ನವದೆಹಲಿ: Corona Super Universal Vaccine - ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕರೋನಾದಿಂದ ಉಂಟಾದ ವಿನಾಶವನ್ನು ಕಂಡಿವೆ. ಕಳೆದ ವರ್ಷ ಎರಡನೇ ಅಲೆಯ (Covid-19 Second Wave) ಸಮಯದಲ್ಲಿ ಭಾರತದಲ್ಲಿ ಅನೇಕ ಸಾವುಗಳು ಸಂಭವಿಸಿವೆ. ಆದರೆ, ಮೂರನೇ ಅಲೆಯ ಸಮಯದಲ್ಲಿ (Covid-19 Third Wave) ದೇಶದಲ್ಲಿ ಯಾವುದೇ ಗಂಭೀರ ಪರಿಣಾಮ ಉಂಟಾಗಿಲ್ಲ. ಕೊರೊನಾ ವೈರಸ್ ಮೊದಲಿನಿಂದಲೂ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಲೇ ಬಂದಿದೆ. ಡೆಲ್ಟಾ ಮತ್ತು ಓಮಿಕ್ರಾನ್ನಂತಹ ಅದರ ಹಲವು ರೂಪಾಂತರಗಳನ್ನು ಜನರು ನೋಡಿದ್ದಾರೆ. ಯಾವುದೇ ಲಸಿಕೆ ಎಲ್ಲಾ ರೂಪಾಂತರಗಳ ವಿರುದ್ಧ ಕಾರ್ಯನಿರ್ವಹಿಸುವುದಿಲ್ಲ ಎಂದು ಹಲವು ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ ಅನೇಕ ದೇಶಗಳಲ್ಲಿ, ಲಸಿಕೆಯ ಬೂಸ್ಟರ್ ಡೋಸ್ಗಳನ್ನು (Anti-Covid-19 Booster Dose) ಪರಿಚಯಿಸಲು ನಿರ್ಧರಿಸಲಾಗಿದೆ.
ವೇರಿಯಂಟ್ ಪ್ರೂಫ್ ಯುನಿವರ್ಸಲ್ ವ್ಯಾಕ್ಸಿನ್ (Variant Proof Universal Vaccine) ತಯಾರಿಕೆಗೆ ತೀವ್ರಗೊಂಡ ಸಿದ್ಧತೆಗಳು
ಇದೆಲ್ಲದರ ನಡುವೆ ಸಾರ್ವತ್ರಿಕ ಲಸಿಕೆ ತಯಾರಿಸುವ ಚರ್ಚೆಗಳು ವೇಗ ಪಡೆದುಕೊಂಡಿವೆ. ಯುನಿವರ್ಸಲ್ ಲಸಿಕೆ ಎಂದರೆ ಕರೋನಾದ ಎಲ್ಲಾ ರೂಪಾಂತರಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದೇ ಲಸಿಕೆ ಎಂದರ್ಥ. 'ನೇಚರ್' ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವು 'ವೇರಿಯಂಟ್ ಪ್ರೂಫ್' ಲಸಿಕೆಯನ್ನು ತಯಾರಿಸುವ ಬಗ್ಗೆ ಮಾತನಾಡುತ್ತದೆ. ಈ ಲೇಖನವು 'ಬೂಸ್ಟರ್ ಡೋಸ್ ಒದಗಿಸುವ ರಕ್ಷಣೆಯು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ' ಎಂದು ಹೇಳಿದೆ. ಸೋಂಕನ್ನು ಹಾಗೂ ಗಂಭೀರ ಕಾಯಿಲೆಯನ್ನು ತಡೆಯುವ ಇಂತಹ ಲಸಿಕೆಯ ಅಗತ್ಯವನ್ನು ಲೇಖನವು ಒತ್ತಿ ಹೇಳುತ್ತದೆ.
ಇದನ್ನೂ ಓದಿ-Russia-Ukraine Crisis: ಉಕ್ರೇನ್ ವಿರುದ್ಧ ರಷ್ಯಾದ 'ರಾಸಾಯನಿಕ ಸಂಚು'? ವಿಶ್ವದ ದೊಡ್ಡಣ್ಣ ಹೇಳಿದ್ದೇನು?
ಇಂತಹ ವ್ಯಾಕ್ಸಿನ್ ತಯಾರಿಸುವುದು ಸಾಧ್ಯ
ಸಾರ್ವತ್ರಿಕ ಲಸಿಕೆಗಳ ಚರ್ಚೆ ಹೊಸದಲ್ಲ, ಆದರೆ, ವಿಜ್ಞಾನಿಗಳು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಯುನಿವರ್ಸಲ್ ಫ್ಲೂಗೆ ಲಸಿಕೆಯನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಲಸಿಕೆಯ ಪ್ರಯೋಗಗಳು 2019 ರಲ್ಲಿ ಪ್ರಾರಂಭವಾಗಿವೆ. ಆದರೆ ಅದನ್ನು ಇನ್ನೂ ಮಾರುಕಟ್ಟೆಗೆ ಅನುಮೋದಿಸಲಾಗಿಲ್ಲ. ಕೋವಿಡ್ ರೂಪಾಂತರಗಳು ಮತ್ತು ಭವಿಷ್ಯದ ಕರೋನಾಗೆ ಸಾರ್ವತ್ರಿಕ ಲಸಿಕೆ ಶೀಘ್ರದಲ್ಲೇ ಬರುವುದಿಲ್ಲ ಎಂದು ಫೌಚಿ ಮತ್ತು ಇತರ ತಜ್ಞರು ನಂಬಿದ್ದಾರೆ. ಆದರೆ ಹೊಸ ಸಂಶೋಧನೆಯು ಅಂತಹ ಲಸಿಕೆಯನ್ನು ಮಾಡಲು ಸಾಧ್ಯ ಎಂದು ಸೂಚಿಸುತ್ತದೆ.
ವ್ಯಾಕ್ಸಿನ್ ಈ ರೀತಿ ಕಾರ್ಯನಿರ್ವಹಿಸಲಿದೆ.
ರೂಪ ಬದಲಾಯಿಸಿದ ನಂತರವೂ ಕೂಡ ಹಾಗೆಯೇ ಉಳಿಯುವ ವೈರಸ್ ನ ಭಾಗಗಳ ಮೇಲೆ ಈ ಯುನಿವರ್ಸಲ್ ಲಸಿಕೆ ಪ್ರಹಾರ ನಡೆಸಲಿದೆ. ಈ ಭಾಗಗಳನ್ನು ಗುರುತಿಸಲು ಒಂದು ವೇಳೆ ಪ್ರತಿರಕ್ಷಣಾ ವ್ಯವಸ್ಥೆಯು ತರಬೇತಿ ಪಡೆದರೆ, ಅಂತಹ ಲಸಿಕೆಯನ್ನು ತಯಾರಿಸುವುದು ದೂರದ ಸಂಗತಿಯಲ್ಲಿ. US ಸೇನೆಯ ವಾಲ್ಟರ್ ರೀಡ್ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ತನ್ನ ಪ್ಯಾನ್-ಕೊರೊನಾವೈರಸ್ ಲಸಿಕೆಯ ಹಂತ 1 ಫಲಿತಾಂಶಗಳಿಗಾಗಿ ಕಾಯುತ್ತಿದೆ. ಇದಲ್ಲದೇ ಡಿಯೋಸಿನ್ ಎಂಬ ಕಂಪನಿ ಕೂಡ ಇದೇ ರೀತಿಯ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗಾಗಿ ಯೂನಿವರ್ಸ್ ಲಸಿಕೆ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ-Russia-Ukraine Crisis: ರಷ್ಯಾ ದಾಳಿಯ ಭೀತಿ, ಉಕ್ರೇನ್ ನಲ್ಲಿ AK-47 ಹಿಡಿದ 79ರ ಇಳಿವಯಸ್ಸಿನ ಅಜ್ಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ