ಪಿತೃ ದೋಷ ಮತ್ತು ಶನಿ ದೋಷ ಮುಕ್ತಿಗಾಗಿ ಸಕ್ಕರೆಯನ್ನು ಈ ರೀತಿ ಬಳಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಕ್ಕರೆಗೂ ಗ್ರಹಗಳಿಗೂ ಸಂಬಂಧವಿದೆ. 
 

ನವದೆಹಲಿ : ಅಡುಗೆಮನೆಯಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಬೇರೆ ಬೇರೆ ರೀತಿಯ ಪಾನೀಯ ಮತ್ತು ಸಿಹಿತಿಂಡಿಗಳ ಮಾಧುರ್ಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಜೀವನದ ಅನೇಕ ತೊಂದರೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಕ್ಕರೆಗೂ ಗ್ರಹಗಳಿಗೂ ಸಂಬಂಧವಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸೂರ್ಯನ ಗ್ರಹದ ದುರ್ಬಲತೆಯಿಂದಾಗಿ, ಉದ್ಯೋಗದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಾಮ್ರದ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರಿನ ದ್ರಾವಣವನ್ನು ತಯಾರಿಸಿ ಕುಡಿಯುವುದರಿಂದ ಜಾತಕದಲ್ಲಿ ಸೂರ್ಯ ಬಲಶಾಲಿಯಾಗುತ್ತಾನೆ. 

2 /5

ನೀವು ಕೆಲವು ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದು,  ಯಶಸ್ಸು ಪಡೆಯಬೇಕಾದರೆ, ಹಿಂದಿನ ರಾತ್ರಿ ತಾಮ್ರದ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿಡಿ. ಕೆಲಸಕ್ಕೆ ಹೊರಡುವ ಮೊದಲು ಇದನ್ನು ಸೇವಿಸಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ನಂಬಿಕೆ.  

3 /5

ಶನಿಯ ದೋಷ ನಿವಾರಣೆಗೂ ಸಕ್ಕರೆಯ ಪರಿಹಾರ ಅತ್ಯಂತ ಪರಿಣಾಮಕಾರಿಯಾಗಿದೆ.  ಇದಕ್ಕೆ ಸಕ್ಕರೆಯನ್ನು ರುಬ್ಬಿಕೊಂಡು ಅದಕ್ಕೆ ಚಿಕ್ಕ ಚಿಕ್ಕ ತೆಂಗಿನ ಕಾಯಿಯನ್ನು ಬೆರೆಸಿ.  ನಂತರ ಅದನ್ನು ಇರುವೆಗಳಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಶನಿಯ ದೋಷದಿಂದ ಮುಕ್ತಿ ಸಿಗುತ್ತದೆ. 

4 /5

ಪಿತೃ  ದೋಷವನ್ನು ತೊಡೆದುಹಾಕಲು ಕೂಡಾ ಸಕ್ಕರೆ ಪರಿಹಾರ ಪರಿಣಾಮಕಾರಿಯಾಗಿದೆ. ಇದಕ್ಕೆ ಹಿಟ್ಟಿನಲ್ಲಿ ಸಕ್ಕರೆ ಬೆರೆಸಿ ಕಾಗೆಗಳಿಗೆ ಆಹಾರವಾಗಿ ನೀಡಬೇಕು.  

5 /5

ರಾಹು ದೋಷ ನಿವಾರಣೆಗೆ ಮಾತ್ರ  ಸಕ್ಕರೆ ಪರಿಹಾರ ವಿಶೇಷವಾಗಿದೆ. ಇದಕ್ಕಾಗಿ ಸಕ್ಕರೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ರಾತ್ರಿ ಮಲಗುವಾಗ ತಲೆದಿಂಬಿನ ಕೆಳಗೆ ಇಡಿ. ಹೀಗೆ  ಹಲವಾರು ದಿನಗಳವರೆಗೆ ನಿರಂತರವಾಗಿ ಮಾಡಬೇಕು.