ನಾಳೆಯಿಂದ ನಾಲ್ಕು ದಿನ ಬ್ಯಾಂಕ್ ಬಂದ್..! ಇಂದೇ ಪೂರೈಸಿಕೊಳ್ಳಿ ಅಗತ್ಯ ಕೆಲಸ

Bank Strike:ಮಾರ್ಚ್ ಕೊನೆಯ ವಾರದಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳಿಗೆ ಸಂಬಂಧಿಸಿದ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ. ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್ ರಜೆ ಇರಲಿದೆ. ಬ್ಯಾಂಕ್ ನೌಕರರು ಮುಂದಿನ ಸೋಮವಾರ ಮತ್ತು ಮಂಗಳವಾರ ಮುಷ್ಕರ ನಡೆಸುತ್ತಿದ್ದಾರೆ. 

Written by - Ranjitha R K | Last Updated : Mar 25, 2022, 11:40 AM IST
  • ನಾಲ್ಕು ದಿನಗಳ ಕಾಲ ಬ್ಯಾಂಕ್‌ ವ್ಯವಹಾರಗಳ ಮೇಲೆ ಪರಿಣಾಮ
  • ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ
  • ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ನೌಕರರ ಮುಷ್ಕರ
ನಾಳೆಯಿಂದ ನಾಲ್ಕು ದಿನ ಬ್ಯಾಂಕ್ ಬಂದ್..! ಇಂದೇ ಪೂರೈಸಿಕೊಳ್ಳಿ ಅಗತ್ಯ ಕೆಲಸ   title=
ನಾಲ್ಕು ದಿನಗಳ ಕಾಲ ಬ್ಯಾಂಕ್‌ ವ್ಯವಹಾರಗಳ ಮೇಲೆ ಪರಿಣಾಮ (file photo)

ಬೆಂಗಳೂರು : Bank Strike: ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಮಹತ್ವದ ಕೆಲಸಗಳಿದ್ದರೆ ಇಂದೇ ಪೂರೈಸಿಕೊಳ್ಳಿ (Bank Holidays). ನಾಳೆಯಿಂದ ಅಂದರೆ ಶನಿವಾರದಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ಶನಿವಾರ ಮತ್ತು ಭಾನುವಾರ ವಾರದ ರಜೆ (ಇರಲಿದೆ. ಇದಾದ ಬಳಿಕ ಮುಂದಿನ ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ ( Bank Employees Strike). ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಈ ಜನರು ಮುಷ್ಕರಕ್ಕೆ ಕರೆ ನೀಡಲಾಗಿದೆ.  

ಬ್ಯಾಂಕ್ ನೌಕರರು ನಡೆಸಲಿದ್ದಾರೆ ಮುಷ್ಕರ :
ಬ್ಯಾಂಕ್ ಯೂನಿಯನ್ ಮುಷ್ಕರದಿಂದಾಗಿ (Bank Union Strike) ಮಾರ್ಚ್ 28 ಮತ್ತು ಮಾರ್ಚ್ 29 ರಂದು ಬ್ಯಾಂಕ್ ಕೆಲಸಗಳ ಮೇಲೆ ಪರಿಣಾಮ ಬೀರಲಿದೆ ಎಂದು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ಈಗಾಗಲೇ ಹೇಳಿದೆ. ಖಾಸಗೀಕರಣದ ವಿರುದ್ಧ ಈ ಮುಷ್ಕರ ಮಾಡಲಾಗುತ್ತಿದೆ. ಈ ಸಮಯದಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ  ಪ್ರಯತ್ನಿಸುವುದಾಗಿ ಎಸ್‌ಬಿಐ (SBI) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ :  Fuel Prices: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಎಟಿಎಂನಿಂದ ಹಣ ತೆಗೆಯಲು ತೊಂದರೆ :
ಈ ನಾಲ್ಕು ದಿನ ಬ್ಯಾಂಕ್‌ ವ್ಯವಹಾರ ನಡೆಯದಿದ್ದಲ್ಲಿ ಬ್ಯಾಂಕ್‌ನ ಎಟಿಎಂಗಳೂ (ATM) ಖಾಲಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು. ಥರ್ಡ್ ಪಾರ್ಟಿ ಹಣವನ್ನು ತುಂಬಿಸುವ ಕೆಲಸ ಮಾಡುವ ಮಹಾನಗರಗಳಲ್ಲಿ  ಸಮಸ್ಯೆ ಇರುವುದಿಲ್ಲ. ಆದರೆ ಬ್ಯಾಂಕ್ ಸಿಬ್ಬಂದಿ ಹಣ ತುಂಬುವ ಕೆಲಸ ಮಾಡುವ ಎಟಿಎಂಗಳಲ್ಲಿ ಸಮಸ್ಯೆ ತಲೆದೋರಬಹುದು.  

ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಮುಷ್ಕರ : 
ಎರಡು ದಿನಗಳ ಮುಷ್ಕರವನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA)ಘೋಷಿಸಿದೆ. ಈ ಮುಷ್ಕರದಲ್ಲಿ ಬ್ಯಾಂಕ್ ನೌಕರರು ಭಾಗವಹಿಸಲಿದ್ದಾರೆ. ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ, ಮುಷ್ಕರದ ಸಮಯದಲ್ಲಿ ಕೆಲಸಗಳಿಗೆ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ಬ್ಯಾಂಕ್‌ಗಳು ಭರವಸೆ ನೀಡಿವೆ.

ಇದನ್ನೂ ಓದಿ :  PM Kisan ರೈತರಿಗೆ ಪ್ರತಿ ವರ್ಷ ₹6000 ದೊಂದಿಗೆ ₹36000 ಸಿಗುತ್ತದೆ, ಹೀಗೆ ಇದರ ಲಾಭ ಪಡೆಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News