ಪಾಟ್ನಾ (ಬಿಹಾರ): ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ಲಾಲೂ ಪ್ರಸಾದ್ ಯಾದವ್ (RJD leader Lalu Prasad Yadav) ಪುತ್ರ ಹಾಗೂ ಆರ್ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ (Tej Pratap Yadav) ಇದೀಗ ಹೊಸದೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಭಗವಾನ್ ಕೃಷ್ಣ ಮತ್ತು ಶಿವನ ಉಡುಪನ್ನು ಧರಿಸುವುದರಿಂದ ಹಿಡಿದು ಪಕ್ಷದ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಕೊಳಲು ನುಡಿಸುವವರೆಗೆ, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಹಲವಾರು ಬಾರಿ ಜನರನ್ನು ಮೆಚ್ಚಿಸಿದ್ದಾರೆ.
ಈ ಬಾರಿ, ತೇಜ್ ಪ್ರತಾಪ್ ಅವರು 50,000 ರೂಪಾಯಿ ಮೌಲ್ಯದ ಐಫೋನ್ (iPhone) ಖರೀದಿಸಿ ಪಾಟ್ನಾದ ಬೀದಿಗಳಲ್ಲಿ ಪೆನ್ನುಗಳನ್ನು ಮಾರುತ್ತಿದ್ದ ಬಾಲಕಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾದುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
एक ग़रीब बच्ची जो पेन बेच कर जीवन यापन कर रही थीं इसको तेजू भैया ने एप्पल का आईफोन दिला कर गरीब बच्ची को पढ़ने के लिए प्रेरित किया ।#TejPratapITCell pic.twitter.com/QRdnmVdnmM
— khesari (@Khesarii) December 4, 2021
ಶನಿವಾರ ಸಂಜೆ ತೇಜ್ ಪ್ರತಾಪ್ ತನ್ನ ಸ್ನೇಹಿತರೊಂದಿಗೆ ಪಾಟ್ನಾದ ಬೋರಿಂಗ್ ರೋಡ್ ಪ್ರದೇಶದಲ್ಲಿ ಸುತ್ತಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲಿ, ಬೀದಿಯಲ್ಲಿ ಪೆನ್ನುಗಳನ್ನು ಮಾರುತ್ತಿರುವ ಚಿಕ್ಕ ಹುಡುಗಿಯನ್ನು ನೋಡಿದರು.
ಬಾಲಕಿಯು ಬೀದಿಯಲ್ಲಿ ಪೆನ್ನು ಮಾರುತ್ತಿರುವುದನ್ನು ಕಂಡು ತೇಜ್ ಪ್ರತಾಪ್, ತಕ್ಷಣ ತನ್ನ ಕಾರಿನಿಂದ ಇಳಿದು ಅವಳೊಂದಿಗೆ ಮಾತನಾಡಲು ಪ್ರಾರಂಭಿಸಿದರು . ಈ ಸಮಯದಲ್ಲಿ, ಬಾಲಕಿ ತೇಜ್ ಪ್ರತಾಪ್ಗೆ ತನ್ನ ಹೆಸರು ಮೇಘಾ, ಪುಣೈಚಕ್ನಲ್ಲಿ ವಾಸಿಸುತ್ತಾಳೆ ಮತ್ತು ಅವಳ ತಂದೆ ಆಟೋ ರಿಕ್ಷಾ ಚಾಲಕ ಎಂದು ತಿಳಿಸಿದ್ದಾಳೆ.
ಕೆಲವು ನಿಮಿಷಗಳ ನಂತರ, ಆರ್ಜೆಡಿ ನಾಯಕ ತನ್ನ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಲು ಮತ್ತು ಅಗತ್ಯವಿರುವಾಗ ತನ್ನೊಂದಿಗೆ ಮಾತನಾಡಲು ಹೇಳಿದ್ದಾರೆ. ಇದಕ್ಕೆ ಬಾಲಕಿ ತೇಜ್ ಪ್ರತಾಪ್ ಬಳಿ ತನ್ನ ಹತ್ತಿರ ಮೊಬೈಲ್ ಇಲ್ಲ ಎಂದು ಹೇಳಿದ್ದಾಳೆ.
ಇದನ್ನೂ ಓದಿ: Omicron ಭೀತಿ ನಡುವೆ, ಮುಂಬೈನಲ್ಲಿ ವಿದೇಶದಿಂದ ಹಿಂತಿರುಗಿದ 109 ಜನ ನಾಪತ್ತೆ
ಇದರಿಂದ ಭಾವುಕರಾದ ಲಾಲೂ ಪ್ರಸಾದ್ ಪುತ್ರ ಬಾಲಕಿಯನ್ನು ಸಮೀಪದ ಮೊಬೈಲ್ ಅಂಗಡಿಗೆ ಕರೆದೊಯ್ದಿದ್ದಾರೆ. ಆಕೆಗೆ 50,000 ರೂಪಾಯಿ ಮೌಲ್ಯದ ಆಪಲ್ ಐಫೋನ್ ಖರೀದಿಸಿ, ಉಡುಗೊರೆ ನೀಡಿದ್ದಾರೆ.
ದುಬಾರಿ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ ನಂತರ, ಅದನ್ನು ತನ್ನ ಶಿಕ್ಷಣಕ್ಕಾಗಿ ಬಳಸುವುದಾಗಿ ಮತ್ತು ಬೀದಿಯಲ್ಲಿ ಪೆನ್ನುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಬಾಲಕಿ ಹೇಳಿದ್ದಾಳೆ.