Copper Utensils : ತಾಮ್ರದ ಪಾತ್ರೆಗಳಲ್ಲಿ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನು

ಹೃದಯದ ಆರೋಗ್ಯದಿಂದ ತೂಕ ಇಳಿಕೆಗೆ ಮತ್ತು ಚರ್ಮದವರೆಗೆ, ತಾಮ್ರದ ಪಾತ್ರೆಗಳಲ್ಲಿ ಸೇವಿಸುವುದು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ, ಆದರೆ ಈ ಪಾತ್ರೆಗಳಲ್ಲಿ ಆಹಾರವನ್ನು ಅಡುಗೆ ತಯಾರಿಸವುದು ಅಥವಾ ತಿನ್ನುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

Written by - Channabasava A Kashinakunti | Last Updated : Dec 29, 2021, 07:54 PM IST
  • ತಾಮ್ರದ ಪಾತ್ರೆಗಳಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ.
  • ತಾಮ್ರದ ಪಾತ್ರೆಗಳಲ್ಲಿ ಉಪ್ಪು ಇರುವ ಯಾವುದೆ ಆಹಾರ ಬೇಯಿಸಬೇಡಿ.
  • ಇದು ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ
Copper Utensils : ತಾಮ್ರದ ಪಾತ್ರೆಗಳಲ್ಲಿ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನು title=

ತಾಮ್ರದ ಪಾತ್ರೆಗಳಲ್ಲಿ ಆಹಾರ ಬೇಹಿಸುವುದು ಮತ್ತು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೃದಯದ ಆರೋಗ್ಯದಿಂದ ತೂಕ ಇಳಿಕೆಗೆ ಮತ್ತು ಚರ್ಮದವರೆಗೆ, ತಾಮ್ರದ ಪಾತ್ರೆಗಳಲ್ಲಿ ಸೇವಿಸುವುದು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ, ಆದರೆ ಈ ಪಾತ್ರೆಗಳಲ್ಲಿ ಆಹಾರವನ್ನು ಅಡುಗೆ ತಯಾರಿಸವುದು ಅಥವಾ ತಿನ್ನುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬೇಡಿ

ತಾಮ್ರದ ಪಾತ್ರೆ(Copper Utensils)ಯಲ್ಲಿ ಹಾಲು, ಮೊಸರು, ಚೀಸ್ ಮುಂತಾದ ಯಾವುದೇ ರೀತಿಯ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ. ತಾಮ್ರದ ಪಾತ್ರೆಗಳಲ್ಲಿ ಉಪ್ಪು ಇರುವ ಯಾವುದನ್ನೂ ಬೇಯಿಸಬೇಡಿ. ಉಪ್ಪಿನಲ್ಲಿರುವ ಅಯೋಡಿನ್ ತಾಮ್ರದೊಂದಿಗೆ ಪ್ರತಿಕ್ರಿಯಿಸಬಹುದು ಮತ್ತು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ : New Wage Code : ಉದ್ಯೋಗಿಗಳಿಗೆ ಸಿಹಿ ಸುದ್ದಿ : ಈಗ ವಾರದಲ್ಲಿ 4 ದಿನ ಮಾತ್ರ ಆಫೀಸ್ ಕೆಲಸ, 3 ದಿನ ರಜೆ!

ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ

ತಾಮ್ರದ ಪಾತ್ರೆಗಳಲ್ಲಿ ತಿನ್ನುವುದರಿಂದ ದೇಹದ ಕಬ್ಬಿಣದ ಅಂಶಗಳ ಜೊತೆಗೆ ದೇಹದ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಗಳಲ್ಲಿ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.

ತೂಕ ಇಳಿಕೆಗೆ ಸಹಾಯಕ

ತಾಮ್ರದ ಪಾತ್ರೆಯಲ್ಲಿ ತಿನ್ನುವುದು ಚಯಾಪಚಯವನ್ನು(Digestion) ವೇಗಗೊಳಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಂತರ ತಾಮ್ರದ ಪಾತ್ರೆಯಲ್ಲಿ ತಿನ್ನಿರಿ.

ಹೊಟ್ಟೆ ಉಬ್ಬರ ಸಮಸ್ಯೆ ದೂರವಾಗುತ್ತದೆ

ತಾಮ್ರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಹುಣ್ಣು ಮತ್ತು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತಾಮ್ರದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ಜೀರ್ಣಕ್ರಿಯೆಯನ್ನು ಸರಿಯಾಗಿಡುತ್ತದೆ. ತಾಮ್ರವು ದೇಹವನ್ನು ನಿರ್ವಿಷಗೊಳಿಸಲು ಮತ್ತು ದೇಹದಿಂದ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್ ದರಲ್ಲಿ ₹25 ಇಳಿಕೆ ಮಾಡಿದ ಈ ರಾಜ್ಯ ಸರ್ಕಾರ!

ವಯಸ್ಸಾದ ಸಂಕೇತಗಳನ್ನು ಕಡಿಮೆ ಮಾಡುತ್ತದೆ

ತಾಮ್ರದ ಪಾತ್ರೆಯಲ್ಲಿ ತಿಂದರೆ ವಯಸ್ಸಾಗುವ ಸಮಸ್ಯೆ ದೂರವಾಗುತ್ತದೆ. ಇದು ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ರಾತ್ರಿಯಿಡೀ ತಾಮ್ರದ ಪಾತ್ರೆ(Copper Vessels)ಯಲ್ಲಿ ತುಂಬಿದ ನೀರನ್ನು ಇಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News