Vicky Kaushal-Katrina Kaif Wedding: ಸಪ್ತಪದಿ ತುಳಿಯಲು ರಾಜಸ್ಥಾನ ತಲುಪಿದ ಕತ್ರಿನಾ ಕೈಫ್- ವಿಕ್ಕಿ ಕೌಶಲ್

                  

Vicky Kaushal-Katrina Kaif Wedding: ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆಯನ್ನು ಕಾತರದಿಂದ ನಿರೀಕ್ಷಿಸಲಾಗುತ್ತಿದೆ. ಏತನ್ಮಧ್ಯೆ, ಇಬ್ಬರೂ ತಮ್ಮ ಮದುವೆಗೆ ಸವಾಯಿ ಮಾಧೋಪುರಕ್ಕೆ ಬಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ವಿಕ್ಕಿ ಕೌಶಲ್ - ಕತ್ರಿನಾ ಕೈಫ್ ಅವರ ಮದುವೆಗಾಗಿ ಕಾತರದಿಂದ ಕಾಯಲಾಗುತ್ತಿದೆ. ಬಹು ಚರ್ಚಿತ ಈ ಮದುವೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆಯಲಿದೆ. ಈ ಮದುವೆ ಬಗ್ಗೆ ಸಾಕಷ್ಟು ಸಡಗರವಿದೆ. ಅದೇ ಸಮಯದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆಗೆ ಸವಾಯಿ ಮಾಧೋಪುರ್ ತಲುಪಿದ್ದಾರೆ. ಇಬ್ಬರೂ ಮುಂಬೈನಿಂದ ಹೊರಟಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಕತ್ರಿನಾ ಹಳದಿ ಬಣ್ಣದ ಡ್ರೆಸ್ ಧರಿಸಿದ್ದರು.

2 /5

ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ವಿವಾಹಕ್ಕಾಗಿ ರಾಜಸ್ಥಾನಕ್ಕೆ ಆಗಮಿಸಿದ್ದಾರೆ. ಇವರ ಮದುವೆ ಸವಾಯಿ ಮಾಧೋಪುರ್ ಜಿಲ್ಲೆಯ ಹೋಟೆಲ್‌ನಲ್ಲಿ ನಡೆಯಲಿದೆ. ಇವರಿಬ್ಬರು ಇತರ ಎಂಟು ಮಂದಿಯೊಂದಿಗೆ ಸೋಮವಾರ ರಾತ್ರಿ ಚಾರ್ಟರ್ಡ್ ವಿಮಾನದಲ್ಲಿ ಜೈಪುರ ವಿಮಾನ ನಿಲ್ದಾಣವನ್ನು ತಲುಪಿದರು. ಇಲ್ಲಿಂದ ರಸ್ತೆ ಮಾರ್ಗವಾಗಿ ಸವಾಯಿ ಮಾಧೋಪುರಕ್ಕೆ ತೆರಳಿದರು.

3 /5

ಕತ್ರಿನಾ ಅವರ ಸಹೋದರಿ ಸೇರಿದಂತೆ ಕೆಲವು ಅತಿಥಿಗಳು ಸೋಮವಾರ ಬೆಳಿಗ್ಗೆಯೇ ನಿಯಮಿತ ವಿಮಾನಗಳಲ್ಲಿ ಇಲ್ಲಿಗೆ ಆಗಮಿಸಿದರು ಎಂದು ಮೂಲಗಳು ತಿಳಿಸಿವೆ. ವಿವಾಹ ಸಮಾರಂಭವು ಡಿಸೆಂಬರ್ 7 ರಿಂದ 10 ರವರೆಗೆ ಸವಾಯಿ ಮಾಧೋಪುರ್ ಜಿಲ್ಲೆಯ ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾದ ಕೋಟೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ-  Gandhada Gudi teaser: ಅನಾವರಣಗೊಂಡ ಅಪ್ಪು ಕನಸಿನ ಗಂಧದ ಗುಡಿ ಟೀಸರ್

4 /5

ಹಿಂದೂ ಸಂಪ್ರದಾಯಗಳ ಪ್ರಕಾರ, ದಂಪತಿಗಳು ಸಪ್ತಪದಿ ತುಳಿಯಲು ಗಾಜಿನ ಮಂಟಪವನ್ನು ರಾಜವಾಡ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಲಂಕರಿಸಲಾಗಿದೆ. ಇದಲ್ಲದೆ, ಮಂಟಪದ ಮೇಲೆ ಗಾಜಿನ ಕೆತ್ತನೆಗಳು ಆಪ್ಟಿಕಲ್ ಭ್ರಮೆಯನ್ನು ಸೃಷ್ಟಿಸುತ್ತವೆ. ಬಿಗಿ ಭದ್ರತೆಯ ನಡುವೆ ಈ ವಿವಾಹ ಸಮಾರಂಭ ನಡೆಯಲಿದೆ.   

5 /5

ಪ್ರತಿ ಅತಿಥಿಗೆ ರಹಸ್ಯ ಕೋಡ್‌ಗಳನ್ನು ನೀಡಲಾಗುತ್ತದೆ, ಇದರಿಂದ ಯಾವ ಅತಿಥಿ ಯಾವ ಕೋಣೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿಯುವುದಿಲ್ಲ. ಸಭಾಂಗಣದಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಇಡೀ ಮದುವೆಯ ಚಿತ್ರೀಕರಣಕ್ಕೆ ಅಂತರಾಷ್ಟ್ರೀಯ ಛಾಯಾಗ್ರಾಹಕರನ್ನು ಕರೆಯಲಾಗಿದೆ. ಡಿಸೆಂಬರ್ 7 ರಿಂದ ಡಿಸೆಂಬರ್ 9 ರವರೆಗೆ ಸಮಾರಂಭ ನಡೆಯಲಿದ್ದು, ಬೌನ್ಸರ್‌ಗಳು ಮತ್ತು ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.