ನವದೆಹಲಿ : ಈಗ ಪ್ರತಿಯೋಬ್ಬರು ಬಿಡುವಿನ ಸಮಯವನ್ನು ಮೊಬೈಲ್ನಲ್ಲಿಯೇ ಕಳೆಯುತ್ತಾರೆ. ಆದರೆ ಮೊಬೈಲ್ ನಲ್ಲಿ ಸುಮ್ಮನೆ ಕಾಲಕಳೆಯುವ ಬದಲು ಅದೇ ಸಮಯದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಬಹುದು. Google Play Store ನಲ್ಲಿರುವ ಬಹಳಷ್ಟು ಅಪ್ಲಿಕೇಶನ್ಗಳು ಈ ರೀತಿಯ ಹಣ ಸಂಪಾದನೆಗೆ ಅವಕಾಶ ನೀಡುತ್ತವೆ. ಇಲ್ಲಿ ಕೆಲವೊಂದು ಗೇಮ್ ಗಳನ್ನೂ ಆಡಬೇಕಾಗುತ್ತದೆ. ಈ ಆಟಕ್ಕೆ ಹಣ ಪಾವತಿಸಲಾಗುತ್ತದೆ. ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ (Coronavirus) ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಈ ಆಪ್ ಗಳ ಮೂಲಕ ಹಣ ಸಂಪಾದನೆ ಸಾಧ್ಯವಾಗಿತ್ತು.
ಮನೆಯಲ್ಲೇ ಹಣ ಸಂಪಾದನೆ ಸಾಧ್ಯ :
ಜನರು ತಮ್ಮ ಸಂಪೂರ್ಣ ವೆಚ್ಚಗಳನ್ನು ನಿರ್ವಹಿಸುವ ಮೂಲಕ ಆನ್ಲೈನ್ನಲ್ಲಿ (Online) ಹಣವನ್ನು ಗಳಿಸಲು ಹಲವು ಮಾರ್ಗಗಳಿವೆ. ಆದರೆ, ಮನೆಯಲ್ಲಿ ಕುಳಿತು ಮೊಬೈಲ್ನಲ್ಲಿ ಗೇಮ್ಗಳನ್ನು (Mobile game) ಆಡುವ ಮೂಲಕ ನೀವು ಮಿಲಿಯನೇರ್ ಆಗುವ್ ಅವಕಾಶದ ಬಗ್ಗೆ ಮಾಹಿತಿ ಇಲ್ಲಿದೆ. ಇದಕ್ಕಾಗಿ ಕೆಲವು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಬಳಕೆದಾರರೇ? ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಗೇಮ್ ಟೆಸ್ಟ್ ಮಾಡಬೇಕಾಗುತ್ತದೆ :
Google Play Storeನಲ್ಲಿರುವ ಹಲವಾರು ಅಪ್ಲಿಕೇಶನ್ಗಳು ಗೇಮ್ ಆಡುವುದಕ್ಕೆ ಹಣ ಪಾವತಿಸುತ್ತದೆ. ಇಲ್ಲಿ ಹೊಸ ಗೇಮ್ ಗಳನ್ನು ಆಟವಾಡುವ ಮೂಲಕ ಪರೀಕ್ಷಿಸಬೇಕಾಗುತ್ತದೆ. ಪ್ರತಿಯಾಗಿ ಅದಕ್ಕೆ ಹಣ ಪಾವತಿಸಲಾಗುತ್ತದೆ. ನೀವು ಎಷ್ಟು ಸಮಯವನ್ನು ಇಲ್ಲಿ ವ್ಯಯಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಆದಾಯ (income) ಕೂಡಾ ಅವಲಂಬಿಸಿರುತ್ತದೆ. ಹೆಚ್ಚು ಆಟಗಳನ್ನು ಆಡಿದರೆ ಹೆಚ್ಚು ಹಣ ಸಿಗುತ್ತದೆ ಮತ್ತು ಕಡಿಮೆ ಆಡಿದರೆ ಅದಕ್ಕೆ ತಕ್ಕಂತೆ ಪಾವತಿಸಲಾಗುತ್ತದೆ. ಈ ಆ್ಯಪ್ ಗಳಲ್ಲಿ ಗೇಮ್ ಆಡುವ ಮೂಲಕ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿ ಗಳಿಸಬಹುದು.
ಆನ್ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ :
ಅನೇಕ ಕಂಪನಿಗಳು ನಿರಂತರವಾಗಿ ಸಮೀಕ್ಷೆಗಳನ್ನು ನಡೆಸುತ್ತಲೇ ಇರುತ್ತವೆ ಮತ್ತು ಈ ಸಮೀಕ್ಷೆಗಳಲ್ಲಿ ಪಾಲ್ಗೊಂಡರೆ ಅದಕ್ಕೆ ಪಾವತಿಸಲಾಗುತ್ತದೆ. Google Play Store ನಲ್ಲಿರುವ ಅಪ್ಲಿಕೇಶನ್ಗಳ ಮೂಲಕ ದಿನಕ್ಕೆ 800ರೂ. ಯಿಂದ 1500 ರೂ ವರೆಗೆ ಗಳಿಸಬಹುದು. ಒಂದು ತಿಂಗಳಲ್ಲಿ, ಈ ಸಮೀಕ್ಷೆಗಳ ಸಹಾಯದಿಂದ, 45 ರಿಂದ 50 ಸಾವಿರ ರೂಪಾಯಿಗಳವರೆಗೆ ಗಳಿಸಬಹುದು.
ಇದನ್ನೂ ಓದಿ: ನಿಷೇಧದ ಬಳಿಕ ನಿಮ್ಮ 500 ಮತ್ತು 1000 ರೂ. ಹಳೆಯ ನೋಟುಗಳು ಏನಾದವು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ