HIV AIDS:8 ವರ್ಷಗಳ ಹಿಂದೆ AIDSಗೆ ಗುರಿಯಾದಾಗ ಎಲ್ಲವು The End ಅನಿಸಿತು, ಆದ್ರೆ, ಯಾವುದೇ ಔಷಧಿ ಇಲ್ಲದೆ HIV ಸೋಲಿಸಿದ ಮಹಿಳೆ

HIV AIDS: ಏಡ್ಸ್  (AIDS)ಮತ್ತು ಕ್ಯಾನ್ಸರ್ (Cancer) ಈ ಎರಡು ಕಾಯಿಲೆಗಳ ಹೆಸರು ಕೇಳಿದರೆ ಸಾಕು ಎಂತಹ  ವ್ಯಕ್ತಿಯ ದೇಹದಲ್ಲಿ ಕೂಡ ನಡುಕ ಉಂಟಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ತಮ್ಮ ಜೀವನದ ಕಡೆ ದಿನಗಳನ್ನು ಎಣಿಕೆ ಮಾಡಬೇಕು ಎಂಬ ನಂಬಿಕೆ ಜನರಲ್ಲಿದೆ.

Written by - Nitin Tabib | Last Updated : Nov 16, 2021, 07:52 PM IST
  • ಔಷಧಿ ಇಲ್ಲದೆ 8 ವರ್ಷಗಳ ನಂತರ ಏಡ್ಸ್ ಅನ್ನು ಮೆಟ್ಟಿ ನಿಂತ ಮಹಿಳೆ.
  • ಇಂತಹ ಜಗತ್ತಿನಲ್ಲಿ ಎರಡನೇ ಪ್ರಕರಣ ಇದಾಗಿದೆ
  • ಯಾವ ರೀತಿ ಅವರು ವೈರಸ್ ಮೇಲೆ ಜಯ ಸಾಧಿಸಿದರು ತಿಳಿಯಲು ಸುದ್ದಿ ಓದಿ.
HIV AIDS:8 ವರ್ಷಗಳ ಹಿಂದೆ AIDSಗೆ ಗುರಿಯಾದಾಗ ಎಲ್ಲವು The End ಅನಿಸಿತು, ಆದ್ರೆ, ಯಾವುದೇ ಔಷಧಿ ಇಲ್ಲದೆ HIV ಸೋಲಿಸಿದ ಮಹಿಳೆ title=
HIV AIDS (Representational Image)

ಲಂಡನ್: HIV AIDS - ಏಡ್ಸ್  (AIDS)ಮತ್ತು ಕ್ಯಾನ್ಸರ್ (Cancer) ಈ ಎರಡು ಕಾಯಿಲೆಗಳ ಹೆಸರು ಕೇಳಿದರೆ ಸಾಕು ಎಂತಹ  ವ್ಯಕ್ತಿಯ ದೇಹದಲ್ಲಿ ಕೂಡ ನಡುಕ ಉಂಟಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ತಮ್ಮ ಜೀವನದ ಕಡೆ ದಿನಗಳನ್ನು ಎಣಿಕೆ ಮಾಡಬೇಕು ಎಂಬ ನಂಬಿಕೆ ಜನರಲ್ಲಿದೆ. ಆದರೆ ಏಡ್ಸ್ ಕುರಿತು ನಡೆದ ಒಂದು ಅಧ್ಯಯನ ಹೊಸ ಇಂತಹ ಜನರಲ್ಲಿ ಹೊಸ ಆಶಾಕಿರಣ ತಂದಿದೆ ಎಂದರೆ ತಪ್ಪಾಗಲಾರದು. 

ಅರ್ಜೆಂಟೀನಾದ (Argentina) ಎಸ್ಪೆರಾನ್ಜಾ (Esperanza) ನಗರದಲ್ಲಿ ವಾಸಿಸುವ 30 ವರ್ಷದ ಮಹಿಳೆ ತನ್ನ ಬಲವಾದ ರೋಗನಿರೋಧಕ ವ್ಯವಸ್ಥೆಯ ಮೂಲಕ ಏಡ್ಸ್ ಅನ್ನು ಸೋಲಿಸಿದ್ದಾರೆ ಎಂದು ಸಂಶೋಧನೆ ಹೇಳಿದೆ. ಮಹಿಳೆಯ ಗುರುತನ್ನು ಮರೆಮಾಚಲು ವೈದ್ಯರು ಆಕೆಗೆ 'Esperanza Patient' ಎಂದು ಹೆಸರಿಟ್ಟಿದ್ದಾರೆ. ನೋಟದಲ್ಲಿ ಸುಂದರ ಮತ್ತು ಅಥ್ಲೆಟಿಕ್ ವ್ಯಕ್ತಿ ತನ್ನ ಗೆಳೆಯನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಈ ನಡುವೆ 2013ರಲ್ಲಿ ಅವರ ದೇಹದಲ್ಲಿ ಏಡ್ಸ್ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೆಲವು ವರ್ಷಗಳ ನಂತರ ಆಕೆಯ ಗೆಳೆಯ ತೀರಿಕೊಂಡ.

ಔಷಧಿ ಇಲ್ಲದೆ 8 ವರ್ಷಗಳ ನಂತರ ಏಡ್ಸ್  ಮೆಟ್ಟಿ ನಿಂದ ಮಹಿಳೆ
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಆಕೆಯ ಗೆಳೆಯ ಸಾಯುವ ಮೊದಲು ಮಹಿಳೆ ಗರ್ಭಿಣಿಯಾಗಿದ್ದಳು. ಇದಾದ ಬಳಿಕ ಆಕೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದಳು. ವೈದ್ಯರ ಪ್ರಕಾರ, ಮಗುವಿಗೆ ಜನ್ಮ ನೀಡಿದ 6 ತಿಂಗಳ ನಂತರ ಮಹಿಳೆ ಯಾವುದೇ ರೀತಿಯ ಔಷಧವನ್ನು ತೆಗೆದುಕೊಂಡಿಲ್ಲ. ಇದರ ಹೊರತಾಗಿಯೂ, ತನ್ನ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯ ಮೂಲಕ, ಅವರು 8 ವರ್ಷಗಳ ನಂತರ ಎಚ್ಐವಿ ಏಡ್ಸ್ನಂತಹ ಅಪಾಯಕಾರಿ ರೋಗವನ್ನು ಸೋಲಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ (Success Story) ಎಂದಿದ್ದಾರೆ.

ಯುಕೆಯ ಹಾರ್ವರ್ಡ್‌ನಲ್ಲಿ ಕೆಲಸ ಮಾಡುವ ವೈದ್ಯರ ಗುಂಪು ಈ ವರ್ಷದ ಮಾರ್ಚ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸಂಶೋಧನೆಯನ್ನು ಘೋಷಿಸಿದೆ. ಈ ಆವಿಷ್ಕಾರವು ವಿಶ್ವಾದ್ಯಂತ ಏಡ್ಸ್‌ನೊಂದಿಗೆ ವಾಸಿಸುವ 38 ಮಿಲಿಯನ್ ಜನರಿಗೆ ಚಿಕಿತ್ಸೆ ನೀಡಲು ಹೊಸ ಮಾರ್ಗಗಳನ್ನು ತೆರೆಯಲಿದೆ ಎಂದು ಸಂಶೋಧಕರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಸಂಶೋಧನೆಯನ್ನು ಡಾ. ಕ್ಸು ಯು ಮತ್ತು ಹಾರ್ವರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಅವರ ಸಹೋದ್ಯೋಗಿಗಳು ನಡೆಸಿದ್ದಾರೆ. ಅವರು ಏಡ್ಸ್ ಹೊಂದಿರುವ 30 ವರ್ಷದ ಮಹಿಳೆಯ 1.5 ಬಿಲಿಯನ್ ರಕ್ತ ಮತ್ತು ಅಂಗಾಂಶ ಕೋಶಗಳನ್ನು ಪರೀಕ್ಷಿಸಿದ್ದಾರೆ. ಆದರೆ ಎಚ್ಐವಿ ವೈರಸ್ನ ಯಾವುದೇ ಕುರುಹು ಆಕೆಯಲ್ಲಿ ಕಂಡುಬಂದಿಲ್ಲ.

ಇಂತಹ ಜಗತ್ತಿನಲ್ಲಿ ಎರಡನೇ ಘಟನೆ
ವರದಿಯ ಪ್ರಕಾರ, ಎಚ್‌ಐವಿ ಏಡ್ಸ್‌ನ ಭಯಾನಕ ವೈರಸ್ ಅನ್ನು ತನ್ನ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯ ಮೂಲಕ ತೊಡೆದು ಹಾಕಿರುವ ಇದು ವಿಶ್ವದ ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು ಆಗಸ್ಟ್ 2020 ರಲ್ಲಿ, USA ಯ ಸ್ಯಾನ್ ಫ್ರಾನ್ಸಿಸ್ಕೋದ 67 ವರ್ಷದ ಮಹಿಳೆ Loreen Willenberg ಅವರ ಕಥೆಯನ್ನು ಜಗತ್ತಿಗೆ ಬಹಿರಂಗಪಡಿಸಲಾಗಿತ್ತು. ಸುಮಾರು 30 ವರ್ಷಗಳ ಹಿಂದೆ ಅವರಿಗೆ ಎಚ್‌ಐವಿ ವೈರಸ್ ಇರುವುದು ಪತ್ತೆಯಾಗಿತ್ತು. ಆದರೆ ಅವರು ತಮ್ಮ ರೋಗನಿರೋಧಕ ಶಕ್ತಿಯಿಂದ ಈ ಅಪಾಯಕಾರಿ ವೈರಸ್ (HIV) ಅನ್ನು ನಿರ್ಮೂಲನೆ ಮಾಡಿದ್ದಾರೆ. 

ಬರ್ಲಿನ್‌ನ ತಿಮೋತಿ ರೇ ಬ್ರೌನ್ ಮತ್ತು ಲಂಡನ್‌ನ ಆಡಮ್ ಕ್ಯಾಸ್ಟಿಲಿಜೊ ಕೂಡ ಏಡ್ಸ್‌ನಿಂದ ಹೊರಬಂದು ಚೇತರಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ವೈದ್ಯರು ಹೇಳುತ್ತಾರೆ, ಆದರೆ ಅವರ ಕಥೆ ವಿಭಿನ್ನವಾಗಿತ್ತು. ಇಬ್ಬರಿಗೂ ಏಡ್ಸ್ ಹಾಗೂ ಕ್ಯಾನ್ಸರ್ ಇತ್ತು. ಇಬ್ಬರ ಜೀವಗಳನ್ನು ಉಳಿಸಲು, HIV ನಿರೋಧಕ ಜೀನ್ ಹೊಂದಿರುವ ದಾನಿಯಿಂದ ಬೊನ್ ಮ್ಯಾರೋ ಕಸಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆಯು ಮಹತ್ತರವಾಗಿ ಕೆಲಸ ಮಾಡಿತು ಮತ್ತು ಏಡ್ಸ್ ಅನ್ನು ಉಂಟುಮಾಡುವ ವೈರಸ್ ಅವರ ದೇಹದಿಂದ ನಾಶಪಡಿಸಿದೆ.

ಇಬ್ಬರೂ ಮಹಿಳೆಯರು ಯಾವುದೇ ಚಿಕಿತ್ಸೆಯನ್ನು ತೆಗೆದುಕೊಂಡಿಲ್ಲ
ವೈದ್ಯರ ಪ್ರಕಾರ, ಎಚ್ಐವಿ ವೈರಸ್ ಅನ್ನು ತಾವಾಗಿಯೇ ಸೋಲಿಸಿದ ಇಬ್ಬರೂ ಮಹಿಳೆಯರು ಚಿಕಿತ್ಸೆಗಾಗಿ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ತೆಗೆದುಕೊಳ್ಳಲಿಲ್ಲ. ಇದರ ಹೊರತಾಗಿಯೂ, HIV ವೈರಸ್ ಗೆ ಅವರು ತಮ್ಮ ದೇಹದಲ್ಲಿ ಯಾವುದೇ ಸ್ಥಾನ ನೀಡಿಲ್ಲ  ಮತ್ತು ಅಂತಿಮವಾಗಿ ತಮ್ಮ ಇಚ್ಚಾಶಕ್ತಿಯಿಂದ ಸೋಲಿಸಿದ್ದಾರೆ.

ಇದನ್ನೂ ಓದಿ-Four Eared Cat: ನಾಲ್ಕು ಕಿವಿಗಳುಳ್ಳ ಬೆಕ್ಕನ್ನು ಎಂದಾದರೂ ನೋಡಿದ್ದೀರಾ? ಈ ಬೆಕ್ಕಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಫಾಲೋವರ್ಸ್

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಎಚ್‌ಐವಿ ಸೋಂಕಿಗೆ ಒಳಗಾದಾಗ, ವೈರಸ್ ಅವರ ಪ್ರತಿರಕ್ಷಣಾ ಕೋಶದ ಡಿಎನ್‌ಎಗೆ ಅಂಟಿಕೊಳ್ಳುತ್ತದೆ ಮತ್ತು ನಂತರ ಅಲ್ಲಿಂದ ಪುನರುತ್ಪಾದನೆಯನ್ನು ಮುಂದುವರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವೈರಸ್ ಪ್ರಗತಿಯಾಗದಂತೆ ತಡೆಯಲು ಆಂಟಿ-ರೆಟ್ರೋವೈರಲ್ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯು ಈ ವೈರಸ್ ಅನ್ನು ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ, ಆದರೂ ಇದು ದೇಹದಲ್ಲಿ ಅದರ ಹರಡುವಿಕೆಯ ವೇಗವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Knowledge Story: ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಏಕೆ ಗೊತ್ತಾ?

ಈ ರೀತಿಯಾಗಿ ಅವರು ಅಪಾಯಕಾರಿ ವೈರಸ್ ಮೇಲೆ ವಿಜಯವನ್ನು ಸಾಧಿಸಿದ್ದಾರೆ
ಮೆಸಾಚ್ಯುಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ. ಯು ಪ್ರಕಾರ, ಏಡ್ಸ್ ಅನ್ನು ಸೋಲ್ಲಿಸಿದ ಈ ಇಬ್ಬರು ಮಹಿಳೆಯರ ತನಿಖೆಯಿಂದ ಅವರ ಶರೀರದಲ್ಲಿ ಪ್ರವೇಶ ಮಾಡಿದ HIV ವೈರಸ್ ಜಿನೋಮ್, ನಿಷ್ಕೀಯ ಭಾಗ (ಜೀನ್ ಡೆಸರ್ಟ್) ತಲುಪಿದ್ದವು. ಈ ಭಾಗಕ್ಕೆ ತಲುಪಿದ ಕಾರಣ ಅವು ಶರೀರಕ್ಕೆ ಹಾನಿ ತಲುಪಿಸುವ ಸ್ಥಿತಿಯಲ್ಲಿ ವೈರಸ್ ಇರಲಿಲ್ಲ . ಇನ್ನೊಂದೆಡೆ ಶರೀರದ ಇತರ ಭಾಗಕ್ಕೆ ತಲುಪಿದ ವೈರಸ್ ನ ಕಣಗಳನ್ನು ಮಹಿಳೆಯರು ತಮ್ಮ ಬಲವಾದ ಪ್ರತಿರಕ್ಷನಾ ಸಾಮರ್ಥ್ಯದ ಮೂಲಕ ಸೋಲಿಸಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ-Viral Online Marriage: Facebook ನಲ್ಲಿ ಹುಟ್ಟಿದ ಪ್ರೀತಿ, Video Call ಮೂಲಕ ವಿವಾಹ, ಮಿಲನ ಇನ್ನೂ ಬಾಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News