ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಪ್ರವಾಸದ ಎರಡನೇ ದಿನವದ ಇಂದು ಗಾಂಧಿನಗರದಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಅವರು ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯಕ್ಕೆ ಆಗಮಿಸಲಿದ್ದಾರೆ.
ಪಿಎಂ ಮೋದಿ(PM Narendra Modi)ಯವರು ಗುಜರಾತ್ ಸಿಎಂ ಆಗಿದ್ದಾಗ ಈ ವಿಶ್ವವಿದ್ಯಾಲಯ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿತ್ತು. ಪ್ರಧಾನಿ ಮೋದಿ ನಿನ್ನೆ ಕೂಡ ಅಹಮದಾಬಾದ್ನಲ್ಲಿ ರೋಡ್ ಶೋ ಮಾಡಿದ್ದಾರೆ.
LIVE: A grand welcome for PM Shri @narendramodi in Gujarat. https://t.co/4JcaOYiwZj
— BJP (@BJP4India) March 12, 2022
ಇದನ್ನೂ ಓದಿ : PM Modi : ಪಂಚ ರಾಜ್ಯ ಚುನಾವಣೆ ನಂತರ ಗುಜರಾತ್ಗೆ ಪ್ರಧಾನಿ ಮೋದಿ ಎಂಟ್ರಿ! ಮುಂದಿನ ಪ್ಲಾನ್ ಏನು
ಖೇಲ್ ಮಹಾಕುಂಭ ಉದ್ಘಾಟಿಸುವರು
ಪ್ರಧಾನಿ ಮೋದಿಯವರ ರೋಡ್ಶೋ(Gandhinagar RoadShow)ನಲ್ಲಿ ಭಾರೀ ಜನಸ್ತೋಮ ಕಂಡುಬಂದಿದ್ದು. ಇವರು ಮಧ್ಯಾಹ್ನ 1 ಗಂಟೆಗೆ ರಾಜಭವನಕ್ಕೆ ಹಿಂದಿರುಗಲಿದ್ದಾರೆ, ನಂತರ ಅವರು ಅಹಮದಾಬಾದ್ನ ನವರಂಗ್ಪುರ ಪ್ರದೇಶದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸಂಜೆ 6 ರಿಂದ ರಾತ್ರಿ 8 ರ ನಡುವೆ ಖೇಲ್ ಮಹಾಕುಂಭ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾತ್ರಿ 8.30ಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ ದೆಹಲಿಗೆ ತೆರಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.