ಹಲವು ದೇಶಗಳಲ್ಲಿರುವ ಕಾನೂನುಗಳನ್ನು ತಿಳಿದುಕೊಂಡರೆ ನಿಮಗೆ ಅಚ್ಚರಿಯ ಜೊತೆಗೆ ಆಶ್ಚರ್ಯಕರವಾಗುತ್ತದೆ.
ನವದೆಹಲಿ: ಪ್ರಪಂಚದ ಹಲವು ದೇಶಗಳಲ್ಲಿ ವಿಚಿತ್ರವಾದ ಕಾನೂನುಗಳಿವೆ. ಹಲವು ದೇಶಗಳಲ್ಲಿರುವ ಕಾನೂನುಗಳನ್ನು ತಿಳಿದುಕೊಂಡರೆ ನಿಮಗೆ ಅಚ್ಚರಿಯ ಜೊತೆಗೆ ಆಶ್ಚರ್ಯಕರವಾಗುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ಗರ್ಲ್ ಫ್ರೆಂಡ್ಸ್(Strange laws for Girlfriend) ಹೊಂದುವ ಬಗ್ಗೆ ವಿಚಿತ್ರವಾದ ಕಾನೂನುಗಳಿವೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ (Strange laws in Pakistan) ಇಂತಹ ವಿಚಿತ್ರ ಕಾನೂನು ಇದೆ. ಇದು ವಿಚಿತ್ರವಾದರೂ ಸತ್ಯ. ವಾಸ್ತವವಾಗಿ ಪಾಕಿಸ್ತಾನದಲ್ಲಿ ಯಾವುದೇ ಯುವಕರು ಗರ್ಲ್ ಫ್ರೆಂಡ್ಸ್ ಹೊಂದಲು ಸಾಧ್ಯವಿಲ್ಲ.
ಪಾಕಿಸ್ತಾನದಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಸಿಕ್ಕಿಬಿದ್ದರೆ ಅವನನ್ನು ನೇರವಾಗಿ ಜೈಲಿಗೆ ಕಳುಹಿಸಲಾಗುತ್ತದೆ. ಪಾಕಿಸ್ತಾನದಲ್ಲಿ ಯಾವುದೇ ಹುಡುಗ ಹುಡುಗಿಯೊಂದಿಗೆ ಸ್ನೇಹ ಮಾಡಲು ಸಾಧ್ಯವಿಲ್ಲ. ಮದುವೆಗೂ ಮುನ್ನ ಗಂಡು ಮತ್ತು ಹೆಣ್ಣು ಒಟ್ಟಿಗೆ ಇರುವಂತಿಲ್ಲ ಎಂಬ ಕಠಿಣ ಕಾನೂನು ಪಾಕಿಸ್ತಾನದಲ್ಲಿದೆ.
ಪಾಕಿಸ್ತಾನದಂತೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸಹ ಗರ್ಲ್ ಫ್ರೆಂಡ್ಸ್ ಹೊಂದುವ ಬಗ್ಗೆ ವಿಚಿತ್ರ ಕಾನೂನು ಹೊಂದಿದೆ. ಇಲ್ಲಿ ಯಾವ ಯುವಕನೂ ಬಹಿರಂಗವಾಗಿ ತನ್ನ ಗೆಳತಿಯ ಕೈ ಹಿಡಿಯುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ಕಂಡುಬಂದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ಮತ್ತು ಅಪ್ಪಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ.
ನಮ್ಮ ನೆರೆಯ ಚೀನಾದಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗುತ್ತಾರೆ. ಇಲ್ಲಿ ಒಂಟಿ ಹುಡುಗರು ಗೆಳತಿಯರಿಗಾಗಿ ಹೆಚ್ಚು ಚಿಂತಿಸಬೇಕಾಗಿಲ್ಲ. ಇಲ್ಲಿ ಅವರು ತಮ್ಮ ಗರ್ಲ್ ಫ್ರೆಂಡ್ಸ್ ಆಗಿ ಬಾಡಿಗೆ ಹುಡುಗಿಯನ್ನು ಪಡೆದು ಡೇಟಿಂಗ್ ಮಾಡಬಹುದು. ಚೀನಾದ ಗುವಾಂಡಾಂಗ್ನಲ್ಲಿ ಯಾವುದೇ ಪುರುಷನು ಸುಂದರವಾಗಿರುವ ಯುವತಿಯರನ್ನು ಇಷ್ಟಪಡಬಹುದು ಮತ್ತು ಬಾಡಿಗೆ ಗೆಳತಿಯನ್ನಾಗಿಸಿಕೊಂಡು ತನ್ನೊಂದಿಗೆ ಕರೆದೊಯ್ಯಬಹುದು.
ಚೀನಾದಲ್ಲಿ ಬಾಡಿಗೆ ಹುಡುಗಿಯರ ಟ್ರೆಂಡ್ ಇದೆ. ಆದರೆ ಯಾವುದೇ ಒಬ್ಬ ಯುವಕ ಅವರಿಷ್ಟದ ಹುಡುಗಿಯನ್ನು ಬಾಡಿಗೆ ಪಡೆದ ಬಳಿಕವೂ ಅವರ ಒಪ್ಪಿಗೆಯಿಲ್ಲದೆ ಕೈ ಹಿಡಿಯಲು ಸಾಧ್ಯವಿಲ್ಲ. ಹುಡುಗಿ ಅನುಮತಿ ನೀಡದ ಹೊರತು ನೀವು ಅವಳನ್ನು ಮುಟ್ಟಲು ಸಹ ಸಾಧ್ಯವಿಲ್ಲ. ನೀವು ಅವಳ ಅನುಮತಿಯೊಂದಿಗೆ ಮಾತ್ರ ಹುಡುಗಿಯನ್ನು ಸ್ಪರ್ಶಿಸಬಹುದು.