Shocking Video: ಪತ್ನಿಯೊಂದಿಗೆ ಜಗಳವಾಡಿದ ಪತಿ, ಬೆಡ್ ಮೇಲೆ ಪತ್ನಿ ಮಾಡಿದ ಕೆಲಸ ನೋಡಿ ನೀವೂ ಬೆಚ್ಚಿಬೀಳುವಿರಿ

Husband Wife Fight Video: ಪತಿ-ಪತ್ನಿಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ನಡೆಯುವುದು ಸಾಮಾನ್ಯ ಸಂಗತಿ, ಇದೇ ರೀತಿ ಒಂದು ಜೋಡಿಯ ನಡುವೆ ಜಗಳ ನಡೆದಿದೆ. ಆದರೆ, ಜಗಳದ ನಂತರ ಪತ್ನಿ ಮಾಡಿದ ಕೆಲಸ ಮಾತ್ರ ಬೆಚ್ಚಿಬೀಳಿಸುವಂತಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ನಗೆಗಡಲಲ್ಲಿ ತೇಲಾಡುವಿರಿ. ವಾಸ್ತವದಲ್ಲಿ ಜಗಳದ ಬಳಿಕ ಪತ್ನಿ ಬೆಡ್ ಮೇಲೆಯೇ ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಿಸಿದ್ದಾಳೆ.  

Written by - Nitin Tabib | Last Updated : Apr 22, 2022, 01:21 PM IST
  • ಪತಿ-ಪತ್ನಿಯರ ಜಗಳದ ವಿಡಿಯೋ ವೈರಲ್
  • ಜಗಳದ ಬಳಿಕ ಪತ್ನಿ ಬೆಚ್ಚಿಬೀಳಿಸುವ ಕೆಲಸ ಮಾಡಿದ್ದಾಳೆ
  • ಪತ್ನಿ ಮಾಡಿದ ಕೆಲಸ ನೋಡಲು ಈ ವಿಡಿಯೋ ವೀಕ್ಷಿಸಿ
Shocking Video: ಪತ್ನಿಯೊಂದಿಗೆ ಜಗಳವಾಡಿದ ಪತಿ, ಬೆಡ್ ಮೇಲೆ ಪತ್ನಿ ಮಾಡಿದ ಕೆಲಸ ನೋಡಿ ನೀವೂ ಬೆಚ್ಚಿಬೀಳುವಿರಿ title=
Husband Wife Viral Video

Husband Wife Fight Video: ಇಂಟರ್ನೆಟ್‌ನಲ್ಲಿ, ಪ್ರತಿ ನಿತ್ಯ ಸಾಕಷ್ಟು ತಮಾಷೆಯ ವೀಡಿಯೊಗಳನ್ನು ನೀವು ನೋಡುತ್ತಿರಬಹುದು. ಅವುಗಳಲ್ಲಿ ಕೆಲ ವೀಡಿಯೊಗಳು ಸಾಕಷ್ಟು ತಮಾಷೆಯಿಂದ ಕೂಡಿರುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ  ಅಂತಹುದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ನೀವು ಕೂಡ ನಗೆಗಡಲಲ್ಲಿ ತೇಲಾಡುವುದರ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸುವಿರಿ. ಅಂದ ಹಾಗೆ ಈ ವಿಡಿಯೋ ಪತಿ-ಪತ್ನಿಯರ ನಡುವಿನ ಜಗಳಕ್ಕೆ ಸಂಬಂಧಿಸಿದ್ದಾಗಿದೆ.  

ಬೆಚ್ಚಿಬೀಳಿಸುವವಂತಿದೆ ಪತ್ನಿಯ ಕೆಲಸ
ಈ ವಿಡಿಯೋ ನೆಟ್ಟಿಗರ ಮಧ್ಯೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಾಸ್ತವದಲ್ಲಿ ವಿಡಿಯೋದಲ್ಲಿ ಪತಿ-ಪತ್ನಿಯರ ನಡುವೆ ವ್ಯಾಜ್ಯ ನಡೆದಿದೆ. ಇದಾದ ಬಳಿಕ ಪತ್ನಿ ಮಾಡಿರುವ ಕೆಲಸಕ್ಕೆ ನೀವೂ ಕೂಡ ತಬ್ಬಿಬ್ಬಾಗುವಿರಿ. ಜಗಳದ ಬಳಿಕ ಪತ್ನಿ ಬೆಡ್ ಮೇಲೆ ಇಟ್ಟಿಗೆಯಿಂದ ಗೋಡೆಯನ್ನೇ ನಿರ್ಮಿಸಿದ್ದಾಳೆ ಮತ್ತು ಇದು ತುಂಬಾ ಆಶ್ಚರ್ಯಕ್ಕೀಡುಮಾಡುವಂತಿದೆ. ಇನ್ನೊಂದೆಡೆ ಬಡಪಾಯಿ ಪತಿರಾಯ ಭಯದಿಂದ ಪಕ್ಕದಲ್ಲಿಯೇ ಕುಳಿತು ಪತ್ನಿ ಮಾಡುತ್ತಿರುವ ಕೆಲಸವನ್ನು ನೋಡುತ್ತಿರುವುದನ್ನು ನೀವು ಗಮನಿಸಬಹುದು. 

ಇದನ್ನೂ ಓದಿ-Thief Dance Video: CCTV ಫೂಟೇಜ್ ನಲ್ಲಿ ಕಂಡ ಕಳ್ಳನ ವಿಶಿಷ್ಟ ಡಾನ್ಸ್, ನೀವೂ ನೋಡಿ

ಪತಿ-ಪತ್ನಿಯರು ಪರಸ್ಪರ ಮುನಿಸಿಕೊಂಡಿದ್ದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಪತಿ ಸುಮ್ಮನೆ ಕುಳಿತುಕೊಂಡಿದ್ದು, ಪತ್ನಿ ಮಾತ್ರ ತನ್ನ ಹಾಗೂ ಪತಿಯ ನಡುವೆ ಇಟ್ಟಿಗೆ ಹಾಗೂ ಸಿಮೆಂಟ್ ನಿಂದ ಗಟ್ಟಿಯಾದ ಗೋಡೆಯನ್ನು ನಿರ್ಮಿಸುತ್ತಿದ್ದಾಳೆ. ಪತಿ ತನ್ನ ಪತ್ನಿ ಮಾಡುತ್ತಿರುವ ಕೆಲಸಕ್ಕೆ ಮುನಿಸಿಕೊಂಡಂತೆ ಕಾಣುತ್ತಿದೆ. ಆದರೆ, ಭಯದ ಹಿನ್ನೆಲೆ ಆತ ಸುಮ್ಮನೆ ಕುಳಿತಿದ್ದಾನೆ. ಜಗಳದ ಬಳಿಕವೇ ಪತ್ನಿ ಗೋಡೆ ನಿರ್ಮಿಸುವ ನಿರ್ಧಾರ ಕೈಗೊಂಡಂತಿದೆ ಎಂಬುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು.

ಇದನ್ನೂ ಓದಿ-Snake Mongoose Fight: ಹಾವು-ಮುಂಗುಸಿಯ ನಡುವೆ ಭೀಕರ ಕಾಳಗ, ನೋಡಿ ನೀವು ಒಂದು ಕ್ಷಣ ದಂಗಾಗುವಿರಿ

ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ
rising.teching ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ, 'ಗೋಡೆ ಕಟ್ಟುವ ಬದಲು ಇಬ್ಬರು ಪರಸ್ಪರ ಒಮ್ಮೆ ಮಾತನಾಡಿಕೊಳ್ಳಬೇಕು' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು 'ಇದು ಪತಿ-ಪತ್ನಿಯರ ಜಗಳದ ಮಾಡರ್ನ್ ಸಮಾಧಾನ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News