ಮಾರುತಿ ಸುಜುಕಿಯು ಈ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಲಾಗಿದ್ದು, ಕಾರಿಗೆ ಹೊಸ ಲುಕ್ ನೀಡಲಾಗಿದೆ.
ನವದೆಹಲಿ : ಮಾರುತಿ ಸುಜುಕಿ ಭಾರತದಲ್ಲಿ 2022 ಬಲೆನೊವನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿಯ ಈ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 6.35 ಲಕ್ಷ ರೂ. ಆಗಿದೆ. ಅಲ್ಲದೆ, ಈ ಕಾರಿನಲ್ಲಿ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದುವರೆಗೆ 25,000 ಗ್ರಾಹಕರು ಈ ಕಾರನ್ನು ಬುಕ್ ಮಾಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದಲೂ, 2022 ಬಲೆನೊ ಮೊದಲಿಗಿಂತ ಉತ್ತಮವಾಗಿದೆ. ಮಾರುತಿ ಸುಜುಕಿಯು ಈ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಲಾಗಿದ್ದು, ಕಾರಿಗೆ ಹೊಸ ಲುಕ್ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹೊಸ ಬಲೆನೊ ಮೈಲೇಜ್ ಕೂಡ ಪ್ರಬಲವಾಗಿದೆ. ಕಾರಿನ ಮ್ಯಾನುವಲ್ ರೂಪಾಂತರವು, ಒಂದು ಲೀಟರ್ ಪೆಟ್ರೋಲ್‌ನಲ್ಲಿ, 22.35 kmpl ನೀಡುತ್ತದೆ ಮತ್ತು AMT ರೂಪಾಂತರವು 22.94 kmpl ಮೈಲೇಜ್ ನೀಡುತ್ತದೆ.
ಹೊಸ ಮಾರುತಿ ಸುಜುಕಿ ಬಲೆನೊ 360-ಡಿಗ್ರಿ ಕ್ಯಾಮೆರಾ ವ್ಯೂ ಮತ್ತು ಸಂಪರ್ಕಿತ ಕಾರು ತಂತ್ರಜ್ಞಾನವನ್ನು ಒಳಗೊಂಡಿರುವ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಹೊಸ ಬಲೆನೊವನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿಸಿದ್ದು, ಇದಕ್ಕಾಗಿ 6 ಏರ್‌ಬ್ಯಾಗ್‌ಗಳನ್ನು ಕಾರಿನೊಂದಿಗೆ ನೀಡಲಾಗಿದೆ.
ಕಂಪನಿಯು 2022 ಬಲೆನೊದ ಒಳ ಮತ್ತು ಹೊರಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಕಾರಣದಿಂದಾಗಿ ಈ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸ್ಪರ್ಧೆಯಲ್ಲಿ ಮುಂದಿದೆ.
2022 ಬಲೆನೊ ಬುಕಿಂಗ್ ಅನ್ನು ಕಂಪನಿಯು ಕೆಲವು ಸಮಯದ ಹಿಂದೆ ಪ್ರಾರಂಭಿಸಿದೆ ಮತ್ತು ಈ ಕಾರನ್ನು ಬಿಡುಗಡೆ ಮಾಡುವವರೆಗೆ ಕಂಪನಿಯು 25,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ.
ಮಾರುತಿ ಸುಜುಕಿ ಈ ಕಾರಿನ ಸ್ಟೈಲಿಂಗ್ ಮತ್ತು ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರಿಂದಾಗಿ ಹೊಸ ಬಲೆನೊ ನೋಟದಲ್ಲಿ ಬಹಳ ಆಕರ್ಷಕವಾಗಿದೆ.