ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗ ದೇಶದಾದ್ಯಂತ ವ್ಯಾಪಿಸಿದ ಬಳಿಕ ನಾವು ಮನೆಯಿಂದ ಹೊರಬರಬೇಕು, ಚಲನಚಿತ್ರಗಳನ್ನು ನೋಡಬೇಕು ಅನ್ನೋ ಆಸೆ ನಗಣ್ಯವಾಗಿದೆ. ಹೀಗಾಗಿ ನಿಮಗೆ ಮನರಂಜನೆ ನೀಡಲು ಉತ್ತಮ ಸ್ಮಾರ್ಟ್ ಟಿವಿ ಅಗತ್ಯವಾಗಿರುತ್ತದೆ. ಇಂದು ನಾವು ನಿಮಗಾಗಿ ಕೆಲವು ಉತ್ತಮ ಸ್ಮಾರ್ಟ್ ಟಿವಿ ಆಫರ್ಗಳ ಮಾಹಿತಿ ನೀಡಲಿದ್ದೇವೆ. ಇವುಗಳ ಖರೀದಿ ಮೇಲೆ ನಿಮಗೆ ದೊಡ್ಡ ರಿಯಾಯಿತಿ ಸಿಗುತ್ತಿದೆ. ಈ ಸ್ಮಾರ್ಟ್ ಟಿವಿಗಳು Mi, Samsung ಮತ್ತು Redmi ನಂತಹ ಉನ್ನತ ಬ್ರಾಂಡ್ಗಳನ್ನು ಒಳಗೊಂಡಿವೆ. ಈ ಸ್ಮಾರ್ಟ್ ಟಿವಿ ಡೀಲ್ಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
15 ಸಾವಿರದೊಳಗೆ Samsung Smart TV ಖರೀದಿಸಿ
ಬಜೆಟ್ ಬೆಲೆಗೆ Samsung 80 cm (32 inch) Wondertainment Series HD Ready LED Smart TV ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 20,900 ರೂ. ಇದೆ, ಆದರೆ Amazonನಲ್ಲಿ ಶೇ.14ರಷ್ಟು ರಿಯಾಯಿತಿ ನಂತರ ಇದು ನಿಮಗೆ 17,990 ರೂ.ಗೆ ಸಿಗಲಿದೆ. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನವನ್ನು ಪಡೆದಾಗ ನೀವು 2,410 ರೂ.ಗಳ ರಿಯಾಯಿತಿ ಪಡೆಯುತ್ತೀರಿ ಮತ್ತು ಬ್ಯಾಂಕ್ ಕೊಡುಗೆಯಡಿ HDFC ಬ್ಯಾಂಕ್ ಮಿಲೇನಿಯಾ ಕ್ರೆಡಿಟ್ ಕಾರ್ಡ್ ಮತ್ತು HSBC ಕ್ಯಾಶ್ಬ್ಯಾಕ್ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿದರೆ ನೀವು ಶೇ5ರಷ್ಟು ಅಂದರೆ 900 ರೂ. ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಒಟ್ಟಾರೆ ನೀವು ಈ ಸ್ಮಾರ್ಟ್ ಟಿವಿಯನ್ನು 14,680 ರೂ.ಗೆ ಖರೀದಿಸಬಹುದು.
ಇದನ್ನೂ ಓದಿ: SIM Swapping Scam: ಈ ಅಪಾಯಕಾರಿ ಸಿಮ್ ಕಾರ್ಡ್ ಹಗರಣದ ಬಗ್ಗೆ ಎಚ್ಚರದಿಂದಿರಿ! ಚಿಟಿಕೆಯಲ್ಲಿ ಕೈ ಖಾಲಿಯಾಗಬಹುದು!
LG ಸ್ಮಾರ್ಟ್ ಟಿವಿಗಳಲ್ಲಿ ದೊಡ್ಡ ರಿಯಾಯಿತಿ
ಅಮೆಜಾನ್ನಿಂದ LG 80 cm (32 inch) HD ರೆಡಿ LED ಟಿವಿ ಖರೀದಿಸಿದರೆ ನೀವು ಇದಕ್ಕೆ 27,990 ರೂ.ಗಳ ಬದಲಿಗೆ 19,890 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಖರೀದಿಸುವಾಗ HDFC ಬ್ಯಾಂಕ್ ಮಿಲೇನಿಯಾ ಕ್ರೆಡಿಟ್ ಕಾರ್ಡ್ ಮತ್ತು HSBC ಕ್ಯಾಶ್ಬ್ಯಾಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನೀವು 995 ರೂ. ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಪೂರ್ಣ ವಿನಿಮಯ ಕೊಡುಗೆಯನ್ನು ಪಡೆದುಕೊಂಡರೆ ನೀವು 2,410 ರೂ. ಉಳಿಸಲು ಸಾಧ್ಯವಾಗುತ್ತದೆ. ನೀವು ಈ ಟಿವಿಯನ್ನು 16,485 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು.
Miನ ಈ ಸ್ಮಾರ್ಟ್ ಟಿವಿಯನ್ನು 20 ಸಾವಿರಕ್ಕೆ ಖರೀದಿಸಿ
Amazon ನಲ್ಲಿ Mi 100 cm (40 inch) Horizon Edition Full HD Android LED TV 4A ಸ್ಮಾರ್ಟ್ ಟಿವಿ 29,999 ರೂ. ಬದಲಿಗೆ ನಿಮಗೆ 23,999 ರೂ.ಗೆ ಲಭ್ಯವಿರುತ್ತದೆ. HDFC ಬ್ಯಾಂಕ್ ಮಿಲೇನಿಯಾ ಕ್ರೆಡಿಟ್ ಕಾರ್ಡ್ ಮತ್ತು HSBC ಕ್ಯಾಶ್ಬ್ಯಾಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ.5ರಷ್ಟು ಕ್ಯಾಶ್ಬ್ಯಾಕ್ ಅಂದರೆ 1,200 ರೂ.ಗಳನ್ನು ಪಡೆಯುತ್ತೀರಿ. ಪೂರ್ಣ ವಿನಿಮಯ ಕೊಡುಗೆಯನ್ನು ಪಡೆದಲ್ಲಿ 2,410 ರೂ.ಗಳ ಡಿಸ್ಕೌಂಟ್ ಸಿಗುತ್ತದೆ. ಆಗ ನೀವು ಈ ಸ್ಮಾರ್ಟ್ ಟಿವಿಯನ್ನು 19,880 ರೂ.ಗೆ ಖರೀದಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Whatsapp Update: WhatsApp ಜಾರಿಗೆ ತರುತ್ತಿದೆ ವಿಭಿನ್ನ ವೈಶಿಷ್ಟ್ಯ!
ಅಗ್ಗವಾಗಿ ಖರೀದಿಸಿ Redmi 50 ಇಂಚಿನ ಸ್ಮಾರ್ಟ್ ಟಿವಿ
ನೀವು ದೊಡ್ಡ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ Redmi 126 cm (50 inch) 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ ಉತ್ತಮ ಆಯ್ಕೆಯಾಗಿದೆ. ಈ ಟಿವಿ ಅಮೆಜಾನ್ನಲ್ಲಿ ಶೇ.20ರಷ್ಟು ರಿಯಾಯಿತಿಯ ನಂತರ 44,999 ರೂ. ಬದಲಿಗೆ 35,999 ರೂ.ಗೆ ಸಿಗುತ್ತದೆ. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು 2,410 ರೂ. ಉಳಿಸಲು ಸಾಧ್ಯವಾಗುತ್ತದೆ. ಇದನ್ನು ಖರೀದಿಸುವಾಗ ಸಿಟಿ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ 2 ಸಾವಿರ ರೂ.ಗಳ ತ್ವರಿತ ರಿಯಾಯಿತಿ ಸಹ ಪಡೆಯುತ್ತೀರಿ. ಈ ರೀತಿ ನೀವು ಈ ಸ್ಮಾರ್ಟ್ ಟಿವಿಯನ್ನು ಕೇವಲ 31,589 ರೂ.ಗೆ ಖರೀದಿಸಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.