ಬೆಂಗಳೂರು: ದಲಿತರನ್ನು ಮುಖ್ಯಮಂತ್ರಿ ಮಾಡಲು ಪಕ್ಷ ಸಿದ್ಧವೆಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಜೆಡಿಎಸ್ ಕುಟುಂಬ ರಾಜಕಾರಣ(Dynasty Politics)ದ ವಿರುದ್ಧ ಕಿಡಿಕಾರಿದೆ.
‘ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಿದ್ಧವೆಂದು ಮಾಜಿ #LuckyDipCMHDK ಘೋಷಿಸಿದ್ದಾರೆ. ಜಿಲ್ಲಾಪಂಚಾಯತ್, ವಿಧಾನ ಪರಿಷತ್ ಚುನಾವಣೆಗೂ ಕುಟುಂಬಸ್ಥರನ್ನೇ ಆಯ್ಕೆ ಮಾಡುವ ಜೆಡಿಎಸ್ ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುವ ಮಾತು ಕಾರ್ಯಸಾಧುವೇ? ಕುಮಾರಸ್ವಾಮಿ ಅವರಲ್ಲಿ, ಕಣ್ಣೀರು ಮತ್ತು ಸುಳ್ಳಿಗೆ ಬರವಿಲ್ಲ!’ವೆಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಆಜಾನ್ ವಿರುದ್ಧ ಪ್ರಶಾಂತ್ ಸಂಬರಗಿ ನೇತೃತ್ವದ ನಿಯೋಗದಿಂದ ಕಮೀಷನರ್ಗೆ ದೂರು
‘ಮಾಜಿ #LuckyDipCMHDK ಅವರೇ, ದಲಿತರನ್ನು ಮುಖ್ಯಮಂತ್ರಿಯನ್ನಾಗಿ(Dalit CM) ಮಾಡುವುದಾರೆ ಯಾವ ಪಕ್ಷದಿಂದ ಎಂದು ಮೊದಲು ಸ್ಪಷ್ಟಪಡಿಸಿಬಿಡಿ, ಏಕೆಂದರೆ ನೀವು ಅತಂತ್ರದ ಆಕಾಂಕ್ಷಿ. ಜೆಡಿಎಸ್ ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?’ ಎಂದು ಪ್ರಶ್ನಿಸಿದೆ.
ಜೆಡಿಎಸ್ ಪಕ್ಷದಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಮಾಜಿ #LuckyDipCMHDK ಅವರು ಸ್ಪಷ್ಟನೆ ನೀಡಬಹುದು.
ಅದು ಹೆಸರಿಗೆ ಮಾತ್ರ ಎಂದು ಎಲ್ಲರಿಗೂ ತಿಳಿದಿದೆ. ನಿರ್ಧಾರ ಬರುವುದೆಲ್ಲಾ ಪದ್ಮನಾಭನಗರ ಹಾಗೂ ಬಿಡದಿ ತೋಟದ ಮನೆಯಿಂದ ಎಂಬುದು ಲೋಕ ಸತ್ಯ.
ರಬ್ಬರ್ ಸ್ಟ್ಯಾಂಪ್ಗಳ ಸೃಷ್ಟಿಯಲ್ಲಿ ನೀವು ಎತ್ತಿದ ಕೈ ಅಲ್ಲವೇ?
— BJP Karnataka (@BJP4Karnataka) April 6, 2022
‘ಜೆಡಿಎಸ್ ಪಕ್ಷ(JDS Party)ದಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಮಾಜಿ #LuckyDipCMHDK ಅವರು ಸ್ಪಷ್ಟನೆ ನೀಡಬಹುದು. ಅದು ಹೆಸರಿಗೆ ಮಾತ್ರ ಎಂದು ಎಲ್ಲರಿಗೂ ತಿಳಿದಿದೆ. ನಿರ್ಧಾರ ಬರುವುದೆಲ್ಲಾ ಪದ್ಮನಾಭನಗರ ಹಾಗೂ ಬಿಡದಿ ತೋಟದ ಮನೆಯಿಂದ ಎಂಬುದು ಲೋಕ ಸತ್ಯ. ರಬ್ಬರ್ ಸ್ಟ್ಯಾಂಪ್ಗಳ ಸೃಷ್ಟಿಯಲ್ಲಿ ನೀವು ಎತ್ತಿದ ಕೈ ಅಲ್ಲವೇ?’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: BJP Foundation Day:ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ
ಮಾಜಿ #LuckyDipCMHDK ಅವರೇ,
ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾರೆ ಯಾವ ಪಕ್ಷದಿಂದ ಎಂದು ಮೊದಲು ಸ್ಪಷ್ಟಪಡಿಸಿಬಿಡಿ, ಏಕೆಂದರೆ ನೀವು ಅತಂತ್ರದ ಆಕಾಂಕ್ಷಿ.
ಜೆಡಿಎಸ್ ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
— BJP Karnataka (@BJP4Karnataka) April 6, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.