IND vs NZ 2nd Test: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಬೃಹತ್ ಗೆಲುವು, ಟೆಸ್ಟ್ ಸರಣಿ ಕೈವಶ

ಸೋಮವಾರ ನಡೆದ 4ನೇ ದಿನದಾಟದ ಮೊದಲ ಸೆಷನ್ ಆರಂಭಗೊಂಡ ಕೆಲವೇ ಓವರ್​ಗಳಲ್ಲಿ ಕಿವೀಸ್ ತಂಡವನ್ನು ಟೀಂ ಇಂಡಿಯಾ ಮತ್ತೊಮ್ಮೆ ಅಲ್ಪಮೊತ್ತಕ್ಕೆ ಕಟ್ಟಿಹಾಕಿತು.

Written by - Puttaraj K Alur | Last Updated : Dec 6, 2021, 11:43 AM IST
  • ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಬೃಹತ್ ಗೆಲುವು ಸಾಧಿಸಿದೆ
  • 2ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 372 ರನ್ ಗಳ ಭರ್ಜರಿ ಗೆಲುವು
  • ಟಿ-20 ಸರಣಿ ಬಳಿಕ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡ ಭಾರತ
IND vs NZ 2nd Test: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಬೃಹತ್ ಗೆಲುವು, ಟೆಸ್ಟ್ ಸರಣಿ ಕೈವಶ title=
ಟೆಸ್ಟ್ ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್(New Zealand) ವಿರುದ್ಧ ಟೀಂ ಇಂಡಿಯಾ ನಿರೀಕ್ಷೆಯಂತೆ ಬೃಹತ್ ಗೆಲುವು ಸಾಧಿಸಿದೆ. ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯ(IND vs NZ 2nd Test)ದಲ್ಲಿ ಕಿವೀಸ್ ವಿರುದ್ಧ 372 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದಭಾರತ ಇದೀಗ ಟೆಸ್ಟ್ ಸರಣಿಯನ್ನೂ ಕೈವಶ ಮಾಡಿಕೊಂಡಿದೆ.  

ಸೋಮವಾರ ನಡೆದ 4ನೇ ದಿನದಾಟದ ಮೊದಲ ಸೆಷನ್ ಆರಂಭಗೊಂಡ ಕೆಲವೇ ಓವರ್​ಗಳಲ್ಲಿ ಕಿವೀಸ್ ತಂಡವನ್ನು ಟೀಂ ಇಂಡಿಯಾ(Team India) ಮತ್ತೊಮ್ಮೆ ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ನ್ಯೂಜಿಲೆಂಡ್ ತಂಡಕ್ಕೆ 540 ರನ್​ಗಳ ಬೃಹತ್ ಮೊತ್ತದ ಗೆಲುವಿನ ಗುರಿಯನ್ನು ಟೀಂ ಇಂಡಿಯಾ ನೀಡಿತ್ತು. ಆದರೆ ಕಿವೀಸ್ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡಬೇಕಾಯಿತು. ಹೀಗಾಗಿ 167 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯವಾಗಿ ಸೋಲು ಕಂಡಿತು. ಬೌಲಿಂಗ್ ನಲ್ಲಿ ಮತ್ತೊಮ್ಮೆ ಮಿಂಚಿದ ಆರ್.ಅಶ್ವಿನ್(R.Ashwin) ಮತ್ತು ಜಯಂತ್ ಯಾದವ್ ತಲಾ 4 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 109.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 325 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾ(Team India)ದ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿಹೋಗಿತ್ತು. 28.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಕೇವಲ 62 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 70 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿತ್ತು. ಈ ಮೂಲಕ ನ್ಯೂಜೆಲೆಂಡ್ ಗೆಲುವಿಗೆ ಬರೋಬ್ಬರಿ 540 ರನ್ ಗಳ ಬೃಹತ್ ಗುರಿ ನೀಡಿತ್ತು. ಆದರೆ ಮತ್ತೊಮ್ಮೆ ಟೀ ಇಂಡಿಯಾದ ಬೌಲರ್ ಗಳು ಮಾರಕ ಬೌಲಿಂಗ್ ಪ್ರದರ್ಶಿಸಿದರು.

56.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್(New Zealand)ಕೇವಲ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ 372 ರನ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಮೊದಲ ಇನ್ನಿಂಗ್ಸ್ ನಲ್ಲಿ 150 ಮತ್ತು 2ನೇ ಇನ್ನಿಂಗ್ಸ್ ನಲ್ಲಿ 62 ರನ್ ಗಳಿಸಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಆರ್.ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.Twitterನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
https://apple.co/3hEw2hyApple Link - 
https://bit.ly/3hDyh4GAndroid Link - 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News