ನವದೆಹಲಿ: ಪ್ರೀತಿ ಅನ್ನೋದು ಎಲ್ಲಿ ಯಾವಾಗ ಹೇಗೆ ಹುಟ್ಟುತ್ತೆ ಅಂತಾ ಯಾರಿಗೂ ಗೊತ್ತಿರಲ್ಲ. ಪ್ರೀತಿ-ಪ್ರೇಮಕ್ಕೆ ಯಾವುದೇ ಜಾತಿ-ಧರ್ಮ, ಗಡಿ, ಭಾಷೆಯ ಮಿತಿಯಿಲ್ಲ. ಯಾರ ಮೇಲೆ ಯಾರಿಗೆ ಯಾವಾಗ ಪ್ರೀತಿ ಹುಟ್ಟುತ್ತೋ ಹೇಳಲಾಗದು. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಒಂದೇ ದಿನ ತ್ರಿವಳಿಗಳನ್ನು ಮದುವೆ(Sisters Married Same Groom)ಯಾಗುವ ಮೂಲಕ ಸಖತ್ ಸುದ್ದಿಯಾಗಿದ್ದಾನೆ. ಹೌದು ಈ ಸುದ್ದಿ ಕೇಳಿ ನೀವು ಹೌಹಾರಬಹುದು. ಆದರೆ ಇದು ನಿಜವಾಗಿಯೂ ನಡೆದಿರುವ ಘಟನೆ.
ಅಷ್ಟಕ್ಕೂ ಈ ಘಟನೆ ನಡೆದಿರುವ ಎಲ್ಲಿ ಅಂತೀರಾ..? ಈ ವಿಲಕ್ಷಣ ಘಟನೆ ನಡೆದಿರುವುದು ಆಫ್ರಿಕಾದ ಕಾಂಗೋದಲ್ಲಿ(African country of Congo). ಅಂದಹಾಗೆ ಕಾಂಗೋದಲ್ಲಿ ಬಹುಪತ್ನಿತ್ವ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ. ಇಲ್ಲಿನ ಜನರು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಕಾನೂನುಬದ್ಧವಾಗಿಯೇ ಮದುವೆಯಾಗಬಹುದು. ಹೀಗಾಗಿ ಈತ ಮೂವರನ್ನು ಮದುವೆಯಾಗಿದ್ದಾನೆ.
ಇದನ್ನೂ ಓದಿ: Pakistan Blast: ಪೇಷಾವರ್ ಮಸೀದಿಯಲ್ಲಿ ಭಾರಿ ಬಾಂಬ್ ವಿಸ್ಫೋಟ, 30 ಜನರ ಸಾವು, 50 ಮಂದಿಗೆ ಗಾಯ
ವಾಸ್ತವವಾಗಿ ಮೂವರು ಅವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಮೂವರನ್ನೂ ಒಟ್ಟಿಗೆ ಮದುಯಾಗಬೇಕೆಂದು ಈ ಸಹೋದರಿಯರು ವರನಿಗೆ ಷರತ್ತು ವಿಧಿಸಿದ್ದರಂತೆ. ಹೀಗಾಗಿ ಬೇರೆ ದಾರಿ ಕಾಣದೆ 32 ವರ್ಷದ ಲಿವಿಜೊ(Luvijo) ಎಂಬಾತ ಮೂವರನ್ನು ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ(Married Together).
ಲುವಿಜೊ ಜೊತೆಗೆ ನಾಡಗೆ, ನತಾಶಾ ಮತ್ತು ನಟಾಲಿ ಸಪ್ತಪದಿ ತುಳಿದಿದ್ದಾರೆ. ಮೂವರು ಸಹೋದರಿಯರು ನನ್ನನ್ನು ಪ್ರೀತಿಸುತ್ತಿದ್ದರು. ಅಲ್ಲದೆ ಒಮ್ಮೆಲೇ ಪ್ರೇಮ ನಿವೇದನೆ ಮಾಡಿದಾಗ ಅವರ ಪ್ರಸ್ತಾಪವನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಮೂವರನ್ನು ಒಟ್ಟಿಗೆ ಮದುವೆಯಾಗಲು ನಿರ್ಧರಿಸಿದೆ ಎಂದು ಲುವಿಜೊ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Russia-Ukrain War ನಿಂದ ನಿಮ್ಮ ಜೇಬಿನ ಮೇಲೆ ಏನು ಪ್ರಭಾವ?
ಲುವಿಜೊ ಮೊದಲು ನಟಾಲಿಯಾರನ್ನು ಸಾಮಾಜಿಕ ಮಾಧ್ಯಮ(Social Media)ದ ಮೂಲಕ ಪರಿಚಯಿಸಿಕೊಂಡಿದ್ದ. ನಂತರ ಆತನಿಗೆ ನಟಾಲಿಯಾರ ಇನ್ನಿಬ್ಬರು ಸಹೋದರಿಯರ ಪರಿಚಯವೂ ಆಯಿತು. ‘ಮೂವರು ಸಹೋದರಿಯರು ಒಂದೇ ದಿನ ಮದುವೆಯಾಗಬೇಕೆಂದು ಷರತ್ತು ಹಾಕಿದ್ದರಿಂದ ನನಗೆ ಯಾವುದೇ ಆಯ್ಕೆ ಇರಲಿಲ್ಲ. ಈ ನಿರ್ಧಾರ ನನಗೆ ತುಂಬಾ ಕಷ್ಟಕರವಾಗಿತ್ತು. ನಾನು ಇದಕ್ಕೆ ಏಕೆ ಒಪ್ಪಿದೆ ಎಂಬುವುದರ ಬಗ್ಗೆ ನನ್ನ ಹೆತ್ತವರಿಗೆ ಇನ್ನೂ ಅರ್ಥವಾಗುತ್ತಿಲ್ಲ. ನನ್ನ ನಿರ್ಧಾರ ಪೋಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರು ನನ್ನ ಮದುವೆ ಸಮಾರಂಭಕ್ಕೆ ಆಗಮಿಸಲಿಲ್ಲವೆಂದು’ ಲುವಿಜೊ ಹೇಳಿದ್ದಾನೆ.
ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಬೇಕು. ಹೀಗಾಗಿ ಬೇರೆಯವರು ಏನಾದರೂ ಅಂದುಕೊಳ್ಳಲಿ ಅಂತಾ ನಾನು ತ್ರಿವಳಿ ಸಹೋದರಿಯರನ್ನು ಮದುವೆಯಾದೆ. ವಿಶೇಷವೆಂದರೆ ಮೂವರನ್ನು ಒಟ್ಟಿಗೆ ಮದುವೆಯಾಗುವ ಪ್ರಸ್ತಾಪವನ್ನಿಟ್ಟಾಗ ಲುವಿಜೊ ಮೂರ್ಛೆ ಹೋಗಿದ್ದನಂತೆ. ಮೂವರು ಸಹೋದರಿಯರು ಕೂಡ ಬಾಲ್ಯದಿಂದಲೂ ಎಲ್ಲವನ್ನೂ ಹಂಚಿಕೊಂಡು ಬೆಳೆದಿದ್ದಾರೆ. ಹೀಗಾಗಿ ಗಂಡನನ್ನು ಹಂಚಿಕೊಳ್ಳುವುದು ಅವರಿಗೆ ಕಷ್ಟಕರವಾದ ಆಯ್ಕೆಯಾಗಿರಲಿಲ್ಲವಂತೆ. ಲುವಿಜೊನನ್ನು ಮದುವೆಯಾದ ನಂತರ ಎಲ್ಲಾ ಮೂವರು ಸಹೋದರಿಯರು ತುಂಬಾ ಸಂತೋಷವಾಗಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.