Health Tips: ಪುರುಷರ ಈ ಸಮಸ್ಯೆಗಳಿಗೆ ಅರಿಶಿನ ಮತ್ತು ಜೇನುತುಪ್ಪ ರಾಮಬಾಣ

ಮದುವೆಯ ನಂತರ ಪುರುಷರು ಬಹಿರಂಗವಾಗಿ ಹೇಳಲು ಇಷ್ಟಪಡದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಈ ಸಮಸ್ಯೆಯನ್ನು ಅರಿಶಿನ ಮತ್ತು ಜೇನುತುಪ್ಪದ ಮೂಲಕ ನಿವಾರಿಸಬಹುದು.

Written by - Puttaraj K Alur | Last Updated : Mar 14, 2022, 04:50 PM IST
  • ಪುರುಷರ ಅನೇಕ ಸಮಸ್ಯೆಗಳಿಗೆ ಅರಿಶಿನ ಮತ್ತು ಜೇನುತುಪ್ಪ ರಾಮಬಾಣ
  • ಶೀತದ ಸಮಸ್ಯೆ ಇದ್ದರೆ ಅರ್ಧ ಚಮಚ ಜೇನುತುಪ್ಪ & ಅರಿಶಿನ ಮಿಶ್ರಣ ಮಾಡಿ ಸೇವಿಸಿರಿ
  • ಚರ್ಮದ ಸಮಸ್ಯೆಗೂ ಅರಿಶಿನ ಮತ್ತು ಜೇನುತುಪ್ಪ ಪ್ರಯೋಜನಕಾರಿಯಾಗಿದೆ
Health Tips: ಪುರುಷರ ಈ ಸಮಸ್ಯೆಗಳಿಗೆ ಅರಿಶಿನ ಮತ್ತು ಜೇನುತುಪ್ಪ ರಾಮಬಾಣ title=
ಅರಿಶಿನ ಮತ್ತು ಜೇನುತುಪ್ಪ ಅನೇಕ ಸಮಸ್ಯೆಗಳಿಗೆ ರಾಮಬಾಣ

ನವದೆಹಲಿ: ಭಾರತೀಯರ ಸಂಪ್ರದಾಯದಲ್ಲಿ ಪುರುಷ-ಮಹಿಳೆಯರ ಸಮಸ್ಯೆಗಳಿಗೆ ಅಜ್ಜಿಯರು ನೀಡುವ ಸಲಹೆಗಳನ್ನು ಹೆಚ್ಚಾಗಿ ಪಾಲಿಸಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಅವರು ನೀಡುತ್ತಿದ್ದ ಮನೆಮದ್ದುಗಳು ನಮಗೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತಿದ್ದವು. ಪುರುಷರ ಅನೇಕ ಸಮಸ್ಯೆಗಳಿಗೆ ಅಜ್ಜಿಯವರು ಮನೆಮದ್ದುಗಳ ಸಲಹೆ ನೀಡಿದ್ದಾರೆ. ಅದೇ ರೀತಿಯ ಒಂದು ಉಪಯುಕ್ತ ಮನೆಮದ್ದಿನ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಪುರುಷರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಅರಿಶಿನ ಮತ್ತು ಜೇನುತುಪ್ಪ(Turmeric And Honey) ಸೇರಿ ಮಾಡುವ ಈ ಮನೆಮದ್ದು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ.  

ಪುರುಷರಿಗೆ ಅಂತ್ಯಂತ ಪ್ರಯೋಜನಕಾರಿ

ಅರಿಶಿನ ಮತ್ತು ಜೇನುತುಪ್ಪವು ವೀರ್ಯವನ್ನು ತೆಳುಗೊಳಿಸಲು(Thinness Of Semen) ಮತ್ತು ಅಕಾಲಿಕ ಸ್ಖಲನಕ್ಕೆ ರಾಮಬಾಣವಾಗಿದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೇವಲ ಒಂದು ಚಮಚ ಜೇನುತುಪ್ಪವನ್ನು ಒಂದು ಚಮಚ ಅರಿಶಿನ ಪುಡಿಯೊಂದಿಗೆ ಬೆರೆಸಿ ಸೇವಿಸಬೇಕು.

ಇದನ್ನೂ ಓದಿ: Health Tips: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರತಿದಿನವೂ ಈ ಹಣ್ಣುಗಳನ್ನು ಸೇವಿಸಿ

ಶೀತಕ್ಕೆ ಪರಿಣಾಮಕಾರಿ

ಶೀತದ ಸಮಸ್ಯೆ ಇದ್ದರೆ ಅರ್ಧ ಚಮಚ ಜೇನುತುಪ್ಪ ಮತ್ತು ಅರಿಶಿನ ಮಿಶ್ರಣ ಮಾಡಿ ತಿನ್ನಿರಿ ಮತ್ತು ಸ್ವಲ್ಪ ಸಮಯದವರೆಗೆ ನೀರು ಕುಡಿಯಬೇಡಿ. ಬೇಕಿದ್ದರೆ ಅದರೊಂದಿಗೆ ತುಳಸಿಯನ್ನೂ ಬಳಸಬಹುದು. ಊಟದ ನಂತರ ಅರಿಶಿನವನ್ನು ಸೇವಿಸುವುದರಿಂದ ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳಿಗೆ ಪ್ರಯೋಜನಕಾರಿಯಾಗಿದೆ.

ಹೃದಯಕ್ಕೆ ಪ್ರಯೋಜನಕಾರಿ

ಅರಿಶಿನ ಮತ್ತು ಜೇನುತುಪ್ಪ(Turmeric And Honey Health Benefits)ದಿಂದ ಹೃದ್ರೋಗದ ಅಪಾಯವನ್ನು ತಡೆಗಟ್ಟಬಹುದು. ಅರಿಶಿನವು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸ್ಟೀಮ್ ತೆಗೆದುಕೊಳ್ಳುವುದು ಶೀತಕ್ಕೆ ಮಾತ್ರವಲ್ಲ ಅನೇಕ ರೀತಿಯಲ್ಲಿ ಪ್ರಯೋಜನಕಾರಿ

ಚರ್ಮಕ್ಕೂ ಪರಿಣಾಮಕಾರಿ

ಚರ್ಮದ ಸಮಸ್ಯೆಗಳಾದ ಮಚ್ಚೆಗಳು, ಸುಕ್ಕುಗಳು, ಕಲೆಗಳು ಇತ್ಯಾದಿಗಳನ್ನು ಹೋಗಲಾಡಿಸಲು ಅರಿಶಿನ, ಜೇನುತುಪ್ಪ(Turmeric And Honey) ಮತ್ತು ರೋಸ್ ವಾಟರ್ ಅನ್ನು ಒಟ್ಟಿಗೆ ಸೇರಿಸಿ ಮತ್ತು ಸ್ವಲ್ಪ ಒಣಗಿಸಿ ಮುಖಕ್ಕೆ ಹಚ್ಚಿಕೊಳ್ಳಿರಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News