ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯಲ್ಲಿ ಭಾರೀ ಬದಲಾವಣೆಯಾಗಲಿದೆ. ವಾಸ್ತವವಾಗಿ ಫೆಬ್ರವರಿ 23ರಂದು ಗುರುಗ್ರಹವು ಕುಂಭರಾಶಿಯಲ್ಲಿ ಅಸ್ತಮಿಸಲಿದೆ. ಇದಾದ ಬಳಿಕ ಫೆಬ್ರವರಿ 26ರಂದು ಮಂಗಳ ಗ್ರಹ ಮಕರ ರಾಶಿಗೆ ಪ್ರವೇಶಿಸಲಿದೆ. ನಂತರ ಮರುದಿನ ಶುಕ್ರನೂ ಈ ರಾಶಿಗೆ ಪ್ರವೇಶಿಸುತ್ತಾನೆ. ಇದರ ಪರಿಣಾಮ ಮಾರ್ಚ್ 6ರವರೆಗೆ ಉಳಿಯುವ ಚತುರ್ಗ್ರಾಹಿ ಯೋಗ(Chaturgrahi Yoga)ವು ರೂಪುಗೊಳ್ಳುತ್ತದೆ. ಫೆಬ್ರವರಿ 27ರಂದು ಶನಿಯು ಮಕರ ರಾಶಿಯಲ್ಲಿ ಉದಯಿಸುತ್ತಾನೆ. ಗ್ರಹಗಳ ಈ ಹಠಾತ್ ಹಿಮ್ಮುಖ ಚಲನೆಯಿಂದ ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ.
ಕುಂಭ ರಾಶಿಯಲ್ಲಿ ಅಸ್ತಮಿಸಲಿರುವ ಗುರು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ 23ರಂದು ದೇವಗುರು ಗುರುವು ಕುಂಭ ರಾಶಿ(Guru Asta)ಯಲ್ಲಿ ಅಸ್ತಮಿಸಲಿದೆ. ದೇವಗುರು ಬೃಹಸ್ಪತಿ ಮಾರ್ಚ್ 27ರವರೆಗೆ ಇದೇ ರಾಶಿಯಲ್ಲಿರುತ್ತದೆ. ಗುರುವಿನ ಅಸ್ಥಿತ್ವವು ಮೇಷ, ಮಿಥುನ, ಸಿಂಹ, ತುಲಾ ಮತ್ತು ಮಕರ ರಾಶಿಯವರಿಗೆ ಮಂಗಳಕರವೆಂದು ಸಾಬೀತುಪಡಿಸುತ್ತದೆ. ಆದರೆ ಗುರುಗ್ರಹವು ವೃಷಭ, ಕರ್ಕ, ಕನ್ಯಾ, ಧನು, ಕುಂಭ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ತೊಂದರೆ ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರು ಸ್ವಲ್ಪ ಜಾಗರೂಕರಾಗಿರಬೇಕು.
ಇದನ್ನೂ ಓದಿ: Inauspicious Kundli Yoga: ಯಾರ ಜನ್ಮ ಜಾತಕದಲ್ಲಿ ಈ ಗ್ರಹಗಳಿರುತ್ತವೆಯೋ ಅವರಿಗೆ ಸಾಲಬಾಧೆ ತಪ್ಪಿದ್ದಲ್ಲ
ಫೆಬ್ರವರಿ 26ರಂದು ಮಂಗಳ ಗ್ರಹ ಮಕರ ರಾಶಿ ಪ್ರವೇಶಿಸಲಿದೆ
ಫೆಬ್ರವರಿ 26ರಂದು ಮಂಗಳವು ಮಕರ ರಾಶಿಯಲ್ಲಿ ಸಾಗಲಿದೆ. ಇದರಿಂದ ವೃಶ್ಚಿಕ, ಸಿಂಹ ಮತ್ತು ಮೀನ ರಾಶಿಯವರಿಗೆ ಲಾಭವಾಗಲಿದೆ. ಮತ್ತೊಂದೆಡೆ ಮೇಷ, ವೃಷಭ, ಮಿಥುನ, ಕರ್ಕ, ಕನ್ಯಾ, ತುಲಾ, ಧನು ರಾಶಿ, ಮಕರ ಮತ್ತು ಕುಂಭ ರಾಶಿಯ ಜನರು ಜಾಗರೂಕರಾಗಿರಬೇಕು.
ಫೆ.27ರಂದು ಉದಯಿಸಲಿರುವ ಶನಿ
ಫೆಬ್ರವರಿ 27ರಂದು ಶನಿದೇವನು ಮಕರ ರಾಶಿಯಲ್ಲಿ ಉದಯಿಸುತ್ತಾನೆ. ವೃಶ್ಚಿಕ, ಸಿಂಹ ಮತ್ತು ಮೀನ ರಾಶಿಯವರಿಗೆ ಶನಿದೇವನ ಉದಯದಿಂದ ಲಾಭವಾಗಲಿದೆ. ಕರ್ಕಾಟಕ, ಮಿಥುನ, ವೃಷಭ, ಮೇಷ, ಕನ್ಯಾ, ಮಕರ, ತುಲಾ, ಧನು ರಾಶಿ ಮತ್ತು ಕುಂಭ ರಾಶಿಯವರು ಜಾಗರೂಕರಾಗಿರಬೇಕು.
ಇದನ್ನೂ ಓದಿ: ರತ್ನದ ಉಂಗುರ ತೊಟ್ಟರೂ ಅದೃಷ್ಟ ಬದಲಾಗುತ್ತಿಲ್ಲ.. ಹಾಗಾದರೆ ಖಂಡಿತ ಈ ಕೆಲಸ ಮಾಡಿ
ಫೆ.27ರಂದು ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ
ಫೆಬ್ರವರಿ 27ರಂದು ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ವಾಸ್ತವವಾಗಿ ಶುಕ್ರನ ಈ ಬದಲಾವಣೆ(Rashi Parivartan)ಯು 27ರ ಬದಲಿಗೆ 59 ದಿನಗಳಲ್ಲಿ ಸಂಭವಿಸುತ್ತದೆ. ಮೇಷ, ಕರ್ಕಾಟಕ ಮತ್ತು ಸಿಂಹ ರಾಶಿಯವರಿಗೆ ಶುಕ್ರನ ಈ ಸಂಕ್ರಮವು ತುಂಬಾ ಮಂಗಳಕರವಾಗಿರುತ್ತದೆ. ಮತ್ತೊಂದೆಡೆ ಇದು ವೃಷಭ, ಮೀನ, ಮಿಥುನ, ಕುಂಭ, ಕನ್ಯಾ, ಮಕರ, ತುಲಾ, ವೃಶ್ಚಿಕ ಮತ್ತು ಧನು ರಾಶಿಯ ಜನರಿಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.