Ukraine President : ಉಕ್ರೇನ್ ಬಿಟ್ಟು ಓಡಿ ಹೋದರಾ ಅಧ್ಯಕ್ಷ ಝೆಲೆನ್ಸ್ಕಿ? ವಿಡಿಯೋ ಮೂಲಕ ಹೊರಬಿತ್ತು ಸತ್ಯ 

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಾಜಧಾನಿ ಕೀವ್ ತೊರೆದಿದ್ದಾರೆ ಎಂಬ ವದಂತಿಗಳು ಹೊರಬಿದ್ದಿವೆ. ಇದಾದ ನಂತರ ಸ್ವತಃ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ದೇಶದಲ್ಲೇ ಸಿಲುಕಿಕೊಂಡಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದ್ದಾರೆ. ಅವರು ಕೀವ್ನಲ್ಲಿ ನಿಂತು ಉಕ್ರೇನ್ ಜನರನ್ನು ರಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ. 

Written by - Channabasava A Kashinakunti | Last Updated : Feb 26, 2022, 11:52 AM IST
  • ಅಧ್ಯಕ್ಷ ಝೆಲೆನ್ಸ್ಕಿ ಎರಡನೇ ವೀಡಿಯೊ ಬಿಡುಗಡೆ
  • ದೇಶ ತೊರೆದಿರುವ ಬಗ್ಗೆ ನಿರಾಕರಣೆ
  • ಈಗಾಗಲೇ ವಿಡಿಯೋ ಬಿಡುಗಡೆ ಮಾಡಿದ್ದಾರೆ
Ukraine President : ಉಕ್ರೇನ್ ಬಿಟ್ಟು ಓಡಿ ಹೋದರಾ ಅಧ್ಯಕ್ಷ ಝೆಲೆನ್ಸ್ಕಿ? ವಿಡಿಯೋ ಮೂಲಕ ಹೊರಬಿತ್ತು ಸತ್ಯ  title=

ಕೀವ್ : ರಷ್ಯಾ ಮತ್ತು ಉಕ್ರೇನ್(Ukraine Russia War) ನಡುವಿನ ಯುದ್ಧದ ಇಂದು ಮೂರನೇ ದಿನಕ್ಕೆ ಮುಂದುವರೆದಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಾಜಧಾನಿ ಕೀವ್ ತೊರೆದಿದ್ದಾರೆ ಎಂಬ ವದಂತಿಗಳು ಹೊರಬಿದ್ದಿವೆ. ಇದಾದ ನಂತರ ಸ್ವತಃ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ದೇಶದಲ್ಲೇ ಸಿಲುಕಿಕೊಂಡಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದ್ದಾರೆ. ಅವರು ಕೀವ್ನಲ್ಲಿ ನಿಂತು ಉಕ್ರೇನ್ ಜನರನ್ನು ರಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ. 

ದೇಶದಿಂದ ಪಲಾಯನ ಮಾಡುವ ವದಂತಿಗಳನ್ನು ನಿರಾಕರಿಸಿದ ಅಧ್ಯಕ್ಷ ಝೆಲೆನ್ಸ್ಕಿ

ದೇಶದಿಂದ ಪಲಾಯನ ಮಾಡುವ ವದಂತಿಗಳನ್ನು ನಿರಾಕರಿಸಿದ ಝೆಲೆನ್ಸ್ಕಿ(Volodymyr Zelenskyy) ನಾವು ಕೀವ್ನಲ್ಲಿದ್ದೇವೆ ಮತ್ತು ನನ್ನ ದೇಶದ ಜನತೆಯನ್ನ ರಕ್ಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ವೀಡಿಯೊದಲ್ಲಿ, ಅವರು ತಮ್ಮ ಸಲಹೆಗಾರರು ಮತ್ತು ಪ್ರಧಾನಿಯಿಂದ ಸುತ್ತುವರಿದಿರುವುದನ್ನು ಕಾಣಬಹುದು. ತಡರಾತ್ರಿಯಲ್ಲಿ  ವಿಡಿಯೋ ಶೂಟ್ ಮಾಡಲಾಗಿದೆ.

ಇದನ್ನೂ ಓದಿ : ಉಕ್ರೇನ್-ರಷ್ಯಾ ಯುದ್ಧದ 2ನೇ ದಿನ ಏನಾಯಿತು? ಉಕ್ರೇನ್ ನಾಗರಿಕರಿಂದ ಭಾರತ ಏನು ಕಲಿಯಬಹುದು?

ಈಗಾಗಲೇ ವಿಡಿಯೋ ಬಿಡುಗಡೆ ಮಾಡಿದ್ದಾರೆ

ಯುದ್ಧ ಪ್ರಾರಂಭವಾದ ನಂತರ ಇದು ಉಕ್ರೇನ್ ಅಧ್ಯಕ್ಷರ(Ukraine President) ಎರಡನೇ ವೀಡಿಯೊವಾಗಿದೆ. ಇದಕ್ಕೂ ಮೊದಲು, ಝೆಲೆನ್ಸ್ಕಿ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಭಾವನಾತ್ಮಕ ಮನವಿ ಮಾಡಿದರು. ನಾನು, ನನ್ನ ಕುಟುಂಬ ಮತ್ತು ನನ್ನ ಮಕ್ಕಳು ಎಲ್ಲರೂ ಉಕ್ರೇನ್‌ನಲ್ಲಿದ್ದೇವೆ ಎಂದು ಹೇಳಿದ್ದರು. ಅವರು ದೇಶದ್ರೋಹಿಗಳಲ್ಲ, ಅವರು ಉಕ್ರೇನ್ ಪ್ರಜೆಗಳು. ಉಕ್ರೇನ್ ಅಧ್ಯಕ್ಷರು 'ನಾನು ರಷ್ಯಾದ ಮೊದಲ ಗುರಿಯಾಗಿದ್ದೇನೆ, ಆದರೆ ನನ್ನ ಕುಟುಂಬವು ಅವರ ಎರಡನೇ ಗುರಿಯಾಗಿದೆ' ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಹೇಳಿದರು. ರಷ್ಯಾ ಅವರನ್ನು ಮುಗಿಸಲು ಬಯಸುತ್ತದೆ ಮತ್ತು ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸುತ್ತದೆ ಎಂದು ಅವರು ವಿಡಿಯೋದಲ್ಲಿ  ಹೇಳಿದರು.

UNSC  ಪ್ರಸ್ತಾವನೆಯನ್ನು ರಷ್ಯಾ ವೀಟೋ ಮಾಡಿದೆ

ಉಕ್ರೇನ್ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ನಿರ್ಣಯವನ್ನು ರಷ್ಯಾ ವೀಟೋ ಮೂಲಕ ಶಕ್ತಿ ಪ್ರದರ್ಶಿಸುತ್ತಿದೆ. ಆದರೆ, ಪರಿಷತ್ತಿನ 15 ಸದಸ್ಯರ ಪೈಕಿ 11 ಸದಸ್ಯರು ಈ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಂದು ದೇಶವು ಅದರ ವಿರುದ್ಧ ಮತ ಚಲಾಯಿಸಿದೆ. ಈ ಖಂಡನಾ ನಿರ್ಣಯದಲ್ಲಿ ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತ ಚಲಾಯಿಸಿಲ್ಲ.

ಇದನ್ನೂ ಓದಿ : ರಷ್ಯಾದಿಂದ ರಾಜಧಾನಿ ಕೀವ್ ಉಳಿಸಲು ಹೆಣಗಾಡುತ್ತಿರುವ ಉಕ್ರೇನ್ ರಸ್ತೆಗಳ ಸ್ಥಿತಿ ಹೇಗಿದೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News