Good News: ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ, ಈ ವರದಿ ಓದಿ

Edible Oil  Prices: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ (Petrol-Diesel Prices) ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಈ ಮಧ್ಯೆ, ಖಾದ್ಯ ತೈಲದ ಬೆಲೆಗಳ ಬಗ್ಗೆ ನೆಮ್ಮದಿಯ ಸುದ್ದಿ ಹೊರಬಂದಿದೆ.  

Written by - Nitin Tabib | Last Updated : Apr 3, 2022, 06:19 PM IST
  • ದೇಶಾದ್ಯಂತ ನಿರಂತರ ಏರಿಕೆಯಾಗುತ್ತಿರುವ ಹಣದುಬ್ಬರ
  • ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆ
  • ಆದರೂ ಕೂಡ ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ ಪ್ರಕಟ
Good News: ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ, ಈ ವರದಿ ಓದಿ title=
Edible Prices In India

Edible Oil Prices Update - ದೇಶದಲ್ಲಿ ಹಣದುಬ್ಬರದ (Inflation) ಸ್ಥಿತಿ ನಿರಂತರವಾಗಿ ಬಿಗಡಾಯಿಸುತ್ತಲೇ ಇದೆ. ಆದರೆ ಈ ಮಧ್ಯೆ, ಸಾಸಿವೆ ಎಣ್ಣೆ ಸೇರಿದಂತೆ ಖಾದ್ಯ ತೈಲಗಳ (Edible Oil Prices In India) ಬೆಲೆಗಳನ್ನು ಶುಕ್ರವಾರ ರಾತ್ರಿ ಮತ್ತೆ ಕಡಿತಗೊಳಿಸಿರುವುದರಿಂದ ಶ್ರೀಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಗೊಂಡಿದೆ. ಚಿಕಾಗೋದಲ್ಲಿ ಶೇ. 1.5 ರಷ್ಟು ವಿನಿಮಯ ವೇಗ ದಾಖಲಾಗಿದ್ದು. ಅದರ ಪರಿಣಾಮವು ಪೂರೈಕೆಯ ಮೇಲೂ ಕಂಡುಬಂದಿದೆ ಮತ್ತು ಪೂರೈಕೆಯಲ್ಲಿ ಹೆಚ್ಚಳದಿಂದಾಗಿ, ಬೆಲೆಗಳು ಕುಸಿತ ಕಂಡಿವೆ.

ಸಾಕಷ್ಟು ಪೂರೈಕೆ
ಮಾರುಕಟ್ಟೆಗಳಲ್ಲಿ ಸಾಸಿವೆ ಪೂರೈಕೆ ಹೆಚ್ಚಾಗಲು ಆರಂಭಿಸಿದೆ. ಶುಕ್ರವಾರ 5 ಲಕ್ಷ ಮೂಟೆ ಸಾಸಿವೆ ಸರಬರಾಜಾಗಿದೆ. ಮತ್ತೊಂದೆಡೆ ಶನಿವಾರ ಈ ಪೂರೈಕೆ 7 ಲಕ್ಷ ಮೂಟೆಗೆ ಏರಿಕೆಯಾಗಿದೆ. ಇದರಿಂದ ಸಾಸಿವೆ ಬೆಲೆ ಕ್ವಿಂಟಲ್ ಗೆ 25 ರೂ.ಇಳಿಕೆಯಾಗಿದೆ ಇಂತಹ ಪರಿಸ್ಥಿತಿಯಲ್ಲಿ ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಗಳು ಗೋಚರಿಸತೊಡಗಿವೆ.

ಉತ್ತರ ಪ್ರದೇಶದಲ್ಲಿಯೂ ಕೂಡ ಬೆಲೆ ಕುಸಿತ
ದೇಶದಲ್ಲಿ ಉತ್ತರ ಪ್ರದೇಶದ ಬಗ್ಗೆ ಹೇಳುವುದಾದರೆ, ಸುದ್ದಿ ಪ್ರಕಾರ, ಏಪ್ರಿಲ್ 3 ರಂದು ಇಲ್ಲಿ ಸಾಸಿವೆ ಎಣ್ಣೆಯ ಬೆಲೆ 157 ರೂ.ಪ್ರತಿ ಲೀಟರ್ ಆಗಿತ್ತು, ಆದರೆ ಕಳೆದ ವರ್ಷ ಸಾಸಿವೆ ಎಣ್ಣೆ ಬೆಲೆ ಗರಿಷ್ಠ 210 ರೂ.ಗೆ ತಲುಪಿತ್ತು. ಗರಿಷ್ಟ ಮಟ್ಟದ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಇದೀಗ ಸಾಸಿವೆ ಎಣ್ಣೆ ಬೆಲೆಯಲ್ಲಿ 50 ರೂ.ಗೂ ಇಳಿಕೆಯಾಗಿದೆ ಎಂದರೆ ತಪ್ಪಾಗಲಾರದು

ಇದೇ ವೇಳೆ ಮುಂದಿನ ವಾರಗಳಲ್ಲಿಯೂ ಕೂಡ ಬೆಲೆ ಕುಸಿತ ಮುಂದುವರೆಯುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದು, ಇದು ಜನಸಾಮಾನ್ಯರಿಗೆ ಸಂತಸದ ಸುದ್ದಿ ಎಂದೇ ಹೇಳಬಹುದು. ವಿಶೇಷವೆಂದರೆ ಸಾಸಿವೆ ಎಣ್ಣೆ ಮಾತ್ರವಲ್ಲದೆ ಶೇಂಗಾ ಎಣ್ಣೆ ಬೆಲೆಯೂ ಕುಸಿತ ಕಂಡಿದ್ದು, ಬೇಡಿಕೆ ದುರ್ಬಲವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಸಗಟು ಬೆಲೆಯನ್ನು ತಿಳಿದುಕೊಳ್ಳೋಣ ಬನ್ನಿ,

ಪ್ರಸ್ತುತ ದರಗಳು ಈ ರೀತಿ ಇವೆ
ಸಾಸಿವೆ ಎಣ್ಣೆ ಕಾಳುಗಳು - 7,500-7,550 (ಶೇ. 42 ಸ್ಥಿತಿ ಬೆಲೆ) ರೂ.
ನೆಲಗಡಲೆ - 6,725 - 6,820 ರೂ.
ಶೇಂಗಾ ಎಣ್ಣೆ ಗಿರಣಿ ವಿತರಣೆ (ಗುಜರಾತ್) - 15,750 ರೂ.
ಶೇಂಗಾ ಸಾಲ್ವೆಂಟ್ ರಿಫೈನ್ಡ್ ಆಯಿಲ್ 2,610 ರೂ.- 2,800 ರೂ.
ಸಾಸಿವೆ ಎಣ್ಣೆ ದಾದ್ರಿ - ಕ್ವಿಂಟಲ್‌ಗೆ 15,000 ರೂ.
ಸಾಸಿವೆ ಪಕ್ಕಾ ಗಾಣದ ಎಣ್ಣೆ- ಪ್ರತಿ ಟಿನ್‌ಗೆ 2,375-2,450 ರೂ.
ಸಾಸಿವೆ ಕಚ್ಚಾ ಗಾಣದ ಎಣ್ಣೆ- ಪ್ರತಿ ಟಿನ್ ಗೆ 2,425-2,525 ರೂ.
ಸೆಸೇಮ್ ಆಯಿಲ್ ಮಿಲ್ ವಿತರಣೆ - 17,000-18,500 ರೂ.

ಇದನ್ನೂ ಓದಿ-Honda: 1 ಕೋಟಿಗೂ ಅಧಿಕ ಭಾರತೀಯರ ಈ ಅಚ್ಚುಮೆಚ್ಚಿನ ಬೈಕ್ ಅನ್ನು ಕೇವಲ 5999 ಪಾವತಿಸಿ ಮನೆಗೆ ಕೊಂಡೊಯ್ಯಿರಿ!

ಸೋಯಾಬೀನ್ ಆಯಿಲ್ ಮಿಲ್ ಡೆಲಿವರಿ ದೆಹಲಿ - 15,750 ರೂ.
ಸೋಯಾಬೀನ್ ಮಿಲ್ ಡೆಲಿವರಿ ಇಂದೋರ್ - 15,400 ರೂ.
ಸೋಯಾಬೀನ್ ಆಯಿಲ್ ಡೇಗಮ್, ಕಾಂಡ್ಲಾ - 14,100 ರೂ.
ಸಿಪಿಒ ಎಕ್ಸ್-ಕಾಂಡ್ಲಾ - 13,800 ರೂ.
ಹತ್ತಿಬೀಜ ಗಿರಣಿ ವಿತರಣೆ (ಹರಿಯಾಣ) - 14,850 ರೂ.
ಪಾಮೊಲಿನ್ RBD, ದೆಹಲಿ - 15,350 ರೂ.
ಪಾಮೊಲಿನ್ ಎಕ್ಸ್-ಕಾಂಡ್ಲಾ - ರೂ 14,250 (ಜಿಎಸ್‌ಟಿ ಇಲ್ಲದೆ).
ಸೋಯಾಬೀನ್ ಧಾನ್ಯ - 7,625-7,675 ರೂ.
ಸೋಯಾಬೀನ್ ಸಡಿಲ 7,325-7,425 ರೂ.
ಮಕ್ಕಾ ಖಾಲ್ (ಸರಿಸ್ಕಾ) ರೂ.4,000.

ಇದನ್ನೂ ಓದಿ-Royal Enfield Electric: ಶೀಘ್ರದಲ್ಲಿಯೇ ರಾಯಲ್ ಎನ್ಫಿಲ್ದ್ ನಿಂದ Royal Enfield ಇಲೆಕ್ಟ್ರಿಕ್ ಬಿಡುಗಡೆ

ಮತ್ತೊಂದೆಡೆ, ಪೆಟ್ರೋಲ್, ಡೀಸೆಲ್ ಬೆಲೆ (Petrol-Diesel Prices) ಏರಿಕೆಯಿಂದ ಸರಕು ಸಾಗಣೆ ದರ ನಿರಂತರವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇತ್ತು, ಆದರೆ ಪ್ರಸ್ತುತ ಖಾದ್ಯ ತೈಲಗಳ ಬೆಲೆಯಲ್ಲಿನ ಇಳಿಕೆಯಿಂದ ಶ್ರೀಸಾಮಾನ್ಯನಿಗೆ ನೆಮ್ಮದಿ ಸಿಗುವ ನಿರೀಕ್ಷೆ ಸ್ಪಷ್ಟವಾಗಿ ಗೋಚರಿಸತೊಡಗಿದೆ ಎಂಬುದು ಮಾತ್ರ ನಿಜ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News