ನವದೆಹಲಿ : ಬಿಸಿಸಿಐ (BCCI) ಭಾರತ ಏಕದಿನ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಬದಲಿಗೆ ರೋಹಿತ್ ಶರ್ಮಾ (Rihit Sharma) ಅವರನ್ನು ನೂತನ ನಾಯಕರನ್ನಾಗಿ ನೇಮಿಸಿದೆ. ರೋಹಿತ್ ಅವರನ್ನು ಈಗಾಗಲೇ ಟಿ20 ತಂಡದ ನಾಯಕರನ್ನಾಗಿ ಮಾಡಲಾಗಿದೆ. ಇದೀಗ ಏಕದಿನ ತಂಡದ ನೂತನ ಉಪನಾಯಕ ಯಾರು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ (Team India) ಮೂವರು ಆಟಗಾರರ ಹೆಸರು ಕೇಳಿ ಬರುತ್ತಿದೆ.
ಈ 3 ಆಟಗಾರರು ಹೊಸ ಉಪನಾಯಕರಾಗಬಹುದು :
ಕೆಎಲ್ ರಾಹುಲ್ :
ರೋಹಿತ್ ಶರ್ಮಾ (Rohit Sharma) ನಾಯಕನಾಗಿ ಆಯ್ಕೆಯಾದ ಮೇಲೆ ಕೆಎಲ್ ರಾಹುಲ್ ಹೊಸ ಉಪನಾಯಕರಾಗಬಹುದು. ಕೆಎಲ್ ರಾಹುಲ್ (KL Rahul) ಕೂಡ ಹಿರಿಯ ಆಟಗಾರ. ಅವರು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವ ವಹಿಸಿದ್ದು, ಆ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಮಾತ್ರವಲ್ಲ, ರಾಹುಲ್ ಈಗಾಗಲೇ ಟಿ20 ತಂಡದ ಉಪನಾಯಕರಾಗಿದ್ದಾರೆ. ರಾಹುಲ್ ಉತ್ತಮ ವಿಕೆಟ್ ಕೀಪರ್ ಕೂಡಾ ಹೌದು. ಈ ತಂಡದ ನೂತನ ನಾಯಕರಾಗಲು ರಾಹುಲ್ ಅತಿ ದೊಡ್ಡ ಸ್ಪರ್ಧಿಯಾಗಿದ್ದಾರೆ.
ಇದನ್ನೂ ಓದಿ : IND vs SA : ದ. ಆಫ್ರಿಕಾ ಪ್ರವಾಸದ ಮೊದಲೆ ಟೀಂ ಇಂಡಿಯಾಗೆ ದೊಡ್ಡ ಹೊಡೆತ, 3 ಆಟಗಾರರು ಒಟ್ಟಿಗೆ ಹೊರಗೆ
ರಿಷಬ್ ಪಂತ್ :
ರಾಹುಲ್ ನಂತೆ ರಿಷಬ್ ಪಂತ್ (Rishab Pant) ಕೂಡಾ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಮತ್ತು ಉತ್ತಮ ಬ್ಯಾಟ್ಸ್‌ಮನ್. ಟೀಮ್ ಇಂಡಿಯಾದ (Team India) ಹೊಸ ಉಪನಾಯಕರಾಗುವ ರೇಸ್ ನಲ್ಲಿ ಇವರ ಹೆಸರು ಕೂಡಾ ಕೇಳಿ ಬರುತ್ತಿದೆ. ಪಂತ್ ಕೂಡ ಧೋನಿಯಂತೆ (MS Dhoni) ಉತ್ತಮವಿಕೆಟ್ ಕೀಪರ್ ಆಗಿದ್ದಾರೆ. ಹೀಗಾಗಿ ಆಯ್ಕೆದಾರರು ಪಂತ್ ಅವರನ್ನು ಉಪನಾಯಕನ ಸ್ಥಾನಕ್ಕೆ ಪರಿಗಣಿಸಬಹುದು. ಐಪಿಎಲ್ 2021ರ ಮೊದಲಾರ್ಧದಲ್ಲಿ, ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನ ಅತ್ಯುತ್ತಮ ರೀತಿಯಲ್ಲಿ ನಾಯಕತ್ವ ವಹಿಸಿದ್ದರು. ಹೀಗಿರುವಾಗ ರೋಹಿತ್ ಜೊತೆಗಿನ ಪಂತ್ ಜೋಡಿ ಹಿಟ್ ಆಗಬಹುದು.
ಶ್ರೇಯಸ್ ಅಯ್ಯರ್ :
ಉಪನಾಯಕ ಶ್ರೇಯಸ್ ಅಯ್ಯರ್ (Shreyas Iyer), ತಂಡದ ಉಪನಾಯಕರಾಗಲು ಮೂರನೇ ಅತಿ ದೊಡ್ಡ ಸ್ಪರ್ಧಿಯಾಗಿದ್ದಾರೆ. ಅಯ್ಯರ್, 4 ನೇ ನಂಬರ್ ನಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿದ್ದಾರೆ. ಅಯ್ಯರ್ ನಾಯಕತ್ವದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ 2020 ರಲ್ಲಿ ಮೊದಲ ಬಾರಿಗೆ ಐಪಿಎಲ್‌ನ (IPL) ಫೈನಲ್ ತಲುಪಿದೆ. ಅಯ್ಯರ್ ಟೆಸ್ಟ್ ನಲ್ಲಿಯೂ ಉತ್ತಮ ಪುನರಾಗಮನ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ರೋಹಿತ್ ಜೊತೆಗೆ ಭಾರತದ ಉಪನಾಯಕತ್ವವನ್ನು ಶ್ರೇಯಸ್ ಅಯ್ಯರ್ ಹಸ್ತಾಂತರಿಸಬಹುದು.
ಇದನ್ನೂ ಓದಿ : ನಾಯಕನ ಪಟ್ಟ ತೊರೆಯಲು ನಿರಾಕರಿಸಿದ್ದ ವಿರಾಟ್ ಕೊಹ್ಲಿ, ಬಲವಂತವಾಗಿ ನಾಯಕತ್ವ ಕಸಿದುಕೊಂಡ ಬಿಸಿಸಿಐ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ