ಮಾರುಕಟ್ಟೆಗೆ ಬಂತು Okinawa OKHI-90 ಎಲೆಕ್ಟ್ರಿಕ್ ಸ್ಕೂಟರ್, ಬೆಲೆ ಮತ್ತು ವೈಶಿಷ್ಟ್ಯಗಳು ತಿಳಿಯಿರಿ

ಹೊಸ ಎಲೆಕ್ಟ್ರಿಕ್ ಸ್ಕೂಟರ್ (e-scooter) ಒಕಿನಾವಾ ಓಕಿಹಿ-90 (Okinawa OKHI-90) ಮಾರುಕಟ್ಟೆಗೆ ಬಂದಿದೆ. ಈ ಸ್ಕೂಟರ್ ಸಾಕಷ್ಟು ಶಕ್ತಿಶಾಲಿಯಾಗಿದೆ ಮತ್ತು ಉತ್ತಮ ಶ್ರೇಣಿಯನ್ನು ಹೊಂದಿದೆ. ಇದು ಕೇವಲ 10 ಸೆಕೆಂಡುಗಳಲ್ಲಿ ಗಂಟೆಗೆ 90 ಕಿಮೀ ವೇಗವನ್ನು ಪಡೆಯುತ್ತದೆ. 

ಬೆಂಗಳೂರು : ಹೊಸ ಎಲೆಕ್ಟ್ರಿಕ್ ಸ್ಕೂಟರ್ (e-scooter) ಒಕಿನಾವಾ ಓಕಿಹಿ-90 (Okinawa OKHI-90) ಮಾರುಕಟ್ಟೆಗೆ ಬಂದಿದೆ. ಈ ಸ್ಕೂಟರ್ ಸಾಕಷ್ಟು ಶಕ್ತಿಶಾಲಿಯಾಗಿದೆ ಮತ್ತು ಉತ್ತಮ ಶ್ರೇಣಿಯನ್ನು ಹೊಂದಿದೆ. ಇದು ಕೇವಲ 10 ಸೆಕೆಂಡುಗಳಲ್ಲಿ ಗಂಟೆಗೆ 90 ಕಿಮೀ ವೇಗವನ್ನು ಪಡೆಯುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸಬ್ಸಿಡಿ ನಂತರ Okinawa OKHI-90 ಇ-ಸ್ಕೂಟರ್‌ನ ಬೆಲೆ 1,21,866 ಆಗಿದೆ.  ರಾಜ್ಯ ಸಬ್ಸಿಡಿ ನಂತರ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಈ ಸ್ಕೂಟರ್ ಬೆಲೆ 1,03,866 ರೂ. ಗುಜರಾತ್‌ನಲ್ಲಿ 1,01,866 ರೂ. ರಾಜಸ್ಥಾನದಲ್ಲಿ 1,14,866 ಮತ್ತು ಒಡಿಶಾದಲ್ಲಿ 1,16,866 ರೂ. ಆಗಿದೆ. 

2 /4

ಸ್ಕೂಟರ್ (Okinawa OKHI-90) ಶಕ್ತಿಯುತ 3800 ವ್ಯಾಟ್ ಮೋಟಾರ್‌ನಿಂದ ಚಾಲಿತವಾಗಿದೆ. ಸ್ಕೂಟರ್ ಕೇವಲ 10 ಸೆಕೆಂಡುಗಳಲ್ಲಿ 90 kmph ವೇಗವನ್ನು ಪಡೆಯುತ್ತದೆ. ಇದು ಎರಡು ಸವಾರಿ ವಿಧಾನಗಳನ್ನು ಹೊಂದಿದೆ - ಇಕೋ ಮತ್ತು ಸ್ಪೋರ್ಟ್. 

3 /4

Ockhi-90 ಇ-ಸ್ಕೂಟರ್ ತೆಗೆಯಬಹುದಾದ 72V 50Ah ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಪೂರ್ಣ ಚಾರ್ಜ್ ಮಾಡಿದರೆ 160 ಕಿ.ಮೀ. ಸ್ಕೂಟರ್ ಅನ್ನು ಗ್ಲಾಸಿ ವೈನ್ ರೆಡ್, ಗ್ಲೋಸಿ ಪರ್ಲ್ ವೈಟ್, ಗ್ಲಾಸಿ ಆಶ್ ಗ್ರೇ ಮತ್ತು ಗ್ಲಾಸಿ ಜ್ಯುವೆಲ್ಲರಿ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.     

4 /4

Ockhi-90 ಇ-ಸ್ಕೂಟರ್ ಇನ್ ನ್ಯಾವಿಗೇಶನ್,  ಡಿಜಿಟಲ್ ಇನ್ಫಾರ್ಮೆಟಿವ್  ಸ್ಪೀಡೋಮೀಟರ್, ಬ್ಲೂಟೂತ್  ಕನೆಕ್ಟಿವಿಟಿ, ಮೊಬೈಲ್ ಚಾರ್ಜಿಂಗ್ USB-ಪೋರ್ಟ್, ಲಗೇಜ್ ಬಾಕ್ಸ್ ಲೈಟ್, ಜಿಯೋ-ಫೆನ್ಸಿಂಗ್, ಸುರಕ್ಷಿತ ಪಾರ್ಕಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ.