ನವದೆಹಲಿ: ಹಿಮಪಾತ ಮತ್ತು ಭಾರೀ ಪ್ರಮಾಣದ ಹಿಮಕುಸಿತದಿಂದ ಉತ್ತರ ಕಾಶ್ಮೀರ(North Kashmir)ದ ಕುಪ್ವಾರ ಜಿಲ್ಲೆಯ ತಂಗ್‌ದಾರ್- ಚೌಕಿಬಾಲ್ (Tanghdar-Chowkibal) ಹೆದ್ದಾರಿಯ ಖೂನಿ ನಾಲಾ ಮತ್ತು ಎಸ್.ಎಂ.ಹಿಲ್ ಬಳಿ ಹಿಮದಲ್ಲಿ ಸಿಲುಕಿಕೊಂಡಿದ್ದ 30 ನಾಗರಿಕರನ್ನು ಭಾರತೀಯ ಸಶಸ್ತ್ರ ಪಡೆ ರಕ್ಷಿಸಲಾಗಿದೆ.
ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಸೈನಿಕರು ನಡೆಸಿದ ಸುಮಾರು 5-6 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 30 ನಾಗರಿಕರು ಜೀವಂತವಾಗಿ ಬದುಕುಳಿದಿದ್ದಾರೆ. ಮಂಗಳವಾರ ಬೆಳಿಗ್ಗೆ ಹಿಮದಿಂದ ಪ್ರಚೋದಿತವಾದ ಹಿಮಕುಸಿತದಿಂದ ತಂಗ್‌ಧರ್-ಚೌಕಿಬಾಲ್ ರಸ್ತೆಯನ್ನು ಬಂದ್ ಆಗಬೇಕಾಯಿತು. ಪರಿಣಾಮ 1 ಮಗು ಸೇರಿದಂತೆ 30 ನಾಗರಿಕರು(Civilians Recued) ತಮ್ಮ ವಾಹನಗಳೊಂದಿಗೆ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: Vaccination: 12 ರಿಂದ 14 ವರ್ಷದ ಮಕ್ಕಳಿಗೆ ಯಾವಾಗ ಸಿಗಲಿದೆ ಲಸಿಕೆ? ಸರ್ಕಾರದ ನಿರ್ಧಾರ ಏನು ಗೊತ್ತಾ
ಸ್ಥಳೀಯ ಅಧಿಕಾರಿಗಳ ಪ್ರಕಾರ, ನಾಗರಿಕರು ಮತ್ತು ಅವರ ವಾಹನಗಳು ಹಿಮದಲ್ಲಿ ಸಿಲುಕಿರುವ ಬಗ್ಗೆ ಎನ್‌ಸಿ ಪಾಸ್‌ನಲ್ಲಿದ್ದ ಸೈನಿಕರಿಗೆ(Indian Army) ಮಾಹಿತಿ ತಲುಪಿತ್ತು. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಪ್ರಯಾಣಿಕರಿಂದ ತುಂಬಿರುವ ವಾಹನಗಳ ಬಗ್ಗೆ ಮಾಹಿತಿ ಪಡೆದ ನಂತರ ಭಾರತೀಯ ಸೇನೆಯ 2 ಹಿಮಪಾತ ರಕ್ಷಣಾ ತಂಡಗಳು ಮತ್ತು ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್(GREF) ತಂಡವನ್ನು ಸಜ್ಜುಗೊಳಿಸಲಾಯಿತು. ರಕ್ಷಣಾ ಕಾರ್ಯಾಚರಣೆಯನ್ನು ಕ್ಯಾಪ್ಟನ್ ಕುಲ್ಜೋತ್ ಸಿಂಗ್ ನೇತೃತ್ವದಲ್ಲಿ ನಡೆಸಲಾಯಿತು. ಅವಳಿ ಹಿಮಕುಸಿತಗಳಿಂದ ಕೂಡಿದ ಪ್ರತಿಕೂಲ ಹವಾಮಾನದ ಹೊರತಾಗಿಯೂ ಮಹಿಳೆಯರು, ಮಕ್ಕಳು ಮತ್ತು ತೀವ್ರ ಅಸ್ವಸ್ಥರಾಗಿದ್ದ ಹೃದ್ರೋಗಿ ಸೇರಿದಂತೆ 14 ನಾಗರಿಕರನ್ನು ರಕ್ಷಿಸಿ ನೀಲಂ ಮತ್ತು 16 ನಾಗರಿಕರನ್ನು NC ಪಾಸ್(ಸಾಧನಾ ಪಾಸ್)ಗೆ ಕರೆತರಲಾಯಿತು.
ರಕ್ಷಿಸಲ್ಪಟ್ಟ ಎಲ್ಲಾ ನಾಗರಿಕರಿಗೂ ರಾತ್ರಿ ಆಹಾರ, ವೈದ್ಯಕೀಯ ಚಿಕಿತ್ಸೆ ಮತ್ತು ಆಶ್ರಯವನ್ನು ಒದಗಿಸಲಾಗಿದೆ. ಮಂಗಳವಾರ ಹಗಲಿನಲ್ಲಿ 12 ವಾಹನಗಳನ್ನು ಹಿಂಪಡೆಯಲಾಯಿತು. ನಂತರ ಹಿಮಕುಸಿತ(Snowfall) ಮತ್ತು ರಸ್ತೆಯಿಂದ ಹಿಮ ಜಾರುವಿಕೆಗಳನ್ನು ತೆರವುಗೊಳಿಸಲಾಯಿತು. ಹಿಮಪಾತವನ್ನು ಲೆಕ್ಕಿಸದೆ ಸಂಕಷ್ಟದ ಸಮಯದಲ್ಲಿ ತುಂಬಾ ಕಷ್ಟಪಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿ ತಮ್ಮ ಜೀವಗಳನ್ನುಉಳಿಸಿದ್ದಕ್ಕಾಗಿ ರಕ್ಷಿಸಲ್ಪಟ್ಟ ಎಲ್ಲಾ ನಾಗರಿಕರು ಭಾರತೀಯ ಸೇನಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: Pensioners News : ಮೋದಿ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.