ಇಂಗ್ಲಿಷ್ ಕ್ರಿಕೆಟಿಗ ಚಾರ್ಲಿ ಡೀನ್ ಅವರ ಪೂರ್ಣ ಹೆಸರು ಷಾರ್ಲೆಟ್ ಅಲೆನ್ ಡೀನ್ (Charlotte Ellen Dean) .
ನವದೆಹಲಿ : ಕ್ರಿಕೆಟ್ ಲೋಕದಲ್ಲಿ ಕೆಲವು ಮಹಿಳಾ ಆಟಗಾರರು ತಮ್ಮ ಅಮೋಘ ಆಟದಿಂದ ಮಾತ್ರವಲ್ಲದೆ ತಮ್ಮ ಸೌಂದರ್ಯದಿಂದಲೂ ಪ್ರಸಿದ್ಧರಾಗಿದ್ದಾರೆ. ಅಂತಹ ಮುದ್ದಾದ ಆಟಗಾರರಲ್ಲಿ ಇಂಗ್ಲೆಂಡ್ನ ಚಾರ್ಲಿ ಡೀನ್ (Charlie Dean) ಕೂಡ ಒಬ್ಬರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇಂಗ್ಲಿಷ್ ಕ್ರಿಕೆಟಿಗ ಚಾರ್ಲಿ ಡೀನ್ ಅವರ ಪೂರ್ಣ ಹೆಸರು ಷಾರ್ಲೆಟ್ ಅಲೆನ್ ಡೀನ್ (Charlotte Ellen Dean) . ಅವರು ಸ್ಟಾಫರ್ಡ್ಶೈರ್ (Staffordshire) ಕೌಂಟಿಯ ಬರ್ಟನ್ ಅಪಾನ್ ಟ್ರೆಂಟ್ನಲ್ಲಿ (Burton upon Trent) 22 ಡಿಸೆಂಬರ್ 2000 ರಂದು ಜನಿಸಿದರು.
ಚಾರ್ಲಿ ಡೀನ್ ಅವರ ತಂದೆ ಸ್ಟೀವನ್, ಅವರಿಗೆ ಕ್ರಿಕೆಟ್ ಅನ್ನು ಪರಿಚ್ಜಯಿಸಿದರು. ಸ್ಟೀವನ್ ಸ್ವತಃ ಸ್ಟಾಫರ್ಡ್ಶೈರ್ (Staffordshire) ಮತ್ತು ವಾರ್ವಿಕ್ಷೈರ್ಗಾಗಿ (Warwickshire) ಕ್ರಿಕೆಟ್ ಆಡಿದ್ದಾರೆ.
ಚಾರ್ಲಿ ಡೀನ್ 2017 ರಲ್ಲಿ ಪೋರ್ಟ್ಸ್ಮೌತ್ ಗ್ರಾಮರ್ ಸ್ಕೂಲ್ ಗಾಗಿ (Portsmouth Grammar School) ಆಡಿದ ತನ್ನ ಮೊದಲ ಪಂದ್ಯದಲ್ಲಿ 5 ವಿಕೆಟ್ ಗಳನ್ನು ಪಡೆದರು. ಒಂದು ವರ್ಷದ ನಂತರ, ರಾಯಲ್ ಲಂಡನ್ ಕೌಂಟಿ ಕಪ್ನಲ್ಲಿ ಹ್ಯಾಂಪ್ಶೈರ್ನ ಅಂಡರ್-15 ತಂಡದ ನೇತೃತ್ವ ವಹಿಸುವ ಅವಕಾಶವನ್ನು ಚಾರ್ಲಿ ಪಡೆದರು.
ಚಾರ್ಲಿ ಡೀನ್ ಅವರು 16 ಸೆಪ್ಟೆಂಬರ್ 2021 ರಂದು ನ್ಯೂಜಿಲೆಂಡ್ ವಿರುದ್ಧ ODI ಆಗಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
ಚಾರ್ಲಿ ಡೀನ್ 2000 ರ ದಶಕದಲ್ಲಿ ಜನಿಸಿದ ಇಂಗ್ಲೆಂಡ್ನ ಮೊದಲ ಅಂತರರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ.
ಚಾರ್ಲಿ ಡೀನ್ ಅವರು ವಿಶ್ವದ ಅತ್ಯಂತ ಸುಂದರ ಮತ್ತು ಮುದ್ದಾದ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಅವರು ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಆಶಸ್ T20 ಸರಣಿಯ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾದರು.