ನವದೆಹಲಿ: ನೀವು ತುಂಬಾ ಸೋಮಾರಿಗಳಾಗಿದ್ದರೆ(Lazy People) ಮತ್ತು ತೂಕ ಕಳೆದುಕೊಳ್ಳಲು ಬಯಸಿದರೆ ಇಲ್ಲಿದೆ ನೋಡಿ ಸುಲಭ ಮಾರ್ಗ. ನೀವು ಕಷ್ಟಪಟ್ಟು ಕೆಲಸ ಮಾಡದೆಯೇ ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಅನೇಕ ಜನರು ತಮ್ಮ ಜೀವನಶೈಲಿ(Lifestyle)ಯಲ್ಲಿ ಬದಲಾವಣೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳುವುದನ್ನು ನೀವು ನೋಡಿರಬೇಕು. ಆದರೆ ಇದು ಕೆಲವು ಸೋಮಾರಿಗಳಿಗೆ ಸಾಧ್ಯವಾಗುವುದಿಲ್ಲ. ಯಾರೇ ಆಗಲಿ ತೂಕ ಕಳೆದುಕೊಳ್ಳಲು ಪ್ರಯತ್ನಿಸಬೇಕು. ಪ್ರಯತ್ನಿಸದಿದ್ದರೆ ತೂಕ ಕಳೆದುಕೊಳ್ಳುವುದಿರಲಿ ಮತ್ತಷ್ಟು ತೂಕ ಜಾಸ್ತಿಯಾಗುತ್ತದೆ.
ನಿಮಗೆ ಕಷ್ಟಪಟ್ಟು ತೂಕ ಕಳೆದುಕೊಳ್ಳಲು(Weight Loss) ಸೋಮಾರಿತನ ಕಾಡಿದರೆ ಮಲಗುವಾಗ ಕೆಲ ವಿಷಯಗಳ ಬಗ್ಗೆ ಗಮನಹರಿಸಬೇಕು. ಇದು ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಹಾಗಾದರೆ ಸೋಮಾರಿಗಳು ಮಲಗುವ ಮುನ್ನ ಮಾಡಬೇಕಾದ ಕೆಲಸಗಳು ಯಾವುವು ಎಂದು ತಿಳಿದುಕೊಳ್ಳಿರಿ.
ಇದನ್ನೂ ಓದಿ: Belly Fat Reduce: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ 2 ಹಣ್ಣುಗಳಿಂದ ದೂರವಿರಿ
ಕಂಬಳಿ ಇಲ್ಲದೆ ಮಲಗಲು ಪ್ರಯತ್ನಿಸಿ
ಮೊದಲನೆಯದಾಗಿ ನೀವು ಕಂಬಳಿ ಇಲ್ಲದೆ(Sleep Without a Blanket) ಮಲಗಲು ಪ್ರಯತ್ನಿಸಬೇಕು. ನೀವು ತಂಪಾದ ತಾಪಮಾನದಲ್ಲಿ ಮಲಗಿದಾಗ, ನಿಮ್ಮ ಚಯಾಪಚಯವು ಹೆಚ್ಚಾಗುತ್ತದೆ. ರಾತ್ರಿಯಲ್ಲಿ ತಣ್ಣಗಾಗುವುದರಿಂದ ನಮ್ಮ ದೇಹದಲ್ಲಿ ಆರೋಗ್ಯಕರ ಕಂದು ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ದೇಹವು ಹೆಚ್ಚುವರಿ ರಕ್ತದಲ್ಲಿನ ಸಕ್ಕರೆಯನ್ನು ತೊಡೆದುಹಾಕಲು ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಕಂಬಳಿ ಇಲ್ಲದೆ ಮಲಗಲು ಪ್ರಯತ್ನಿಸಿ.
ರಾತ್ರಿಯಲ್ಲಿ 1 ಗಂಟೆ ಹೆಚ್ಚು ನಿದ್ರೆ ಮಾಡಿ
ನೀವು ರಾತ್ರಿಯಲ್ಲಿ 1 ಗಂಟೆ ಹೆಚ್ಚು ನಿದ್ರೆ ಮಾಡಿದರೆ(Sleeping)ತೂಕ ಕಡಿಮೆಯಾಗಲು ಸಹಾಯವಾಗುತ್ತದೆ. ಅನೇಕ ಕಾಯಿಲೆಗಳಿಗೆ ನಿದ್ರೆಯೇ ಬಹುದೊಡ್ಡ ರಾಮಬಾಣವಾಗಿದೆ. ಅಂದರೆ ಹೆಚ್ಚು ಹೆಚ್ಚು ನಿದ್ದೆ ಮಾಡುವುದರಿಂದ ತೂಕ ಕಡಿಮೆ ಕಡಿಮೆಯಾಗುವುದರ ಜೊತೆಗೆ ಮಾನಸಿಕ ಶಾಂತಿಯು ಲಭಿಸುತ್ತದೆ.
ಇದನ್ನೂ ಓದಿ: Skin Care: ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಟೊಮ್ಯಾಟೋ
ಮಲಗುವ ಮುನ್ನ ಪ್ರೋಟೀನ್ ಶೇಕ್ ಕುಡಿಯಿರಿ
ಮಲಗುವ ಮುನ್ನ ಪ್ರೋಟೀನ್ ಶೇಖ್(Protein Shake) ಸೇವಿಸಿದರೂ ಸಹ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರೋಟೀನ್ ಕಾರ್ಬೋಹೈಡ್ರೇಟ್‌ಗಳು ಅಥವಾ ಕೊಬ್ಬಿಗಿಂತ ಹೆಚ್ಚು ಥರ್ಮೋಜೆನಿಕ್ ಎಂದು ನಂಬಲಾಗಿದೆ. ಇದು ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಜೀರ್ಣಿಸಿಕೊಳ್ಳಲು ಕಾರಣವಾಗುತ್ತದೆ.
ಸ್ಲೀಪ್ ಮಾಸ್ಕ್ ಧರಿಸಿ ಮಲಗಿ
ಸ್ಲೀಪ್ ಮಾಸ್ಕ್(Sleep Mask) ಧರಿಸುವುದಕ್ಕೂ ತೂಕ ನಷ್ಟಕ್ಕೂ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ? ಮಂದ ಬೆಳಕಿನಲ್ಲಿ ಮಲಗುವ ಜನರು ಶೇ.21ರಷ್ಟು ಬೊಜ್ಜು ಹೊಂದುವ ಸಾಧ್ಯತೆಯಿದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಳಕಿನಲ್ಲಿ ಮಲಗುವ ಜನರು ಸ್ಲೀಪ್ ಮಾಸ್ಕ್ ಧರಿಸಿ ಮಲಗಬೇಕು.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.