PAN Card: PAN ಕಾರ್ಡ್ ಮಾಡಿಸಿಕೊಳ್ಳಲು ಈ ಸುಲಭ ಹಂತಗಳನ್ನು ಅನುಸರಿಸಿ

Online PAN Card:  ಆನ್‌ಲೈನ್ ಪ್ಯಾನ್ ಕಾರ್ಡ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ತುಂಬಾ ಸುಲಭಗೊಳಿಸಿದೆ. ಕೇವಲ 10 ನಿಮಿಷಗಳಲ್ಲಿ ನೀವು ಮನೆಯಲ್ಲಿ ಕುಳಿತು ಪ್ಯಾನ್ ಮಾಡಬಹುದು.

Written by - Yashaswini V | Last Updated : Mar 5, 2022, 01:05 PM IST
  • ತೆರಿಗೆ ಇಲಾಖೆಯ ಪ್ರಕಾರ, ಯಾವುದೇ ಓರ್ವ ವ್ಯಕ್ತಿ ಕೇವಲ ಒಂದು ಪ್ಯಾನ್ ಮಾತ್ರ ಹೊಂದಿರಬಹುದಾಗಿದೆ
  • ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದು ಕಾನೂನು ಬಾಹಿರ
  • ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 272 ಬಿ ಅಡಿಯಲ್ಲಿ, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವವರಿಗೆ 10,000 ರೂ. ದಂಡ ವಿಧಿಸಲಾಗುವುದು.
PAN Card: PAN ಕಾರ್ಡ್ ಮಾಡಿಸಿಕೊಳ್ಳಲು ಈ ಸುಲಭ ಹಂತಗಳನ್ನು ಅನುಸರಿಸಿ  title=
How to get PAN Card

Online PAN Card: ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದರಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಸೇರಿದಂತೆ ಎಲ್ಲಾ ರೀತಿಯ ಹಣಕಾಸು ವಹಿವಾಟಿಗೆ  ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ನೀವು ಇನ್ನೂ ಪ್ಯಾನ್ ಕಾರ್ಡ್ ಮಾಡಿಲ್ಲದಿದ್ದರೆ, ನೀವು ಕೇವಲ 10 ನಿಮಿಷಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ (Online PAN Card) ಪಡೆಯಲು ನೀವು ಮೊದಲು ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ 'ಆಧಾರ್ ಮೂಲಕ ತ್ವರಿತ ಪ್ಯಾನ್' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ 'ಹೊಸ ಪ್ಯಾನ್ ಪಡೆಯಿರಿ' ಆಯ್ಕೆಯನ್ನು ಆರಿಸಬೇಕು. ನಿಮಗೆ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ಮೌಲ್ಯೀಕರಣದ ನಂತರ, ನಿಮಗೆ e-PAN ನೀಡಲಾಗುತ್ತದೆ.

ಇದನ್ನೂ ಓದಿ- PAN ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸುವ ಸುಲಭ ಪ್ರಕ್ರಿಯೆ

ಎಲ್ಲೆಲ್ಲಿ ಪ್ಯಾನ್ ಕಾರ್ಡ್ ಅಗತ್ಯವಿದೆ?
>> ಬ್ಯಾಂಕಿನಲ್ಲಿ ಖಾತೆ ತೆರೆಯುವುದು
>> ಐಟಿ ರಿಟರ್ನ್ಸ್ (IT Return) ಸಲ್ಲಿಸುವಲ್ಲಿ 
>> ಕಾರನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು
>> ದೂರವಾಣಿ ಸಂಪರ್ಕ 
>> 5 ಲಕ್ಷಕ್ಕಿಂತ ಹೆಚ್ಚಿನ ಆಭರಣ ಖರೀದಿಯಲ್ಲಿ
>> ಸೆಕ್ಯುರಿಟೀಸ್ ಅಥವಾ 50000 ರೂ.ಗಿಂತ ಹೆಚ್ಚಿನ ವಹಿವಾಟುಗಳಲ್ಲಿ ಹೂಡಿಕೆ ಮಾಡುವಾಗ
>> ವಿಮಾ ಪ್ರೀಮಿಯಂಗಾಗಿ    
>> ವಿದೇಶಿ ವಿನಿಮಯ, ಆಸ್ತಿ, ಸಾಲ, ಎಫ್‌ಡಿ, ನಗದು ಠೇವಣಿ ಇತ್ಯಾದಿಗಳ ಸಮಯದಲ್ಲಿಯೂ ಪ್ಯಾನ್ ಕಾರ್ಡ್ ಅಗತ್ಯವಿದೆ.

ಇದನ್ನೂ ಓದಿ- PAN Card: 18 ವರ್ಷದೊಳಗಿನವರೂ ಪ್ಯಾನ್ ಕಾರ್ಡ್ ಪಡೆಯಬಹುದು! ಇಲ್ಲಿದೆ ಸುಲಭವಾದ ಪ್ರಕ್ರಿಯೆ

ಆದಾಯ ತೆರಿಗೆ (Income Tax) ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಒಮ್ಮೆ ನೀಡಲಾದ ಪ್ಯಾನ್ ಜೀವಿತಾವಧಿಯಲ್ಲಿ ದೇಶಾದ್ಯಂತ ಮಾನ್ಯವಾಗಿರುತ್ತದೆ. ತೆರಿಗೆ ಇಲಾಖೆಯ ಪ್ರಕಾರ, ಯಾವುದೇ ಓರ್ವ ವ್ಯಕ್ತಿ ಕೇವಲ ಒಂದು ಪ್ಯಾನ್ ಮಾತ್ರ ಹೊಂದಿರಬಹುದಾಗಿದೆ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದು ಕಾನೂನು ಬಾಹಿರ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 272 ಬಿ ಅಡಿಯಲ್ಲಿ, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಕಂಡುಬಂದಲ್ಲಿ ರೂ 10,000 ದಂಡವನ್ನು ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News