ನವದೆಹಲಿ : ಫ್ಲಿಪ್ಕಾರ್ಟ್ (Flipkart) ಮತ್ತು ಅಮೆಜಾನ್ನಲ್ಲಿ (Amazon) ಪ್ರತಿದಿನ, ಅನೇಕ ಉತ್ಪನ್ನಗಳ ಮೇಲೆ ಆಫರ್ ಗಳು ಇದ್ದೇ ಇರುತ್ತವೆ. ಎರಡೂ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ವರ್ಷಾಂತ್ಯದ ಸೇಲ್ ನಡೆಯುತ್ತಿದೆ. ಆದರೆ ಡೀಲ್ ಆಫ್ ದಿ ಡೇ (Deal of the day) ಕೂಡಾ ನಡೆಯುತ್ತಿದೆ. ದಿನಸಿ ವಸ್ತುಗಳ ಮೇಲೂ ಇಲ್ಲಿ ಉತ್ತಮ ಕೊಡುಗೆಗಳು ಲಭ್ಯವಿವೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ ಇಂದು ಉತ್ತಮ ಡೀಲ್ಗಳು ಬಂದಿವೆ. ಇಂದು ಅಮೆಜಾನ್ನಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಆಲೂಗಡ್ಡೆ ಮತ್ತು ಅರ್ಧ ಕಿಲೋ ಈರುಳ್ಳಿ ಖರೀದಿಸಬಹುದು. ಇದಲ್ಲದೇ ಫ್ಲಿಪ್ಕಾರ್ಟ್ನಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಗೋಧಿ ಹಿಟ್ಟು ಮತ್ತು 100 ಗ್ರಾಂ ತುಪ್ಪ ಲಭ್ಯವಿದೆ.
ಒಂದು ರೂಪಾಯಿಗೆ ಒಂದು ಕೆಜಿ ಆಲೂಗಡ್ಡೆ :
ಅಮೆಜಾನ್ನಲ್ಲಿ (Amazon) ಒಂದು ಕೆಜಿ ಆಲೂಗಡ್ಡೆ ಬೆಲೆ 25 ರೂ .ಎಂದು ಹೇಳಲಾಗುತ್ತಿದೆ. ಆದರೆ ಇಂದಿನ ಡೀಲ್ ನಲ್ಲಿ (Amazon deal) ಒಂದು ಕಿಲೋ ಆಲೂಗಡ್ಡೆ ಒಂದು ರೂಪಾಯಿಗೆ ದೊರೆಯುತ್ತಿದೆ. ಅಂದರೆ, ಆಲೂಗಡ್ಡೆ ಮೇಲೆ 96% ರಿಯಾಯಿತಿ ಸಿಗುತ್ತಿದೆ. ಈ ರಿಯಾಯಿತಿ ಕೇವಲ ಒಂದು ಕೆಜಿ ಆಲೂಗಡ್ಡೆ ಮೇಲೆ ಮಾತ್ರ ಇರಲಿದೆ.
ಇದನ್ನೂ ಓದಿ : ಚಾರ್ಜ್ ಮಾಡಬೇಕಾದ ಅವಶ್ಯಕತೆಯಿಲ್ಲ, ಓಡಿಸುತ್ತಿದ್ದರೆ ತನ್ನಷ್ಟಕ್ಕೆ ಚಾರ್ಜ್ ಆಗುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್
ಒಂದು ರೂಪಾಯಿಗೆ ಖರೀದಿಸಿ ಅರ್ಧ ಕಿಲೋ ಈರುಳ್ಳಿ :
ಅಮೆಜಾನ್ ನಲ್ಲಿ ಅರ್ಧ ಕಿಲೋ ಈರುಳ್ಳಿ ಬೆಲೆ 27 ರೂ. ಆದರೆ ಇಂದಿನ ಡೀಲ್ ನಲ್ಲಿ ಅರ್ಧ ಕಿಲೋ ಈರುಳ್ಳಿಯನ್ನು ಒಂದು ರೂಪಾಯಿಗೆ ಖರೀದಿಸಬಹುದು. ಅಂದರೆ ಈರುಳ್ಳಿ ಮೇಲೆ ಕೂಡಾ ಶೇ.96ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
1 ರೂಪಾಯಿಗೆ ಖರೀದಿಸಿ 100ML ತುಪ್ಪ :
ಆನಂದ ತುಪ್ಪದ 100ಎಂಎಲ್ ತುಪ್ಪದ ಪ್ಯಾಕೆಟ್ ಬೆಲೆ 55 ರೂ. ಆದರೆ ಇಂದು Flipkart ನಲ್ಲಿ ಇದರ ಮೇಲೆ 98% ರಷ್ಟು ರಿಯಾಯಿತಿ ಸಿಗುತ್ತದೆ. ಅಂದರೆ, 100ML ತುಪ್ಪದ ಪ್ಯಾಕೆಟ್ ಅನ್ನು ಕೇವಲ 1 ರೂಪಾಯಿಗೆ ಖರೀದಿಸಬಹುದು. ಈ ರಿಯಾಯಿತಿ 100ML ತುಪ್ಪದ ಪ್ಯಾಕೆಟ್ ಮೇಲೆ ಮಾತ್ರ ಲಭ್ಯವಿದೆ.
ಇದನ್ನೂ ಓದಿ : Royal Enfield Scram 411: ಜನರಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ ಈ ರಾಯಲ್ ಎನ್ಫೀಲ್ಡ್ ಬೈಕ್ನ ಲುಕ್, ಬೆಲೆ ಕೂಡ ಅಗ್ಗ
ಒಂದು ರೂಪಾಯಿಗೆ 1 ಕೆಜಿ ಪಿಲ್ಸ್ಬರಿ ಗೋಧಿ ಹಿಟ್ಟು :
ಪಿಲ್ಸ್ಬರಿ ಚಕ್ಕಿ ಫ್ರೆಶ್ ಅಟ್ಟಾ ಪ್ರತಿ ಕೆಜಿ ಪ್ಯಾಕ್ಗೆ 58 ರೂ. ಇದೆ. ಆದರೆ ಇಂದು ಫ್ಲಿಪ್ಕಾರ್ಟ್ನಲ್ಲಿ (flipkart sale) ಇದರ ಮೇಲೆ ಕೂಡಾ 98% ರಿಯಾಯಿತಿ ಸಿಗುತ್ತಿದೆ. ಅಂದರೆ, ಒಂದು ಕೆಜಿ ಹಿಟ್ಟಿನ ಪ್ಯಾಕೆಟ್ ಅನ್ನು ಕೇವಲ 1 ರೂಪಾಯಿಗೆ ಖರೀದಿಸಬಹುದು. ಈ ರಿಯಾಯಿತಿ (discount) ಕೇವಲ ಒಂದು ಕೆಜಿ ಪ್ಯಾಕೆಟ್ ಮೇಲೆ ಮಾತ್ರ ಇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.