Googleನಲ್ಲಿ ಅಪ್ಪಿತಪ್ಪಿಯೂ ಕೂಡ ಈ 5 ಸಂಗತಿಗಳ ಹುಡುಕಾಟ ನಡೆಸಬೇಡಿ, ಇಲ್ದಿದ್ರೆ ಜೈಲು ಶಿಕ್ಷೆ ಗ್ಯಾರಂಟಿ

Don Not Search These Things On Google - Google ನಲ್ಲಿ ಕೆಲ ವಿಷಯಗಳ ಹುಡುಕಾಟ ನಡೆಸಿದರೆ ನೀವು ಜೈಲಿಗೂ ಹೋಗಬಹುದು. ಹೀಗಾಗಿ ನೀವು Google ನಲ್ಲಿ ಏನನ್ನಾದರೂ ಹುಡುಕುವಾಗ ಬಹಳ ಎಚ್ಚರಿಕೆಯಿಂದ ಹುಡುಕಾಟ ನಡೆಸಿ. ಇಂದು ನಾವು ನಿಮಗೆ ಅಂತಹ ಕೆಲ ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವಿಷಯಗಳನ್ನು ಅಪ್ಪಿತಪ್ಪಿಯೂ ಕೂಡ ನೀವು ಗೂಗಲ್ ನಲ್ಲಿ ಸರ್ಚ್ ಮಾಡ್ಬೇಡಿ.  ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.  

Written by - Nitin Tabib | Last Updated : Dec 21, 2021, 05:16 PM IST
  • ಚಲನಚಿತ್ರ ಬಿಡುಗಡೆಗೂ ಮುನ್ನ ಆನ್ಲೈನ್ ನಲ್ಲಿ ಲೀಕ್ ಮಾಡುವುದು ಅಪರಾಧದ ಶ್ರೇಣಿಗೆ ಸೇರುತ್ತದೆ.
  • ಬಾಂಬ್ ತಯಾರಿಸುವ ವಿಧಾನ ಇತ್ಯಾದಿಗಳಂತಹ ವಿಷಯಗಳನ್ನು ಆನ್ಲೈನ್ ನಲ್ಲಿ ಹುಡುಕಬೇಡಿ.
  • ಗರ್ಭಪಾತದ ವಿಧಾನಗಳಂತಹ ಸಂಗತಿಗಳನ್ನು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡ್ಬೇಡಿ.
Googleನಲ್ಲಿ ಅಪ್ಪಿತಪ್ಪಿಯೂ ಕೂಡ ಈ 5 ಸಂಗತಿಗಳ ಹುಡುಕಾಟ ನಡೆಸಬೇಡಿ, ಇಲ್ದಿದ್ರೆ ಜೈಲು ಶಿಕ್ಷೆ ಗ್ಯಾರಂಟಿ  title=
Google Tips And Tricks (Representational Image)

ನವದೆಹಲಿ: Google Tips And Tricks - ಇಂದಿನ ಡಿಜಿಟಲ್ ಯುಗದಲ್ಲಿ, ನಾವು Google ನಲ್ಲಿ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತೇವೆ. ಅನಾರೋಗ್ಯದಿಂದ ಆಹಾರದ ಪಾಕವಿಧಾನಗಳವರೆಗೆ ಎಲ್ಲವನ್ನೂ ಕಂಡುಹಿಡಿಯಲು ಜನರು Google ಅನ್ನು ಬಳಸುತ್ತಿದ್ದಾರೆ. Google ಎಲ್ಲಾ ರೀತಿಯ ಫಲಿತಾಂಶಗಳನ್ನು ಹೊಂದಿದೆ. Google ನಲ್ಲಿ ಉಲ್ಲೇಖಿಸಿರುವ ವಿಷಯಗಳು ಕೆಲವೊಮ್ಮೆ ಸರಿ ಆದರೆ ಕೆಲವೊಮ್ಮೆ ತಪ್ಪು ಕೂಡ ಇರಬಹುದು. ಆದರೆ Google ನಲ್ಲಿ ಕೆಲ ವಿಷಯಗಳ ಹುಡುಕಾಟ ನಡೆಸಿದರೆ,  ನೀವು ಜೈಲಿಗೂ ಹೋಗಬೇಕಾಗಬಹುದು ಎಂಬುದು ಅತ್ಯಂತ ಮುಖ್ಯವಾದ ವಿಷಯ (Google Latest News) ಎಂದು ನಿಮಗೆ ತಿಳಿದಿದೆಯೇ. ಹೀಗಾಗಿ Google ನಲ್ಲಿ ನೀವು ಏನನ್ನಾದರೂ ಹುಡುಕುವ ಮುನ್ನ  ಬಹಳ ಎಚ್ಚರಿಕೆಯಿಂದ ಹುಡುಕಿ. ಇಂದು ನಾವು ನಿಮಗೆ ಅಂತಹ ಕೆಲ ವಿಷಯಗಳ ಕುರಿತು ಮಾಹಿತಿ ನೀಡುತ್ತಿದ್ದು. ಅವುಗಳನ್ನು ಅಪ್ಪಿತಪ್ಪಿಯೂ ಕೂಡ ಗೂಗಲ್ ನಲ್ಲಿ (Google Tips) ಹುಡುಕಾಟ (Google Search) ನಡೆಸಬೇಡಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.

ಚಲನಚಿತ್ರ ಪೈರಸಿ
ಚಿತ್ರ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಸೋರಿಕೆಯಾಗುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ನೀವು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದರೆ ಅಥವಾ ಡೌನ್‌ಲೋಡ್ ಮಾಡಿದರೆ ಅದು ದೊಡ್ಡ ಅಪರಾಧ. ಭಾರತ ಸರ್ಕಾರದ ಈ ಕಾನೂನನ್ನು ಉಲ್ಲಂಘಿಸಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. 

'ಬಾಂಬ್ ಅನ್ನು ಹೇಗೆ ತಯಾರಿಸುವುದು?'
ಸಾಮಾನ್ಯವಾಗಿ ಜನರು Google ನಲ್ಲಿ (Google Tricks) ತಮಗೆ ಸಂಬಂಧವೇ ಇಲ್ಲದ ಕೆಲ ವಿಷಯಗಳನ್ನು ಹುಡುಕುತ್ತಾರೆ. ಉದಾಹರಣೆಗೆ ಬಾಂಬ್‌ಗಳನ್ನು ಹೇಗೆ ತಯಾರಿಸುವುದು ಇತ್ಯಾದಿ. ಇಂತಹ  ಅನುಮಾನಾಸ್ಪದ ವಿಷಯಗಳನ್ನು ಹುಡುಕಬೇಡಿ. ಏಕೆಂದರೆ, ಈ ಚಟುವಟಿಕೆಗಳನ್ನು ಸೈಬರ್ ಸೆಲ್ ಮೇಲ್ವಿಚಾರಣೆ ಮಾಡುತ್ತದೆ. ಹಾಗೆ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದರಲ್ಲಿ ನೀವು ಜೈಲಿಗೂ ಸಹ ಹೋಗಬೇಕಾಗಬಹುದು.

'ಗರ್ಭಪಾತ ಮಾಡುವುದು ಹೇಗೆ?'
Google ನಲ್ಲಿ ಗರ್ಭಪಾತ ವಿಧಾನಗಳನ್ನು ಹುಡುಕುವುದು ಸಹ ಅಪರಾಧದ ವರ್ಗಕ್ಕೆ ಸೇರುತ್ತದೆ. ಹೀಗಾಗಿ ಇಂತಹ ವಿಷಯ ಹುಡುಕಾಟ ನಡೆಸಬೇಡಿ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ.

ಇದನ್ನೂ ಓದಿ-Google Chrome: ಗೂಗಲ್ ಕ್ರೋಮ್ ಬಳಕೆದಾರರಿಗೆ ಸರ್ಕಾರದ ಎಚ್ಚರಿಕೆ.. ಇದೇ ಕಾರಣ.!

ಖಾಸಗಿ ಫೋಟೋ ಮತ್ತು ವೀಡಿಯೊ
ಸಾಮಾಜಿಕ ಮಾಧ್ಯಮ ಅಥವಾ ಗೂಗಲ್‌ನಲ್ಲಿ ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಸೋರಿಕೆ ಮಾಡುವುದು ಸಹ ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದರಿಂದಲೂ ಕೂಡ ನೀವು ಜೈಲು ಪಾಲಾಗಬಹುದು. ತಪ್ಪಾಗಿಯೂ ಯಾರೊಬ್ಬರ ಖಾಸಗಿ ಫೋಟೋ ಅಥವಾ ವೀಡಿಯೊವನ್ನು Google ನಲ್ಲಿ ಹಂಚಿಕೊಳ್ಳಬೇಡಿ.

ಇದನ್ನೂ ಓದಿ-IIT-Bombay Placement: ಮೊದಲ ದಿನದಂದೇ 2.05 ಕೋಟಿ ರೂ ಪ್ಯಾಕೇಜ್ ನೀಡಿದ Uber

ಚೈಲ್ಡ್ ಪಾರ್ನ್ 
ಚೈಲ್ಡ್ ಪಾರ್ನ್ ಬಗ್ಗೆ ಭಾರತ ಸರ್ಕಾರವು ತುಂಬಾ ಕಠಿಣ ನಿಲುವು ಹೊಂದಿದೆ. Google ನಲ್ಲಿ ಮಕ್ಕಳ ಅಶ್ಲೀಲತೆಯನ್ನು ಹುಡುಕುವುದು, ವೀಕ್ಷಿಸುವುದು ಅಥವಾ ಹಂಚಿಕೊಳ್ಳುವುದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದರೆ ನೀವು  ಜೈಲು ಪಾಲಾಗಬಹುದು.

ಇದನ್ನೂ ಓದಿ-Google ತನ್ನ ಈ ಆಪ್ ಗಳಿಂದ ನಿಮ್ಮ ಬೇಹುಗಾರಿಕೆ ನಡೆಸುತ್ತಿದೆ, ತಕ್ಷಣ ಈ ಕೆಲಸ ಮಾಡಿ ಅವುಗಳನ್ನು ಸ್ಟಾಪ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News