Oscars 2022 Update: ಆಸ್ಕರ್ ಪ್ರಶಸ್ತಿಗಳ ಘೋಷಣೆ, Will Smith ಹಾಗೂ Jessica Chastain ಅತ್ಯುತ್ತಮ ನಟ, ನಟಿ ಪ್ರಶಸ್ತಿ

Oscars 2022 Update: ಆಸ್ಕರ್ ಪ್ರಶಸ್ತಿಗಳ ಘೋಷಣೆ ಆರಂಭವಾಗಿದೆ. ಈ ವರ್ಷವೂ ಕೂಡ 'ಡ್ಯೂನ್' ಚಿತ್ರದ ಜಲ್ವಾ ಮುಂದುವರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.  

Written by - Nitin Tabib | Last Updated : Mar 28, 2022, 08:33 PM IST
  • 2022 ಆಸ್ಕರ್ ಪ್ರಶಸ್ತಿ ಪ್ರಕಟಣೆ ಆರಂಭ
  • ವಿಲ್ ಸ್ಮಿತ್ ಅತ್ಯುತ್ತಮ ನಟ
  • CODA ಅತ್ಯುತ್ತಮ ಚಿತ್ರ

Trending Photos

Oscars 2022 Update: ಆಸ್ಕರ್ ಪ್ರಶಸ್ತಿಗಳ ಘೋಷಣೆ, Will Smith ಹಾಗೂ Jessica Chastain ಅತ್ಯುತ್ತಮ ನಟ, ನಟಿ ಪ್ರಶಸ್ತಿ title=
Oscar Awards 2022 Updates

Oscar Awards 2022, ಇದು ಸಿನಿ ಜಗತ್ತಿನ ಅತಿದೊಡ್ಡ ಸಮಾರಂಭ ಎಂದೇ ಪರಿಗಣಿಸಲಾಗುತ್ತದೆ. ಇದೇ ವೇಳೆ, 2021 ರಲ್ಲಿ 94 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಅತಿ ಹೆಚ್ಚು ಚರ್ಚೆಯನ್ನು ಬಾಚಿದ ಚಲನಚಿತ್ರ ಎಂದರೆ ಅದುವೇ 'ಡ್ಯೂನ್' ಚಿತ್ರ ಈ ಚಿತ್ರ 2022 ರ ಆಸ್ಕರ್ ಅವಾರ್ಡ್ಸ್ (Oscar Awards 2022) ನಲ್ಲಿ ಒಟ್ಟು 4 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದರಿಂದ CODA ಚಿತ್ರ  ಯಾವುದಕ್ಕೂ ಹಿಂದೆ ಬಿದ್ದಿಲ್ಲ. ಚಿತ್ರದ ನಟ ಟ್ರಾಯ್ ಕೋಟ್ಸೂರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಲ್ಲದೆ, ವಿವಿಧ ವಿಭಾಗಗಳಲ್ಲಿ ವಿಜೇತರ ಹೆಸರನ್ನು ಬಹಿರಂಗಪಡಿಸಲಾಗಿದೆ.

ಅತಿ ದೊಡ್ಡ ಆಸ್ಕರ್ ವಿಜೇತ ಚಿತ್ರ
ಆಸ್ಕರ್ 2022 ರಿಂದ ಇದುವರೆಗೆ ಬಂದಿರುವ ವರದಿಗಳ ಪ್ರಕಾರ, 'ಡ್ಯೂನ್' ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರವು 6 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ, ಅವುಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಸಮಾರಂಭದ ಆರಂಭದಲ್ಲಿಯೇ ಘೋಶಿಸಲಾಗಿದೆ. DUNE ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡರು ಕೂಡ ಅದರ ತೆಕ್ಕೆಗೆ ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಧ್ವನಿ, ಅತ್ಯುತ್ತಮ ಚಲನಚಿತ್ರ ಸಂಕಲನ, ಅತ್ಯುತ್ತಮ ವಿಸ್ಯುವಲ್ ಎಫೆಕ್ಟ್, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಛಾಯಾಗ್ರಹಣ ಮುತಾದ ಪ್ರಶಸ್ತಿಗಳು ಬಿದ್ದಿವೆ.

ಇದನ್ನೂ ಓದಿ-"ಕೆಜಿಎಫ್‌ನಲ್ಲಿ ಗರುಡನ ಕೊಲೆ ಬಳಿಕ ಮುಂದೇನಾಯ್ತು? ನೀವು ಓದತೀರಾ..?"

ವಿಜೇತರ ಪಟ್ಟಿ ಇಂತಿದೆ
ಇದಲ್ಲದೆ ಸ್ಟೀವನ್ ಸ್ವಿರ್ಬರ್ಗ್ ಅವರ 'ವೆಸ್ಟ್ ಸೈಡ್ ಸ್ಟೋರಿ'ಗಾಗಿ ಅರಿಯಾನಾ ಡಿಬೋಸ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.  ಇದುವರೆಗೆ ಪ್ರಕಟಗೊಂಡ ವಿಜೇತರ ಪಟ್ಟಿ ಇಂತಿದೆ,
>> ಅತ್ಯುತ್ತಮ ಚಿತ್ರ: CODA
>> ಅತ್ಯುತ್ತಮ ನಟಿ: ಜೆಸ್ಸಿಕಾ ಚಸ್ಟೈನ್ (ದಿ ಐಸ್ ಆಫ್ ಟ್ಯಾಮಿ ಫಾಯೆ)
>> ಅತ್ಯುತ್ತಮ ನಟ: ವಿಲ್ ಸ್ಮಿತ್ (ಕಿಂಗ್ ರಿಚರ್ಡ್)
>> ಅತ್ಯುತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್ (ದ ಪವರ್ ಆಫ್ ದಿ ಡಾಗ್)
>> ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್ (ವೆಸ್ಟ್ ಸೈಡ್ ಸ್ಟೋರಿ)
>> ಅತ್ಯುತ್ತಮ ಪೋಷಕ ನಟ: ಟ್ರಾಯ್ ಕೋಟ್ಸೂರ್ (CODA)
>> ಅತ್ಯುತ್ತಮ ಮೂಲ ಚಿತ್ರಕಥೆ - ಬೆಲ್‌ಫಾಸ್ಟ್
>> ಅತ್ಯುತ್ತಮ ಅಳವಡಿಸಿದ ಚಿತ್ರಕಥೆ: CODA
>> ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ: ಡ್ರೈವ್ ಮೈ ಕಾರ್ (ಜಪಾನ್)
>> ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಎನ್ಕಾಂಟೊ
>> ಅತ್ಯುತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
>> ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಕ್ವೀನ್ ಆಫ್ ಬಾಸ್ಕೆಟ್‌ಬಾಲ್
>> ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ದಿ ವಿಂಡ್‌ಶೀಲ್ಡ್ ವೈಪರ್
>> ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ದಿ ಲಾಂಗ್ ಗುಡ್‌ಬೈ

ಇದನ್ನೂ ಓದಿ -KGF verse:ಕೆಜಿಎಫ್‌2 ಟ್ರೇಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸರ್ಪ್ರೈಸ್!

>> ಅತ್ಯುತ್ತಮ ಮೂಲ ಸ್ಕೋರ್: ಡ್ಯೂನ್
>> ಅತ್ಯುತ್ತಮ ಛಾಯಾಗ್ರಹಣ: ಡ್ಯೂನ್
>> ಅತ್ಯುತ್ತಮ ವಸ್ತ್ರ ವಿನ್ಯಾಸ: ಕ್ರುಯೆಲ್ಲಾ
>> ಅತ್ಯುತ್ತಮ ನಿರ್ಮಾಣ ವಿನ್ಯಾಸ: ಡ್ಯೂನ್
>> ಅತ್ಯುತ್ತಮ ಮೇಕಪ್ ಮತ್ತು ಕೂದಲು: ದಿ ಐಸ್ ಆಫ್ ಟಮ್ಮಿ ಫಾಯೆ
>> ಅತ್ಯುತ್ತಮ ಧ್ವನಿ: ಡ್ಯೂನ್
>> ಅತ್ಯುತ್ತಮ ಚಲನಚಿತ್ರ ಸಂಕಲನ: ಡ್ಯೂನ್
>> ಬೆಸ್ಟ್ ವಿಜ್ಯುವಲ್ ಎಫೆಕ್ಟ್ : ಡ್ಯೂನ್

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News