ಏಪ್ರಿಲ್ ನಲ್ಲಿ ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ

ಹಿಂದೂ ಪಂಚಾಂಗದ ಪ್ರಕಾರ,ಏಪ್ರಿಲ್  29  2022 ರವರೆಗೆ, ಶನಿಯ  ಸಾಡೇಸಾತಿಯ  ಪರಿಣಾಮ ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯ ಜನರ ಮೇಲೆ ಇರುತ್ತದೆ. ಏಪ್ರಿಲ್ 29 ರಂದು, ಶನಿಯು ಕುಂಭ ರಾಶಿಯಲ್ಲಿ ಸಂಕ್ರಮಿಸಿದ ತಕ್ಷಣ, ಶನಿಯ  ಸಾಡೇ ಸಾತಿ ಮೀನ ರಾಶಿಯವರಿಗೆ ಪ್ರಾರಂಭವಾಗಲಿದೆ.

Written by - Ranjitha R K | Last Updated : Mar 29, 2022, 09:18 AM IST
  • ಶನಿ ರಾಶಿಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
  • ಶನಿ ರಾಶಿಯ ಚಿಹ್ನೆಯ ಬದಲಾವಣೆಯೊಂದಿಗೆ ಶನಿ ಸಾಡೇಸಾತಿ ಪ್ರಾರಂಭವಾಗುತ್ತದೆ.
  • ಶನಿ ಸಂಕ್ರಮಣ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಏಪ್ರಿಲ್ ನಲ್ಲಿ ಈ ರಾಶಿಯವರ  ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ  title=
ಶನಿ ರಾಶಿಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. (file photo)

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಶನಿ ರಾಶಿಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ (Shani transit). ಶನಿ ಸಂಕ್ರಮಣದ ಪರಿಣಾಮವು ಐದು ರಾಶಿಚಕ್ರ ಚಿಹ್ನೆಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುತ್ತದೆ. ಶನಿಯ ಸಾಡೇಸಾತಿ  ಶನಿಯ ರಾಶಿಯ ಚಿಹ್ನೆಯ ಬದಲಾವಣೆಯೊಂದಿಗೆ ಪ್ರಾರಂಭವಾಗುತ್ತದೆ (shani sadesati effects). ಆದರೆ ಶನಿ ಧೈಯಾವು ಇನ್ನೂ ಕೂಡಾ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಹಾಗೆಯೇ ಉಳಿದಿದೆ. ಏಪ್ರಿಲ್ 29 ರಂದು ಶನಿ ಗ್ರಹವು ತನ್ನದೇ ಆದ ಕುಂಭ ರಾಶಿಯಲ್ಲಿ ಸಂಕ್ರಮಿಸಲಿದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 

ಈ ರಾಶಿಗಳ  ಮೇಲಿರುತ್ತದೆ  ಸಾಡೇಸಾತಿಯ ಪರಿಣಾಮ  :
ಹಿಂದೂ ಪಂಚಾಂಗದ ಪ್ರಕಾರ,ಏಪ್ರಿಲ್  29  2022 ರವರೆಗೆ, ಶನಿಯ  ಸಾಡೇಸಾತಿಯ  ಪರಿಣಾಮ ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯ ಜನರ ಮೇಲೆ ಇರುತ್ತದೆ (sadesati effects on zodiac). ಏಪ್ರಿಲ್ 29 ರಂದು, ಶನಿಯು ಕುಂಭ ರಾಶಿಯಲ್ಲಿ (Aquarius) ಸಂಕ್ರಮಿಸಿದ ತಕ್ಷಣ, ಶನಿಯ  ಸಾಡೇ ಸಾತಿ ಮೀನ ರಾಶಿಯವರಿಗೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಧನು ರಾಶಿಯ (Sagitarius) ಜನರು ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತಾರೆ. ಶನಿ ಸಂಕ್ರಮಣದೊಂದಿಗೆ ಮಕರ ರಾಶಿಯವರಿಗೆ  ಶನಿ ಸಾಡೇ ಸಾತಿಯ ಕೊನೆಯ ಹಂತವು ಪ್ರಾರಂಭವಾಗುತ್ತದೆ. ಕುಂಭ ರಾಶಿಯ (sagitarius)ಜನರ ಮೇಲೆ  ಎರಡನೇ ಹಂತದ ಪ್ರಭಾವ ಬೀರಲು ಆರಂಭವಾಗುತ್ತದೆ. ಈ  ಸಮಯದಲ್ಲಿ, ಈ ರಾಶಿಯವರು ಆರ್ಥಿಕ, ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ : ನವರಾತ್ರಿಯ ವೇಳೆ ನೀವೂ ಉಪವಾಸ ಮಾಡುತ್ತೀರಾ? ಕಲ್ಲು ಉಪ್ಪಿಗೆ ಸಂಬಂಧಿಸಿದ ಈ ಸತ್ಯ ತಿಳಿಯಿರಿ

ಶನಿಯು ಮತ್ತೊಮ್ಮೆ  ಜುಲೈ 12, 2 022 ರಂದು ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ರೀತಿ ಹಿಮ್ಮುಖ ಚಲನೆಯೊಂದಿಗೆ ಶನಿಯು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಶನಿಯು ಮಕರ ರಾಶಿ ಪ್ರವೇಶಿಸಿದಾಗ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ಧೈಯಾ (Shani Dhaiya) ಪ್ರಾರಂಭವಾಗಲಿದೆ. ಶನಿಯು ಜನವರಿ 17, 2023 ರವರೆಗೆ ಈ ಸ್ಥಿತಿಯಲ್ಲಿರುತ್ತಾನೆ.

ಶನಿದೇವನನ್ನು ಮೆಚ್ಚಿಸಲು ಪರಿಹಾರಗಳು : 
1. ಶನಿ ದೇವನನ್ನು (Shani deva) ಮೆಚ್ಚಿಸಲು, ಶನಿವಾರದಂದು  ಉದ್ದಿನ ಬೇಳೆ, ಕಪ್ಪು ಬಟ್ಟೆ ಅಥವಾ ಕಪ್ಪು ಕಾಳುಗಳಂತಹ ವಸ್ತುಗಳನ್ನು ದಾನ ಮಾಡಿ.
2. ಶನಿ ದೆಸೆಯಿಂದ ಬಳಲುತ್ತಿರುವವರು ಶನಿವಾರದಂದು ಅಶ್ವಥ ಮರದ (Peepal tree) ಕೆಳಗೆ  ಎಳ್ಳು ಎಣ್ಣೆಯ ದೀಪವನ್ನು ಹಚ್ಚಬೇಕು.
3. ಶನಿವಾರದಂದು ಶನಿ ಮಂತ್ರಗಳನ್ನು ಪಠಿಸುವುದು ಸಹ ಪ್ರಯೋಜನಕಾರಿಯಾಗಿರುತ್ತದೆ.  
4. ಶನಿಯ ದೆಸೆಯಿಂದ (Shani dese) ಬಳಲುತ್ತಿರುವವರು ಶನಿವಾರದಂದು ಆಂಜನೇಯನನ್ನು  ಪೂಜಿಸಬೇಕು.

ಇದನ್ನೂ ಓದಿ : Money Tips : ಸಾಯಂಕಾಲ ಅಪ್ಪಿತಪ್ಪಿಯೂ ಇಂತಹ ಕೆಲಸ ಮಾಡಬೇಡಿ, ಧನ-ಆರೋಗ್ಯ-ಗೌರವಕ್ಕೆ ಧಕ್ಕೆಯಾಗುತ್ತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News