ಬ್ರಸೆಲ್ಸ್ : ಹೆಚ್ಚುತ್ತಿರುವ ಒಮಿಕ್ರಾನ್ (Omicron) ಪ್ರಕರಣಗಳಿಂದಾಗಿ ಪ್ರಪಂಚಾದ್ಯಂತ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕೆಲವು ದೇಶಗಳು ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿವೆ. ಇನ್ನು ಕೆಲವು ಶೀಘ್ರದಲ್ಲೇ ಕಠಿಣ ಕ್ರಮಗಳನ್ನು ಘೋಷಿಸಬಹುದು. ಈ ಮಧ್ಯೆ, ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ನಲ್ಲಿ (Brussels) ಭಾನುವಾರ ಬೃಹತ್ ಪ್ರತಿಭಟನೆಗಳು ನಡೆದಿವೆ. ಸರ್ಕಾರ ವಿಧಿಸಿರುವ ನಿರ್ಬಂಧಗಳ ವಿರುದ್ಧ ಇಲ್ಲಿನ ಜಾನ್ ಬೀದಿಗಿಳಿದಿದ್ದಾರೆ. ವಿಶೇಷವಾಗಿ ಚಿತ್ರಮಂದಿರಗಳನ್ನು ಮುಚ್ಚಿರುವ ಸರ್ಕಾರದ ಕ್ರಮದ ವಿರುದ್ಧ ನಾಗರೀಕರು ಸಿಡಿದೆದ್ದಿದ್ದಾರೆ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಗೀತ ನುಡಿಸುವ ಮೂಲಕ ಪ್ರತಿಭಟನೆ :
ಮೂಲಗಳ ಪ್ರಕಾರ, ಪ್ರತಿಭಟನಾಕಾರರು (Protesters) ಫಲಕಗಳೊಂದಿಗೆ ರಾಜಧಾನಿಯ ಮಾಂಟ್ ಡೆಸ್ ಆರ್ಟ್ಸ್ ಸ್ಕ್ವೇರ್ನಲ್ಲಿ ಜಮಾಯಿಸಿದರು. ಇಲ್ಲಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ ಸಂಗೀತ ವಾದ್ಯಗಳನ್ನು ನುಡಿಸಿದ್ದಾರೆ. ರಂಗಭೂಮಿ, ಸಿನಿಮಾ ಮಂದಿರಗಳಂತಹ (Theatre, Cinema Halls) ಸಾಂಸ್ಕೃತಿಕ ಸ್ಥಳಗಳನ್ನು ಮುಚ್ಚಿರುವ ಸರ್ಕಾರದ ನಿರ್ಧಾರ ಸರಿಯಲ್ಲ, ಕೂಡಲೇ ಸರ್ಕಾರ ಈ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : NASA Hiring Prists: NASAದಲ್ಲಿ ಅರ್ಚಕರ ಭರ್ತಿ, Secret Plan ಹಂಚಿಕೊಂಡ ಬಾಹ್ಯಾಕಾಶ ಸಂಸ್ಥೆ
ಯಾವುದೆಲ್ಲಾ ನಿಷೇಧ :
ಬೆಲ್ಜಿಯಂನಲ್ಲಿ ಮತ್ತೆ ಕರೋನಾ (Coronavirus) ಪ್ರಕರಣಗಳು ಹೆಚ್ಚಾಗತೊಡಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರ ಅಡಿಯಲ್ಲಿ, ಥಿಯೇಟರ್ಗಳು, ಕನ್ಸರ್ಟ್ ಹಾಲ್ಗಳು ಮತ್ತು ಕಾನ್ಫರೆನ್ಸ್ ಹಾಲ್ಗಳಂತಹ ಒಳಾಂಗಣ ಸ್ಥಳಗಳನ್ನು ಮುಚ್ಚಲಾಗುತ್ತದೆ. ಇದಲ್ಲದೆ, ಹೊರಾಂಗಣ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಮತ್ತು ಟೆಂಟ್ಗಳು ಇತ್ಯಾದಿಗಳನ್ನು ಸಹ ನಿಷೇಧಿಸಲಾಗಿದೆ. ಹೊರಾಂಗಣ ಕ್ರಿಸ್ಮಸ್ ಮಾರುಕಟ್ಟೆಗಳ ಮೇಲೆ ಕೂಡಾ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಕೋವಿಡ್ ನಿರ್ಬಂಧಗಳ (COVID guidelines) ಅಡಿಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ಗಳನ್ನು ಮುಚ್ಚಲಾಗಿದೆ.
ನಿರಂತರವಾಗಿ ಹೆಚ್ಚುತ್ತಿರುವ ಅಪಾಯ :
ಇಲ್ಲಿಯವರೆಗೆ, ದೇಶದಲ್ಲಿ 2 ದಶಲಕ್ಷಕ್ಕೂ ಹೆಚ್ಚು ಕರೋನಾ (COVID-19) ಪ್ರಕರಣಗಳು ವರದಿಯಾಗಿವೆ. 28,149 ಜನರು ಸಾವನ್ನಪ್ಪಿದ್ದಾರೆ. ಕರೋನಾದ ನಾಲ್ಕನೇ ಅಲೆಯಿಂದ ಬೆಲ್ಜಿಯಂ ಇನ್ನೂ ಚೇತರಿಸಿಕೊಳ್ಳುತ್ತಿದೆ ಮತ್ತು ಓಮಿಕ್ರಾನ್ ರೂಪದಲ್ಲಿ ಅಪಾಯ ಕೂಡಾ ಇದೀಗ ಕಾಡುತ್ತಿದೆ. ವರದಿಯ ಪ್ರಕಾರ, ಆಸ್ಪತ್ರೆಯ ಸಿಬ್ಬಂದಿ ಈಗಾಗಲೇ ಬ್ರೇಕಿಂಗ್ ಪಾಯಿಂಟ್ ಎಂದು ಹೇಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಜನರು ಈ ನಿರ್ಬಂಧಗಳಿಗೆ ಸಿದ್ದರಿಲ್ಲ. ಈ ಹಿಂದೆ ಕೂಡಾ ಕೋವಿಡ್ -19 ಗೆ ಸಂಬಂಧಿಸಿದಂತೆ ಸರ್ಕಾರ ವಿಧಿಸಿದ ನಿರ್ಬಂಧಗಳ ವಿರುದ್ಧ ಜನ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಹೋರಾಟಗಾರ ಡೆಸ್ಮಂಡ್ ಟುಟು ಇನಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.