ನಾರ್ವೆಯಲ್ಲಿ, ಸೂರ್ಯ ಮಧ್ಯಾಹ್ನ 12:43 ಕ್ಕೆ ಅಸ್ತಮಿಸುತ್ತಾನೆ. 40 ನಿಮಿಷಗಳ ನಂತರ ಮತ್ತೆ ಉದಯಿಸುತ್ತಾನೆ.
ನವದೆಹಲಿ : ನಾರ್ವೆ ತುಂಬಾ ಸುಂದರವಾದ ದೇಶವಾಗಿದೆ. ವಿಶ್ವದ ಶ್ರೀಮಂತ ದೇಶಗಳಲ್ಲಿ ಇದೂ ಒಂದು. ಇಲ್ಲಿನ ಪ್ರಾಕೃತಿಕ ಸೊಬಗು ಮನಸ್ಸಿಗೆ ಮುದ ನೀಡುತ್ತದೆ. ಆರ್ಕ್ಟಿಕ್ ವೃತ್ತದಲ್ಲಿ ಇರುವ ನಾರ್ವೆಯಲ್ಲಿ ಸೂರ್ಯಾಸ್ತವು ಕೇವಲ 40 ನಿಮಿಷಗಳವೆರೆಗ್ ಮಾತ್ರ ಆಗುತ್ತದೆ. ಆದ್ದರಿಂದ ಈ ದೇಶವನ್ನು ಲ್ಯಾಂಡ್ ಆಫ್ ದಿ ಮಿಡ್ ನೈಟ್ ಸನ್ ಎಂದೂ ಕರೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಾರ್ವೆಯಲ್ಲಿ, ಸೂರ್ಯ ಮಧ್ಯಾಹ್ನ 12:43 ಕ್ಕೆ ಅಸ್ತಮಿಸುತ್ತಾನೆ. 40 ನಿಮಿಷಗಳ ನಂತರ ಮತ್ತೆ ಉದಯಿಸುತ್ತಾನೆ. ಅದಕ್ಕಾಗಿಯೇ ಇದನ್ನು 'ಕಂಟ್ರಿ ಆಫ್ ಮಿಡ್ನೈಟ್ ಸನ್' ಎಂದೂ ಕರೆಯುತ್ತಾರೆ. ಈ ದೇಶವು ಆರ್ಕ್ಟಿಕ್ ವೃತ್ತದಲ್ಲಿ ಬರುತ್ತದೆ. ಈ ಕಾರಣದಿಂದಾಗಿ, ಮೇ ಮತ್ತು ಜುಲೈ ನಡುವೆ ಸುಮಾರು 76 ದಿನಗಳವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ.
ಉತ್ತರ ನಾರ್ವೆಯಲ್ಲಿ ಚಳಿಗಾಲದಲ್ಲಿ ಸೂರ್ಯ ಉದಯಿಸುವುದಿಲ್ಲ. ಆದರೆ, ಬೇಸಿಗೆ ಕಾಲದಲ್ಲಿ ಈ ಪ್ರದೇಶದಲ್ಲಿ ಸೂರ್ಯ ಮುಳುಗುವುದಿಲ್ಲ. ನಾರ್ವೆಯ ರೋರೋಸ್ ನಗರವನ್ನು ಅತ್ಯಂತ ಶೀತ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿ ತಾಪಮಾನ ಮೈನಸ್ 50 ಡಿಗ್ರಿಗೆ ಇಳಿಯುತ್ತದೆ.
ನಾರ್ವೆಯ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಬಹಳ ಇಷ್ಟವಾಗುವ ತಾಣವಾಗಿದೆ. ಇಲ್ಲಿನ ನೈಸರ್ಗಿಕ ಹುಲ್ಲುಗಾವಲುಗಳು ಎಲ್ಲರ ಮನ ಸೂರೆಗೊಳ್ಳುತ್ತವೆ.
ನಾರ್ವೆ ನಿಜವಾಗಿಯೂ ಭೂಮಿಯ ಮೇಲಿನ ಸ್ವರ್ಗವಾಗಿದೆ. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಚ್ಚ ಹಸಿರಿನ ಇಳಿಜಾರುಗಳು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಿಮಪಾತದ ನಂತರ, ನಗರಗಳ ನೋಟವು ಮತ್ತಷ್ಟು ಸುಂದರವಾಗಿ ಕಾಣುತ್ತದೆ.
ಇಲ್ಲಿ ಮನೆಯ ಮಧ್ಯದಿಂದ ಕಾಣುವ ಸಮುದ್ರ ನೋಟ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಸುಂದರ ನೀಲಿ ನೀರಿನ ದಡದಲ್ಲಿ ಕಟ್ಟಿರುವ ಮನೆಗಳಲ್ಲಿ ವಾಸಿಸುವುದು ಸ್ವರ್ಗದ ಅನುಭೂತಿಗಿಂತ ಕಡಿಮೆಯಿಲ್ಲ.