ದಿನಕ್ಕೆ ಎಷ್ಟು ನೀರು ಕುಡಿಯಬೇಕು: ನೀರು ಬಣ್ಣರಹಿತವಾದ ಹಾಗೂ ಸಂಪೂರ್ಣ ರುಚಿ ಇಲ್ಲದಂತಹ ದ್ರವ. ಆದರೆ ಅದರ ಮಹತ್ವವು ನಮ್ಮ ಅಂದಾಜಿಗೂ ಮೀರಿದ್ದು. ಸಾಮಾನ್ಯವಾಗಿ ನಾವು ಬಾಯರಿಕೆ ಆದಾಗ ನೀರು ಕುಡಿಯುವ ಅಭ್ಯಾಸ ಹೊಂದಿರುತ್ತೇವೆ. ಆದರೆ, ಉತ್ತಮ ಆರೋಗ್ಯಕ್ಕಾಗಿ ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ನೀರಿನಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಮಾತ್ರವಲ್ಲ, ನಾವು ಹಲವು ಆರೋಗ್ಯ ಸಮಸ್ಯೆಗಳಿಂದಲೂ ಸಹ ದೂರ ಉಳಿಯಲು ನೀರು ಸಹಕಾರಿಯಾಗಿದೆ. ಹಾಗಿದ್ದರೆ ನಮ್ಮ ಆರೋಗ್ಯಕ್ಕೆ ನೀರಿನಿಂದ ಸಿಗುವ ಪ್ರಯೋಜನಗಳೇನು? ಉತ್ತಮ ತ್ವಚೆಗಾಗಿ ನಿತ್ಯ ಎಷ್ಟು ಗ್ಲಾಸ್ ನೀರು ಕುಡಿಯಬೇಕು ಎಂದು ತಿಳಿಯೋಣ...
ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆಷ್ಟು ನೀರು ಕುಡಿಯಬೇಕು?
ನೀರನ್ನು ಜೀವ ಜಲ ಎಂದು ಹೇಳಲಾಗುತ್ತದೆ. ಆರೋಗ್ಯ ಚೆನ್ನಾಗಿರಬೇಕು ಎಂದರೆ ನೀರು ಕುಡಿಯುವುದು ಕೂಡ ಅತ್ಯಗತ್ಯ. ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕನಿಷ್ಠ ಆರರಿಂದ ಎಂಟು ಲೋಟ ನೀರು ಕುಡಿಯುವುದರಿಂದ ಚಯಾಪಚಯ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲ ಹೆಚ್ಚು ನೀರು ಕುಡಿಯುವುದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು, ಇದರಿಂದ ತೂಕ ನಷ್ಟಕ್ಕೂ ಸಹಕಾರಿ. ನೀರಿನ ಸೇವನೆಯು ಚರ್ಮಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ನೀರು ಕುಡಿಯುವ ನಿಮ್ಮ ಈ ಅಭ್ಯಾಸವನ್ನು ಇಂದೇ ಸುಧಾರಿಸಿ, ಇಲ್ಲವೇ...
ನೀರು ಕುಡಿಯುವುದರಿಂದ ಸಿಗುವ ಅದ್ಭುತ ಪ್ರಯೋಜನಗಳಿವು:
* ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹ ಹಾಗೂ ಚರ್ಮ ಎರಡೂ ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು.
* ದೇಹದಲ್ಲಿ ವಿಷಕಾರಿ ಅಂಶಗಳ ಉಪಸ್ಥಿತಿಯು ಎಣ್ಣೆಯುಕ್ತ ಚರ್ಮ, ಮುಖದಲ್ಲಿ ಮೊಡವೆ, ಅಲರ್ಜಿಯಂತಹ ಸಮಸ್ಯೆಗಳಿಗೆ ಅನುವು ಮಾಡಿಕೊಡುತ್ತದೆ. ಆದರೆ, ಹೆಚ್ಚು ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಬರಲು ಸಹಾಯಕವಾಗುತ್ತದೆ.
* ಹೆಚ್ಚಿನ pH ನಿಂದಾಗಿ ಚರ್ಮವು ಒಣಗುತ್ತದೆ. ಹಾಗಾಗಿ ಚರ್ಮದ ಸರಿಯಾದ pH ಮಟ್ಟವನ್ನು ಹೊಂದಿರುವುದು ಬಹಳ ಮುಖ್ಯ. ಚರ್ಮದ pH ಅನ್ನು ಕಾಪಾಡಿಕೊಳ್ಳಲು ಕುಡಿಯುವ ನೀರು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ- Water After Food: ಆಹಾರ ಸೇವನೆ ಬಳಿಕ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗೂ ಇದೆಯೇ? ಇದನ್ನು ತಪ್ಪದೇ ಓದಿ
* ವಯಸ್ಸು ಹೆಚ್ಚಾದಂತೆ ಚರ್ಮವು ತೇವಾಂಶವನ್ನು ಉಳಿಸಿಕೊಳ್ಳುವಲ್ಲಿ ದುರ್ಬಲವಾಗುತ್ತದೆ. ಆದರೆ, ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸುವುದರಿಂದ ಚರ್ಮದಲ್ಲಿ ತೇವಾಂಶ ಕಾಪಾಡಿಕೊಳ್ಳಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.