ತು. ಇದೀಗ ಹುಬ್ಬಳ್ಳಿ ಗಲಭೆಗೆ ಕಾರಣರಾದ 146 ಪುಂಡರನ್ನ ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಬಂಧಿತರ ವಿರುದ್ಧ ಪೊಲೀಸ್ ಇಲಾಖೆ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ : Ration Card: ರೇಷನ್ ಕಾರ್ಡ್ದಾರರಿಗೆ ಮತ್ತೊಂದು ಗುಡ್ ನ್ಯೂಸ್!
ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನಿರ್ಧರಿಸಿದೆ. ಇದುವರೆಗೆ ಬಂದಿತ 146 ಆರೋಪಿಗಳ ಪೈಕಿ ನಾಲ್ಕೈದು ಜನ ಮಾತ್ರ ರೌಡಿಶೀಟರ್ಗಳಿದ್ದಾರೆ. ಇನ್ನುಳಿದ 20ಕ್ಕೂ ಹೆಚ್ಚು ಆರೋಪಿಗಳು ಅವಳಿ ನಗರಗಳ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧಗಳ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಆರೋಪಿಗಳ ಪೂರ್ವಪರ ಸಂಗ್ರಹಿಸಿರುವ ಪೊಲೀಸರು. 40 ಕ್ಕೂ ಹೆಚ್ಚು ಬಂಧಿತರನನ್ನ ರೌಡಿ ಶೀಟ್ ಓಪನ್ ಮಾಡಿ ಪಟ್ಟಿಗೆ ಸೇರಿಸಲು ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಗಲಭೆಗೆ ಪ್ರಚೋದಿಸಿ ಮಾಸ್ಟರ್ ಮೈಂಡ್ ಗಳಂತೆ ಕೆಲಸ ಮಾಡಿದ 20 ಕ್ಕು ಹೆಚ್ಚು ಮುಖಂಡರುಗಳ ವಿರುದ್ಧ ಗೊಂಡಾ ಕಾಯ್ದೆ ಪ್ರಯೋಗಿಸಲು ಪ್ಲಾನ್ ಮಾಡಿದೆ. ಕಮ್ಯೂನಲ್ ಗೂಂಡಾ ಎಂದು ಗುರುತಿಸಿ 20 ಜನರ ಪಟ್ಟಿ ಸಿದ್ದಪಡಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.