Vastu Shastra: ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ಅನೇಕರಿಗೆ ಇನ್ನೂ ತಿಳಿದಿಲ್ಲ. ಈ ಕಾರಣದಿಂದಲೇ ಅವರು ದೈನಂದಿನ ಜೀವನದಲ್ಲಿ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಇಂತಹ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಅದು ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತುವಿನ ಪರಿಣಾಮ ಮನೆಯಿಂದ ಹೊರಗೂ ಗೋಚರಿಸುತ್ತದೆ. ಸಾಮಾನ್ಯವಾಗಿ ಜನರು ಮನೆಯಲ್ಲಿನ ಸಣ್ಣ ವಸ್ತುಗಳನ್ನು ನಿರ್ಲಕ್ಷಿಸುತ್ತಾರೆ. ವಾಸ್ತವವಾಗಿ ಈ ತಪ್ಪುಗಳು ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಇದರಿಂದಾಗಿ ಜೀವನದಲ್ಲಿ ಆರ್ಥಿಕ ಸಮೃದ್ಧಿ, ಯಶಸ್ಸು ಮತ್ತು ಪ್ರಗತಿ ನಿಲ್ಲುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ತಪ್ಪುಗಳಿಂದ ಇದು ಸಂಭವಿಸುತ್ತದೆ ಎಂದು ತಿಳಿದಿರುವುದು ಬಹಳ ಮುಖ್ಯ.
ವಾಸ್ತು ಶಾಸ್ತ್ರದ ಪ್ರಕಾರ ಈ ತಪ್ಪುಗಳನ್ನು ಮಾಡಬೇಡಿ:
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಸರಿಯಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಸಿಗೆಯಲ್ಲಿ ಕುಳಿತು ಊಟ ಮಾಡುವವರು ಆರ್ಥಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೇ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.
ಇದನ್ನೂ ಓದಿ- ಮನೆಗೆ ಹಾವು ಬಂದರೆ ಶುಭವೋ ಅಶುಭವೋ? ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮ ಏನು ?
ವಾಸ್ತು ಪ್ರಕಾರ, ರಾತ್ರಿಯಲ್ಲಿ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಇಡುವುದರಿಂದ ಹಣದ (Money) ನಷ್ಟವಾಗುತ್ತದೆ. ಮಲಗುವ ಮುನ್ನ ಕೊಳಕು ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು. ಏಕೆಂದರೆ ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ಮನೆಗೆ ಪ್ರವೇಶಿಸುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿಯ ವೇಳೆ ಸ್ನಾನಗೃಹದಲ್ಲಿ ಬಕೆಟ್ ತುಂಬ ನೀರು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುವುದಿಲ್ಲ. ಮತ್ತೊಂದೆಡೆ, ಅಡುಗೆಮನೆಯಲ್ಲಿ ನೀರು ತುಂಬಿದ ಕೊಡ ಇಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಇದನ್ನೂ ಓದಿ- Budh Gochar: ಈ 5 ರಾಶಿಯವರಿಗೆ ಮುಂದಿನ 30 ದಿನಗಳು ತುಂಬಾ ಶುಭ
ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಮೊಸರು, ಹಾಲು ಮತ್ತು ಉಪ್ಪನ್ನು ಯಾರಿಗೂ ದಾನವಾಗಿ ನೀಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ಶುರುವಾಗುತ್ತದೆ. ಅಷ್ಟೇ ಅಲ್ಲ, ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗಬಹುದು.
ಮನೆಯ ಈಶಾನ್ಯದಲ್ಲಿ ಪೂಜೆಯ ಮನೆಯನ್ನು ಕಟ್ಟುವುದು ಶುಭ. ಇದಲ್ಲದೆ, ಈಶಾನ್ಯದಲ್ಲಿ ನೀರನ್ನು ಯಾವಾಗಲೂ ಒಂದು ಪಾತ್ರೆಯಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಸಂತೋಷ ಸಿಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.