Google ತನ್ನ ಈ ಆಪ್ ಗಳಿಂದ ನಿಮ್ಮ ಬೇಹುಗಾರಿಕೆ ನಡೆಸುತ್ತಿದೆ, ತಕ್ಷಣ ಈ ಕೆಲಸ ಮಾಡಿ ಅವುಗಳನ್ನು ಸ್ಟಾಪ್ ಮಾಡಿ

Google Location Tracking - ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವಾರು ಅಪ್ಲಿಕೇಶನ್‌ಗಳಿವೆ. ಆದರೆ ನಮ್ಮ ಡೇಟಾವನ್ನು ಯಾವ ಅಪ್ಲಿಕೇಶನ್‌ಗಳು ಸಂಗ್ರಹಿಸುತ್ತಿವೆ ಅಥವಾ ಸೇವ್ ಮಾಡುತ್ತವೆ ಎಂಬುದನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಇಂದು ನಾವು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿರುವ Google ನ ಆ ಅಪ್ಲಿಕೇಶನ್‌ಗಳ ಕುರಿತು ಮಾಹಿತಿ ನೀಡಲಿದ್ದೇವೆ. ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು  ಲೋಕೇಶನ್ ಟ್ರ್ಯಾಕಿಂಗ್  ಅನ್ನು ಸಹ ನಿಲ್ಲಿಸಬಹುದು.

Written by - Nitin Tabib | Last Updated : Nov 29, 2021, 04:41 PM IST
  • Google ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆ
  • ಇದಕ್ಕಾಗಿ ಅದು ಸರ್ಚ್ ಹಾಗೂ ಮ್ಯಾಪ್ಸ್ ಗಳನ್ನು ಬಳಸುತ್ತದೆ
  • ಅವುಗಳನ್ನು ಸ್ಥಗಿತಗೊಳಿಸಲು ಈ ಹಂತಗಳನ್ನು ಅನುಸರಿಸಿ
Google ತನ್ನ ಈ ಆಪ್ ಗಳಿಂದ ನಿಮ್ಮ ಬೇಹುಗಾರಿಕೆ ನಡೆಸುತ್ತಿದೆ, ತಕ್ಷಣ ಈ ಕೆಲಸ ಮಾಡಿ ಅವುಗಳನ್ನು ಸ್ಟಾಪ್ ಮಾಡಿ title=
Google Saves Location Data (File Photo)

ನವದೆಹಲಿ: Google Saves Location Data - ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಳಸುವುದು ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಹ್ಯಾಕಿಂಗ್ ಮತ್ತು ಸೈಬರ್ ಕಳ್ಳತನವು ತಂತ್ರಜ್ಞಾನ-ಸಂಬಂಧಿತ ತೊಂದರೆಗಳ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಮತ್ತು ಅವುಗಳನ್ನು ತಪ್ಪಿಸುವುದು ಕಷ್ಟಕರವಾದ ಕೆಲಸವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಳು ಇಂದು ಡೇಟಾವನ್ನು ಕದಿಯಲು ಹ್ಯಾಕರ್‌ಗಳಿಗೆ ಸುಲಭವಾದ ಗುರಿಯಾಗಿದೆ ಎಂದು ನೀವು ತಿಳಿದಿರಲೇಬೇಕು. ಎಷ್ಟು Google ಅಪ್ಲಿಕೇಶನ್‌ಗಳು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿವೆ ಎಂಬುದನ್ನು ಇಂದು ನಾವು ನಿಮಗೆ ವಿವರವಾಗಿ ಹೇಳುತ್ತಿದ್ದೇವೆ. ಈ ಆಪ್ ಗಳು ತುಂಬಾ ಅಪಾಯಕಾರಿ ಎಂದು ಸಾಬೀತಾಗಬಹುದು.

ಗೂಗಲ್ ನಿಮ್ಮ ಮೇಲೆ ಈ ರೀತಿ ಬೇಹುಗಾರಿಕೆ ನಡೆಸುತ್ತಿದೆ (Latest Google News)
ನೀವು Google ನ ಸರ್ಚ್ ಮತ್ತು ಮಾಪ್ಸ್ ನಂತಹ ವೈಶಿಷ್ಟ್ಯಗಳನ್ನು ಬಳಸಿದರೆ, ಈ ಅಪ್ಲಿಕೇಶನ್‌ಗಳ ಮೂಲಕ Google ನಿಮ್ಮ ಎಲ್ಲಾ ಡೇಟಾವನ್ನು ಸಂಗ್ರಹಿಸುತ್ತದೆ ಎಂಬ ಸಂಗತಿ ನಿಮಗೆ ಬಹುಶಃ ತಿಳಿದಿರಲಿಕ್ಕಿಲ್ಲ.  ಈ ಅಪ್ಲಿಕೇಶನ್‌ಗಳ ಮೂಲಕ Google ನಿಮ್ಮಲೋಕೇಶನ್  ಡೇಟಾವನ್ನು ಉಳಿಸುತ್ತದೆ ಮತ್ತು ಈ ಕೆಲಸಕ್ಕೆ ನಿಮ್ಮ ಸ್ಮಾರ್ಟ್‌ಫೋನ್‌ನ GPS ವ್ಯವಸ್ಥೆಯ ಸಹಾಯವನ್ನು ಅದು ಪಡೆದುಕೊಳ್ಳುತ್ತದೆ.

Google ನ ಈ ಕ್ರಿಯೆಯಿಂದ ಏನಾಗುತ್ತದೆ (Latest Tech News)
ನಿಮ್ಮ ಸ್ಥಳಕ್ಕೆ ಸಂಬಂಧಿಸಿದ ಡೇಟಾವನ್ನು ಉಳಿಸುವ ಮೂಲಕ Google ತನ್ನ ಜಾಹೀರಾತುಗಳನ್ನು ಸುಧಾರಿಸಲು ಪ್ರಯತ್ನಿಸುತ್ತದೆ. Google ನ ಈ ಬೇಹುಗಾರಿಕೆಯು Google ನ Android OS ಅನ್ನು ಬಳಸುವ ವಿಶ್ವಾದ್ಯಂತ ಎರಡು ಶತಕೋಟಿಗೂ ಹೆಚ್ಚು ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಮ್ಯಾಪ್ಸ್ ಮತ್ತು ಸರ್ಚ್ ಗಾಗಿ Google ಅನ್ನು ಅವಲಂಬಿಸಿರುವ Google ನ ಈ ಕ್ರಿಯೆಯಿಂದ ಅನೇಕ iPhone ಬಳಕೆದಾರರು ಸಹ ತೊಂದರೆಗೊಳಗಾಗಿದ್ದಾರೆ ಎಂದರೂ ಕೂಡ ತಪ್ಪಾಗಲಾರದು.

ಇದನ್ನೂ ಓದಿ-ನಾಳೆ Redmi Note 11T 5G ಸ್ಮಾರ್ಟ್ಫೋನ್ ಬಿಡುಗಡೆ: ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿದ ಕುತೂಹಲ..!

Google ನ ಲೋಕೇಶನ್ ಟ್ರ್ಯಾಕಿಂಗ್ ಅನ್ನು ಈ ರೀತಿ ನಿಲ್ಲಿಸಿ (Stop Google Location Tracking)
Google ಯಾವಾಗಲೂ ನಿಮ್ಮನ್ನು ಟ್ರ್ಯಾಕ್ ಮಾಡುವ ಮೊದಲು ನಿಮ್ಮ ಅನುಮತಿಯನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ಮುಂದುವರಿಯುತ್ತದೆ, ಆದರೆ ನೀವು ಬಯಸಿದರೆ, ನೀವು Google ನ ಈ ಸ್ಥಳ ಟ್ರ್ಯಾಕಿಂಗ್ ಅನ್ನು ಆಫ್ ಮಾಡಬಹುದು. ಇದನ್ನು ಮಾಡಲು, ನೀವು ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಬ್ರೌಸರ್‌ಗೆ ಹೋಗಿ, google.com ತೆರೆಯಿರಿ, ಮೇಲಿನ ಬಲಭಾಗದಲ್ಲಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ Google ಖಾತೆಗೆ ಲಾಗ್-ಇನ್ ಮಾಡಿ ನಂತರ 'ನಿಮ್ಮ Google ಖಾತೆಯನ್ನು ನಿರ್ವಹಿಸಿ' ಮೇಲೆ ಕ್ಲಿಕ್ ಮಾಡಿ. ಈ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ, 'ಗೌಪ್ಯತೆ ಮತ್ತು ವೈಯಕ್ತೀಕರಣ' ವಿಭಾಗಕ್ಕೆ ಹೋಗಿ, 'ನಿಮ್ಮ ಡೇಟಾ ಮತ್ತು ಗೌಪ್ಯತೆಯನ್ನು ನಿರ್ವಹಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, 'ಚಟುವಟಿಕೆ ನಿಯಂತ್ರಣ' ಆಯ್ಕೆ ಮಾಡಿ ಮತ್ತು 'ನಿಮ್ಮ ಚಟುವಟಿಕೆ ನಿಯಂತ್ರಣವನ್ನು ನಿರ್ವಹಿಸಿ' ಗೆ ಸ್ಕ್ರಾಲ್ ಮಾಡಿ. ಇಲ್ಲಿ ನೀವು 'ವೆಬ್ ಮತ್ತು ಚಟುವಟಿಕೆ' ಅನ್ನು ನೋಡುವಿರಿ. ಅದನ್ನು ನೀವು ಆನ್‌ನಿಂದ ಆಫ್ ಮಾಡಬೇಕು.

ಇದನ್ನೂ ಓದಿ-WhatsAppನಲ್ಲಿ ಫೋಟೋ, ವಿಡಿಯೋ ನೋಡಿದ ಮೇಲೆ ಅಟೋಮೆಟಿಕ್ ಡಿಲೀಟ್ ಮಾಡುವ ಟ್ರಿಕ್ ಗೊತ್ತಾ?

ಈ ರೀತಿಯಲ್ಲಿ ನಿಮ್ಮ Google ನ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಆಫ್ ಮಾಡುವ ಮೂಲಕ ನೀವೂ ಈ ಬೇಹುಗಾರಿಕೆಯಿಂದ ಪಾರಾಗಬಹುದು. ಆದರೆ ಈ ವೈಶಿಷ್ಟ್ಯವನ್ನು ಆಯ್ಕೆ ಮಾಡುವ ಮೂಲಕ, Google ನ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಲ್ಲಿ ನೀವು ಇಲ್ಲಿಯವರೆಗೆ ಪಡೆಯುತ್ತಿರುವಷ್ಟು ವೈಯಕ್ತೀಕರಿಸಿದ ಸಲಹೆಗಳನ್ನು ನೀವು ಪಡೆಯುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ.

ಇದನ್ನೂ ಓದಿ-iPhone 14ರ ಹೊಸ ಸೋರಿಕೆಯಿಂದ ದಿಗ್ಭ್ರಮೆಗೊಂಡ ಅಭಿಮಾನಿಗಳು! ಒಂದೇ ಫೋನ್ ನಲ್ಲಿ ಎರಡು ಸ್ಕ್ರೀನ್ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News