Redmi Note 11 Pro Series ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಅದರ ಬೆಲೆ ಹಾಗೂ ವೈಶಿಷ್ಟ್ಯಗಳ ವಿವರಗಳು

Redmi  ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, Redmi Note 11 Pro  ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹಾಗಾದರೆ ಬನ್ನಿ ಈ ಸ್ಮಾರ್ಟ್ ಫೋನ್ ಬೆಲೆ ಮತ್ತು ಅದರ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ,   

Written by - Nitin Tabib | Last Updated : Mar 11, 2022, 04:19 PM IST
  • Redmi Note 11 Pro ಭಾರತದಲ್ಲಿ ಬಿಡುಗಡೆ,
  • ಈ ಫೋನ್ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
  • ಇಲ್ಲಿದೆ ಅದರ ಬೆಲೆ ಹಾಗೂ ವೈಶಿಷ್ಟ್ಯಗಳ ವಿವರಗಳು.
Redmi Note 11 Pro Series ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಅದರ ಬೆಲೆ ಹಾಗೂ  ವೈಶಿಷ್ಟ್ಯಗಳ ವಿವರಗಳು title=
Redmi Note 11 Pro Series (File Photo)

Xiaomi ತನ್ನ Redmi Note 11 Pro ಸರಣಿಯನ್ನು ಭಾರತದಲ್ಲಿ ಬಿಡುಗಡೆ  ಮಾಡಿದೆ. Xiaomi ಅಭಿಮಾನಿಗಳು ಈ ಫೋನ್‌ಗಾಗಿ ದೀರ್ಘಕಾಲದಿಂದ ಕಾತರದಿಂದ ಕಾಯುತ್ತಿದ್ದರು. Redmi Note ಸರಣಿಯಲ್ಲಿ, ಕಂಪನಿಯು ತನ್ನ ಪ್ರೊ ವೇರಿಯಂಟ್ಗಳಲ್ಲಿ ಸಮಂಜಸವಾದ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಿದೆ, ಇದು ಈ ಫೋನ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಿದೆ. ಹೀಗಾಗಿ ಸ್ಮಾರ್ಟ್ ಫೋನ್ ಬಳಕೆದಾರರ ಕಣ್ಣು ಈ ಫೋನ್ ಬಿಡುಗಡೆಯ ಮೇಲೆ ನೆಟ್ಟಿತ್ತು. ಮಾರ್ಚ್ 9 ರಂದು, ಭಾರತದಲ್ಲಿ Redmi Note 11 Pro Series ಅನ್ನು  ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಕಂಪನಿಯು Redmi Note 11 ಮತ್ತು Redmi Note 11S ಅನ್ನು ಬಿಡುಗಡೆ ಮಾಡಿತ್ತು.

Redmi Note 11 Pro+  ಬೆಲೆ ಎಷ್ಟು?
Redmi Note 11 Pro + ನ 6 GB RAM + 128 GB ಆವೃತ್ತಿಯ ಬೆಲೆ ರೂ 20,999 ರಿಂದ ಪ್ರಾರಂಭವಾಗುತ್ತದೆ. 8 GB RAM + 128 GB ಆವೃತ್ತಿಯ ಬೆಲೆ 22,999 ರೂ.ಗಳಾಗಿದೆ. ಆದರೆ ಟಾಪ್ ಎಂಡ್ 8GB RAM + 256GB ಆವೃತ್ತಿಯ ಮಾರುಕಟ್ಟೆ ಬೆಲೆ 24,999 ರೂ.ನಿಗದಿಪಡಿಸಲಾಗಿದೆ.

Redmi Note 11 Pro ಆರಂಭಿಕ ಬೆಲೆ
Redmi Note 11 Pro ನ 6 GB RAM + 128 GB ಆವೃತ್ತಿಯ ಬೆಲೆ ರೂ 17,999 ರಿಂದ ಪ್ರಾರಂಭವಾಗುತ್ತದೆ. ಇದೇ ವೇಳೆ, 8 GB RAM + 128 GB ಆವೃತ್ತಿಯ ಬೆಲೆ 19,999 ರೂ.ನಿಗದಿಪಡಿಸಲಾಗಿದೆ. ಆದರೆ, ಮುಂಬರುವ ದಿನಗಳಲ್ಲಿ ಈ ಫೋನ್ ಬೆಲೆ ಹೆಚ್ಚಾಗುವ ಸಾದ್ಯತೆ ಇದೆ ಎಂದು Redmi  ಹೇಳಿದೆ.

Redmi Note 11 Pro Series ಮೇಲೆ ಕೊಡುಗೆಗಳೇನು?
Redmi Watch 2 Lite ಬೆಲೆ ರೂ.4,999 ಇರಲಿದೆ. ದೊರೆತಿರುವ ಮಾಹಿತಿಗಳ ಪ್ರಕಾರ ಮಾರ್ಚ್ 15 ರಿಂದ ಈ ವಾಚ್ ಮಾರಾಟಕ್ಕೆ ಲಭ್ಯವಾಗಲಿದೆ. ಲಾಯಲ್ಟಿ ಪ್ರೋಗ್ರಾಂ ಅಸ್ತಿತ್ವದಲ್ಲಿರುವ Redmi ಫೋನ್ ಬಳಕೆದಾರರಿಗೆ ತಮ್ಮ ಹಳೆಯ Redmi ಫೋನ್ ಅನ್ನು ಹೊಸ Redmi Note 11 Pro ಸರಣಿಗಾಗಿ ವಿನಿಮಯ ಮಾಡಿಕೊಳ್ಳುವಾಗ ರೂ 2,000 ವರೆಗೆ ಹೆಚ್ಚುವರಿ ಬೋನಸ್ ಅನ್ನು ಪಡೆಯುವ ಅನುಮತಿ ಇದೆ ಎಂದು Redmi ಘೋಷಿಸಿದೆ.

ಇದನ್ನೂ ಓದಿ-Holi Offers :Kodak ಸ್ಮಾರ್ಟ್ ಟಿವಿ ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್

Redmi Note 11 Pro ಸರಣಿಯ ವೈಶಿಷ್ಟ್ಯಗಳು
Redmi Note 11 Pro ಸರಣಿಯ ಎರಡೂ ಸ್ಮಾರ್ಟ್ ಫೋನ್ ಗಳಲ್ಲಿ 6.67 ಇಂಚಿನ ಫುಲ್ HD+ ಪಂಚ್ ಹೋಲ್ ಡಿಸ್ಪ್ಲೇಯನ್ನು ನೀವು ಕಾಣಬಹುದು. ಇದೊಂದು Amoled Display ಆಗಿರಲಿದ್ದು, 120 Hz ರೀಫ್ರೇಶ್ ರೇಟ್ ನೊಂದಿಗೆ ಬರುತ್ತದೆ. ದೊರೆತ ಮಾಹಿತಿಗಳ ಪ್ರಕಾರ, ಇದರಲ್ಲಿ 16MP ಸೆಲ್ಫಿ ಕ್ಯಾಮರಾ ಇರುವ ಸಾಧ್ಯತೆ ಕೂಡ ಇದೆ. 

ಇದನ್ನೂ ಓದಿ-'ಕೂಲ್ ನ್ಯೂ ಟೊಯೋಟಾ ಗ್ಲಾಂಜಾ' ಬುಕಿಂಗ್ ಓಪನ್.. ಬುಕ್ ಮಾಡಲು ಇಲ್ಲಿ ಭೇಟಿ ನೀಡಿ!

Redmi Note 11 Pro 4G ಸ್ಮಾರ್ಟ್ ಫೋನ್ ನಲ್ಲಿ 108MP ಪ್ರೈಮರಿ ಕ್ಯಾಮರಾ ಹೊಂದಿರುವ ಕ್ವಾಡ್ ಕ್ಯಾಮೆರಾ ಸಿಸ್ಟಂ ನೋಡಲು ನಿಮಗೆ ಸಿಗಬಹುದು.

ಇದನ್ನೂ ಓದಿ-Bizarre News: ಈ ಯುವತಿಗೆ ತನ್ನ ಪರ್ಸನಲ್ Photo ಕಳುಹಿಸುತ್ತವೆಯಂತೆ ಎಲಿಯನ್ ಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News