ನವದೆಹಲಿ: ವಿದ್ಯಾರ್ಥಿ ಹಕ್ಕು ಹೋರಾಟಗಾರ್ತಿ ಶೆಹ್ಲಾ ರಶೀದ್ ಇತ್ತೀಚಿಗೆ ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜೀವ್ ಗಾಂಧಿಯವರ ಹತ್ಯೆ ರೀತಿಯಲ್ಲಿ ಕೊಲೆಗೈಯುತ್ತಾರೆ ಎನ್ನುವ ವಿಚಾರವನ್ನು ವ್ಯಂಗವಾಡುತ್ತಾ "ಇದು ಒಂದು ರೀತಿಯಲ್ಲಿ ಆರ್ ಎಸ್ ಎಸ್ ಮತ್ತು ನಿತಿನ್ ಗಡ್ಕರಿ ಪ್ರಧಾನಿ ಮೋದಿಯವರನ್ನು ಹತ್ಯೆಗೈಯಲು ಯೋಜನೆ ರೂಪಿಸಿದಂತಿದೆ, ಇದನ್ನು ಮುಸ್ಲಿಮರು ಮತ್ತು ಕಮುನಿಸ್ಟರ ಮೇಲೆ ಆರೋಪ ಹೊರಿಸಿ ನಂತರ ಮುಸ್ಲಿಮರನ್ನು ಕೊಲ್ಲುವುದು" ಎಂದು ಟ್ವೀಟ್ ಮಾಡಿದ್ದಾರೆ.
Looks like RSS/Gadkari is planning to assassinate Modi, and then blame it upon Muslims/Communists and then lynch Muslims #RajivGandhiStyle
— Shehla Rashid (@Shehla_Rashid) June 9, 2018
ಇದಕ್ಕೆ ಪ್ರತಿಕ್ರಿಯಿಸಿರುವ ನಿತಿನ್ ಗಡ್ಕರಿ " ನಾನು ಈ ರೀತಿಯ ಸಮಾಜ ವಿರೋಧಿ ಹೇಳಿಕೆಗಳ ಮೇಲೆ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಅವರು ಪ್ರಧಾನಿ ಹತ್ಯೆ ವಿಚಾರವಾಗಿ ವ್ಯಂಗವಾಡಿರುವ ಸಂಗತಿಯ ಬಗ್ಗೆ ಪ್ರತಿಕ್ರಿಯಿಸಿದರು.
Leader of world's biggest party gets worked up about a sarcastic tweet. Imagine what an innocent student @UmarKhalidJNU must be going through after a baseless media assault on him & his father by Times Now.
Mr. Gadkari, will you also take action against Rahul Shivshankar? https://t.co/tNDZLrqOKV
— Shehla Rashid (@Shehla_Rashid) June 9, 2018
ಮತ್ತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶೆಹ್ಲಾ ರಶೀದ್ ಇದು ವ್ಯಂಗ್ಯಮಿಶ್ರಿತ ಟ್ವೀಟ್ ಆಗಿದ್ದು, ಇದೇ ರೀತಿ ಆಧಾರ ರಹಿತ ಆರೋಪಗಳನ್ನು ಉಮರ್ ಖಾಲಿದ್ ಮತ್ತು ಅವರ ತಂದೆ ಮೇಲೆ ಮಾಡುತ್ತಿರುವ ಮಾಧ್ಯಮಗಳ ಮೇಲೂ ಕ್ರಮ ತೆಗೆದುಕೊಳ್ಳುತ್ತಿರಲ್ಲವೇ ಗಡ್ಕರಿಯವರೇ ?ಎಂದು ಅವರು ಪ್ರಶ್ನಿಸಿದ್ದಾರೆ.