ಕೊರೊನಾ(Corona) ಪ್ರಕರಣ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ನಾಲ್ಕನೇ ಅಲೆಯ ಅಬ್ಬರ ಚೀನಾ (China)ದ ಪ್ರಮುಖ ನಗರ ಶಾಂಘೈನಲ್ಲಿ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ1,366 ಹೊಸ ತಳಿಯ ( Omicron BA.2) ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಶಾಂಘೈ ನಗರವೊಂದರಲ್ಲಿಯೇ 425 ಪ್ರಕರಣ ದಾಖಲಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (National Health Commission)ಸೋಮವಾರ (ಏಪ್ರಿಲ್ 4) ಪ್ರಕಟಗೊಳಿಸಿದ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: Fourth wave of Covid: ನಿಮ್ಮ ಹಲ್ಲುಗಳು/ಒಸಡುಗಳಲ್ಲಿನ ಈ ಸಮಸ್ಯೆಗಳು ಕೋವಿಡ್‌ನ ಲಕ್ಷಣಗಳಾಗಿರಬಹುದು!
ಇನ್ನು ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಕಾರ್ಯಕರ್ತರು, ಸೇನಾದಳ ಸೇರಿದಂತೆ ಸುಮಾರು 26 ಮಿಲಿಯನ್ ಜನರನ್ನು ಕೊರೊನಾ ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿತ್ತು. ಅದರಂತೆ ಟೆಸ್ಟ್ ನಡೆಸಿದ ಬಳಿಕ 1,366 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ.
ಇದನ್ನೂ ಓದಿ: ಕರೋನಾದ ಈ ಹೊಸ ರೂಪಾಂತರವು ಒಮಿಕ್ರಾನ್‌ನಿಂದ ಎಷ್ಟು ಅಪಾಯಕಾರಿ ? WHO ಹೇಳಿದ್ದೇನು ?
ಕಳೆದ ಸೋಮವಾರದಿಂದ ಶಾಂಘೈ (Shanghai)ನಲ್ಲಿ ಎರಡು ಹಂತದ ಪ್ರಾಯೋಗಿಕ ಲಾಕ್‌ಡೌನ್ ಅನ್ನು ಪ್ರಾರಂಭಿಸಲಾಗಿದೆ. ಅಷ್ಟೇ ಅಲ್ಲದೆ, ಈಗಾಗಲೇ ಚೀನಾದಲ್ಲಿ 8,581 ಹೊಸ ಲಕ್ಷಣರಹಿತ ಕೋವಿಡ್ -19 ಪ್ರಕರಣಗಳನ್ನು ದಾಖಲಾಗಿದೆ, ಈ ಹಿನ್ನೆಲೆಯಲ್ಲಿ ಶಾಂಘೈನ ಜನರಿಗೆ ಅಲ್ಲಿನ ಫಿನಾನ್ಶಿಯಲ್ ಅಧಿಕಾರಿಗಳು, ಕೋವಿಡ್ -19 ಆಂಟಿಜೆನ್ ಟೆಸ್ಟ್ (Covid-19 Antigen Test) ಬಳಸಿಕೊಂಡು ಕೊರೊನಾ ಪರೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ.
ಈ ಮಧ್ಯೆ, ಚೀನಾದಲ್ಲಿ ಕೋವಿಡ್ -19ನಿಂದ ಸಂಭವಿಸಿರುವ ಸಾವಿನ ಸಂಖ್ಯೆ 4,638ಕ್ಕೆ ಏರಿದೆ. ಜೊತೆಗೆ 1,848 ಮಂದಿ ಗುಣಮುಖರಾಗಿದ್ದು, 25,724 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ