Viral Video: ವಿಗ್ ಅಡಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತು ಅಡಗಿಸಿಟ್ಟಿದ್ದ ಭೂಪ, ಮುಂದೆ...

Viral Video: ಕಳ್ಳಸಾಗಣೆ ಮಾಡುವಾಗ ಕಳ್ಳಸಾಗಾಣಿಕೆದಾರರು ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಅಕ್ರಮ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಾರೆ. ಲಕ್ನೋ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದೆ.

Written by - Yashaswini V | Last Updated : Apr 5, 2022, 02:32 PM IST
  • ವಿಮಾನ ನಿಲ್ದಾಣದಲ್ಲಿ ವಿಗ್‌ನಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿ
  • ಒಟ್ಟು 291 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು
  • ಚಿನ್ನದ ಬೆಲೆ ಸುಮಾರು 15 ಲಕ್ಷ ರೂ.
Viral Video: ವಿಗ್ ಅಡಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತು ಅಡಗಿಸಿಟ್ಟಿದ್ದ ಭೂಪ, ಮುಂದೆ... title=
Gold Smuggling

Viral Video: ಪ್ರಪಂಚದಾದ್ಯಂತ ಮಾದಕವಸ್ತು ಕಳ್ಳಸಾಗಣೆದಾರರು ಅಕ್ರಮ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಹಲವು ವಿಚಿತ್ರ ತಂತ್ರಗಳನ್ನು ಬಳಸುತ್ತಾರೆ ಎಂಬುದರ ಕುರಿತು ನಾವು ಆಗಾಗ್ಗೆ ಸುದ್ದಿಗಳನ್ನು ಕೇಳುತ್ತೇವೆ. ಇದೀಗ ಲಕ್ನೋ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಸೋಮವಾರ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರಿಂದ ಸುಮಾರು 15 ಲಕ್ಷ ಮೌಲ್ಯದ 291 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಈ ಕಳ್ಳಸಾಗಣೆದಾರ ವಿಗ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. 

ಇದನ್ನೂ ಓದಿ- Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ

ವಿಮಾನ ನಿಲ್ದಾಣದಲ್ಲಿ ವಿಗ್‌ನಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ :
ಐಎಎನ್‌ಎಸ್ ವರದಿಯ ಪ್ರಕಾರ, ಶಾರ್ಜಾದಿಂದ ಲಕ್ನೋ ವಿಮಾನ ನಿಲ್ದಾಣವನ್ನು (Airport) ತಲುಪಿದ ನಂತರ ಪ್ರಯಾಣಿಕನನ್ನು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಯಿತು. ಕಸ್ಟಮ್ಸ್ ಅಧಿಕಾರಿಯೊಬ್ಬರು,  "ಪ್ರಯಾಣಿಕರ ವಿವರಗಳನ್ನು ಆಧರಿಸಿ, ಆರೋಪಿಯನ್ನು ಗ್ರೀನ್ ಚಾನೆಲ್‌ನಿಂದ ಹೊರಡುವಾಗ ನಿಲ್ಲಿಸಲಾಯಿತು. ಅವರ ವೈಯಕ್ತಿಕ ಹುಡುಕಾಟದಲ್ಲಿ, ಅವರು ವಿಗ್ ಧರಿಸಿರುವುದು ಕಂಡುಬಂದಿದೆ. ಆತನ ವಿಗ್ ತೆಗೆದಾಗ ಕಪ್ಪು ಟೇಪ್ ನಿಂದ ತಯಾರಿಸಿದ ಪಾಲಿಥಿನ್ ತಲೆಗೆ ಅಂಟಿಕೊಂಡಿರುವುದು" ಕಂಡು ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ- Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!

ಚಿನ್ನದ ಬೆಲೆ 15 ಲಕ್ಷ ರೂ. :
ಆ ಪಾಲಿಥಿನ್ ನಿಂದ ಒಟ್ಟು 291 ಗ್ರಾಂ ಚಿನ್ನ ಹೊರಬಿದ್ದಿದ್ದು, ಇದರ ಬೆಲೆ 15,42,300 ರೂ. ಎಂದು ತಿಳಿದುಬಂದಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಈ ಚಿನ್ನವನ್ನು (Gold) ಕಸ್ಟಮ್ಸ್ ಆಕ್ಟ್ ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ಪ್ರಯಾಣಿಕನನ್ನು ಬಂಧಿಸಲಾಗಿದೆ. ಅಧಿಕಾರಿಗಳು ಪ್ರಯಾಣಿಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಆರೋಪಿಗೆ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲದ ಕಾರಣ, ಆತನ ಮನವಿಯನ್ನು ಆಲಿಸಿದ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News