ಮಹಿಳಾ ಟಿ20 ವಿಶ್ವಕಪ್‌ನ 'ಥೀಮ್ ಸಾಂಗ್' ಬಿಡುಗಡೆ: ಟೀಂ ಇಂಡಿಯಾದ ಸ್ಮೃತಿ-ಜೆಮಿಮಾ ಫುಲ್ ಮಿಂಚಿಂಗ್... ಹೇಗಿದೆ ನೋಡಿ ಹಾಡು! ವಿಡಿಯೋ ವೈರಲ್

Women's T20 World Cup 2024 Theme Song: ಈವೆಂಟ್ ಹಾಡನ್ನು ಆಲ್-ಗರ್ಲ್ ಪಾಪ್ ಗ್ರೂಪ್ W.i.S.H., ಸಂಗೀತ ನಿರ್ದೇಶಕ ಮಿಕ್ಕಿ ಮೆಕ್‌ಕ್ಲಿಯರಿ, ಸಂಯೋಜಕ ಪಾರ್ಥ್ ಪರೇಖ್ ಮತ್ತು ಬೇ ಮ್ಯೂಸಿಕ್ ಹೌಸ್ ನಿರ್ಮಿಸಿದ್ದಾರೆ. ಇದನ್ನು ಆಲ್ಬಂ ಹಾಡಿನಂತೆ ಫಿಲ್ಮಿ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

Written by - Bhavishya Shetty | Last Updated : Sep 23, 2024, 07:56 PM IST
    • ಮಹಿಳಾ ಟಿ20 ವಿಶ್ವಕಪ್ 2024ಕ್ಕೆ ವೇದಿಕೆ ಸಜ್ಜಾಗಿದೆ.
    • ಇದಕ್ಕಾಗಿ ಐಸಿಸಿ ಥೀಮ್ ಸಾಂಗ್ ಕೂಡ ಬಿಡುಗಡೆ ಮಾಡಿದೆ
    • ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕ್ರೇಜ್‌ ಹುಟ್ಟುಹಾಕಿದೆ
ಮಹಿಳಾ ಟಿ20 ವಿಶ್ವಕಪ್‌ನ 'ಥೀಮ್ ಸಾಂಗ್' ಬಿಡುಗಡೆ: ಟೀಂ ಇಂಡಿಯಾದ ಸ್ಮೃತಿ-ಜೆಮಿಮಾ ಫುಲ್ ಮಿಂಚಿಂಗ್... ಹೇಗಿದೆ ನೋಡಿ ಹಾಡು! ವಿಡಿಯೋ ವೈರಲ್ title=
Women's T20 World Cup 2024 Theme Song

Women's T20 World Cup 2024 Theme Song: ಮಹಿಳಾ ಟಿ20 ವಿಶ್ವಕಪ್ 2024ಕ್ಕೆ ವೇದಿಕೆ ಸಜ್ಜಾಗಿದೆ. ಮೆಗಾ ಈವೆಂಟ್ ಆರಂಭಕ್ಕೆ ಕೇವಲ 10 ದಿನಗಳು ಮಾತ್ರ ಉಳಿದಿದ್ದು, ಇದಕ್ಕಾಗಿ ಐಸಿಸಿ ಥೀಮ್ ಸಾಂಗ್ ಕೂಡ ಬಿಡುಗಡೆ ಮಾಡಿದೆ. ಹಾಡು ಲಾಂಚ್ ಆಗಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕ್ರೇಜ್‌ ಹುಟ್ಟುಹಾಕಿದೆ. ಅಂದಹಾಗೆ ಈ ಹಾಡಿನಲ್ಲಿ ಟೀಂ ಇಂಡಿಯಾದ ಸ್ಟಾರ್ ಮಹಿಳಾ ಕ್ರಿಕೆಟಿಗರು ಕೂಡ ಮೋಡಿ ಮಾಡುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ:  ವಿರಾಟ್, ರೋಹಿತ್ ಅಲ್ವಂತೆ... ಟೀಂ ಇಂಡಿಯಾದ ನಿಜವಾದ 'ಸೂಪರ್ ಸ್ಟಾರ್' ಈತ ಎಂದ ಆರ್‌. ಅಶ್ವಿನ್!

ಈವೆಂಟ್ ಹಾಡನ್ನು ಆಲ್-ಗರ್ಲ್ ಪಾಪ್ ಗ್ರೂಪ್ W.i.S.H., ಸಂಗೀತ ನಿರ್ದೇಶಕ ಮಿಕ್ಕಿ ಮೆಕ್‌ಕ್ಲಿಯರಿ, ಸಂಯೋಜಕ ಪಾರ್ಥ್ ಪರೇಖ್ ಮತ್ತು ಬೇ ಮ್ಯೂಸಿಕ್ ಹೌಸ್ ನಿರ್ಮಿಸಿದ್ದಾರೆ. ಇದನ್ನು ಆಲ್ಬಂ ಹಾಡಿನಂತೆ ಫಿಲ್ಮಿ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಐಸಿಸಿ ತನ್ನ ಅಧಿಕೃತ ಖಾತೆಯಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದು, ಈ ಹಾಡಿನ ಮಧ್ಯದಲ್ಲಿ ಮಹಿಳಾ ಕ್ರಿಕೆಟಿಗರ ಅಭ್ಯಾಸದ ವಿಡಿಯೋಗಳನ್ನೂ ಸೇರಿಸಲಾಗಿದೆ.

ಈ ಹಾಡಿನ ಮಧ್ಯದಲ್ಲಿ ಟೀಂ ಇಂಡಿಯಾದ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ಅವರ ಮ್ಯಾಜಿಕ್ ಕಂಡುಬಂದಿದೆ. ದೀಪ್ತಿ ಶರ್ಮಾ ಕೂಡ ಆಕ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 1.40 ನಿಮಿಷಗಳ ಈ ಹಾಡಿನಲ್ಲಿ ಅನೇಕ ಹುಡುಗಿಯರು ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು, ಮೆಗಾ ಟೂರ್ನಮೆಂಟ್‌ನ ಈ ಥೀಮ್ ಸಾಂಗ್ ಅನ್ನು ಫ್ಯಾನ್ಸ್‌ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಒಂದು ತುಂಡು ಕರ್ಪೂರವನ್ನು ಇದರ ಜೊತೆ ಸುಟ್ಟು ಮನೆಯ ಈ ದಿಕ್ಕಿನಲ್ಲಿಡಿ... ಮನೆಯಲ್ಲಿ ಶುಕ್ರದೆಸೆ ವೃದ್ಧಿಯಾಗಿ ಹಣದ ಮಳೆ ಸುರಿಯುವುದು

ಟಿ20 ವಿಶ್ವಕಪ್ ಯಾವಾಗ ಆರಂಭ?
ಮಹಿಳೆಯರ T20 ವಿಶ್ವಕಪ್ 2024 ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯು 17 ದಿನಗಳ ಕಾಲ ನಡೆಯಲಿದ್ದು, 10 ತಂಡಗಳು ಭಾಗವಹಿಸಲಿವೆ. ದುಬೈ ಮತ್ತು ಶಾರ್ಜಾದಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಇತ್ತೀಚೆಗಷ್ಟೇ ಟೂರ್ನಿಯ ಆತಿಥ್ಯ ವಹಿಸುವ ಕುರಿತು ದೊಡ್ಡ ಚರ್ಚೆ ನಡೆದಿತ್ತು. ಹಿಂಸಾಚಾರದಿಂದಾಗಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಈ ಟೂರ್ನಿಯ ಸ್ಥಳವನ್ನು ಬದಲಾಯಿಸಲಾಗಿತ್ತು.

 
 
 
 

 
 
 
 
 
 
 
 
 
 
 

A post shared by ICC (@icc)

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News