ಶ್ರೀನಗರ್: ಗುರುವಾರದಂದು ಹಿರಿಯ ಪತ್ರಕರ್ತ ಮತ್ತು ರೈಸಿಂಗ್ ಕಾಶ್ಮೀರ್ ಪತ್ರಿಕೆ ಸಂಪಾದಕ ಶುಜಾತ ಬುಖಾರಿಯನ್ನು ಇಲ್ಲಿನ ಲಾಲ್ ಚೌಕ್ ಬಳಿ ಇರುವ ಪ್ರೆಸ್ ಕಾಲೋನಿ ಹತ್ತಿರ ಗುಂಡಿಕ್ಕಿಕೊಲ್ಲಲಾಗಿತ್ತು. ಇದೇ ಸಂದರ್ಭದಲ್ಲಿ ಅವರ ರಕ್ಷಣಾ ಅಧಿಕಾರಿಯನ್ನು ಸಹ ಹತ್ಯೆಗೈಯಲಾಗಿತ್ತು.
Srinagar Police seeks help of the general public to identify the suspects involved in yesterday's terror attack in Press Colony that killed editor of Rising Kashmir newspaper Shujaat Bukhari. Police releases photographs of the suspect from CCTV footage #JammuAndKashmir pic.twitter.com/ggJhzH7IiJ
— ANI (@ANI) June 14, 2018
ಈಗ ಜಮ್ಮು ಮತ್ತು ಕಾಶ್ಮೀರ್ ದ ಪೊಲೀಸರು ಶಂಕಿತ ಹಂತಕರ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಸಾರ್ವಜನಿಕರಿಗೆ ಈ ಕುರಿತಾಗಿ ಮಾಹಿತಿ ಇದ್ದರೆ ಅದನ್ನು ಹಂಚಿಕೊಳ್ಳಲು ಮನವಿ ಮಾಡಿದ್ದಾರೆ. ಈ ಚಿತ್ರಗಳನ್ನು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಇದರಲ್ಲಿ ಬೈಕ್ ಓಡಿಸುವವನೊಬ್ಬ ಹೆಲ್ಮೆಟ್ ಧರಿಸಿದ್ದಾನೆ, ಮಧ್ಯದಲ್ಲಿರುವವನು ಮುಖವನ್ನು ಅಡಗಿಸಿಕೊಂಡಿದ್ದಾನೆ. ಕೊನೆಯದಲ್ಲಿರುವವನು ಮುಖಕ್ಕೆ ಮುಸುಕು ಧರಿಸಿದ್ದಾನೆ. ಈ ಇನ್ನೊಂದು ಚಿತ್ರದಲ್ಲಿ ಈ ಬೈಕ್ ಸವಾರರು ಬ್ಯಾಗ್ ನಲ್ಲಿ ಬಹುಶಃ ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಶುಜಾತ್ ಬುಕಾರಿ ಕಾಶ್ಮೀರದಲ್ಲಿ ಶಾಂತಿ ಪಾಲನೆ ಹಲವಾರು ಕಾರ್ಯಕ್ರಮ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಮಹತ್ತರ ಪಾತ್ರವನ್ನು ವಹಿಸಿದ್ದರು.ಅಲ್ಲದೆ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿಯೂ ಸಹಿತ ಅವರು ಕಾರ್ಯ ನಿವಹಿಸಿದ್ದರು ಎಂದು ಹೇಳಲಾಗಿದೆ.