PM Modi's Diwali with Soldiers: ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿಯವರ ದೀಪಾವಳಿ

PM Modi's Diwali with Soldiers: ನೌಶೇರಾ ತಲುಪಿದ ನಂತರ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ, ನಮ್ಮ ಸೈನಿಕರು ಭಾರತ ಮಾತೆಯ 'ರಕ್ಷಣಾ ಕವಚ' ಎಂದು ಹೇಳಿದರು.

Written by - Yashaswini V | Last Updated : Nov 4, 2021, 01:44 PM IST
  • ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಇಲ್ಲಿನ ಬ್ರಿಗೇಡ್‌ನ ಪಾತ್ರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ತಂದಿದೆ
  • ನೌಶೇರಾದ ಸೈನಿಕರ ಪರಾಕ್ರಮದ ಮುಂದೆ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಲಾಯಿತು
  • ಭಾರತೀಯ ಸೇನೆಯ ಶಕ್ತಿ ಎಷ್ಟಿದೆ ಎಂಬುದು ಆರಂಭದ ದಿನಗಳಲ್ಲಿಯೇ ಶತ್ರುಗಳಿಗೆ ಅರಿವಾಗಿತ್ತು
PM Modi's Diwali with Soldiers: ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿಯವರ ದೀಪಾವಳಿ title=
PM Modi Diwali With Solidiers

PM Modi's Diwali with Soldiers: ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಜಮ್ಮು ರಜೌರಿ ಜಿಲ್ಲೆ (ನೌಶೇರಾ) ಸೆಕ್ಟರ್‌ಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ನೌಶೇರಾದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ನೌಶೇರಾ ತಲುಪಿದ ಬಳಿಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ, ನಮ್ಮ ಸೈನಿಕರು ಭಾರತ ಮಾತೆಯ 'ರಕ್ಷಣಾ ಕವಚ'.  ನಿಮ್ಮೆಲ್ಲರಿಂದಾಗಿ ದೇಶದ ಜನತೆ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ ಎಂದು ಹೇಳಿದರು.

ಯೋಧರೊಂದಿಗೆ ಪ್ರಧಾನಿ ದೀಪಾವಳಿಯ ಮುಖ್ಯ ಅಂಶಗಳು:
>> ನಾನು ಪ್ರತಿ ದೀಪಾವಳಿಯನ್ನು ನಮ್ಮ ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ಇಂದು ನಾನು ನನ್ನ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ಇಲ್ಲಿಗೆ ತಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

>> 'ಇಂದು ನಾನು ಮತ್ತೆ ನಿಮ್ಮ ನಡುವೆ ಬಂದಿದ್ದೇನೆ. ಇಂದು ಮತ್ತೆ ನಾನು ನಿಮ್ಮನ್ನು ಹೊಸ ಶಕ್ತಿ, ಹೊಸ ಉತ್ಸಾಹ, ಹೊಸ ನಂಬಿಕೆಯೊಂದಿಗೆ ಕರೆದೊಯ್ಯುತ್ತೇನೆ. ನಾನೊಬ್ಬನೇ ಬಂದಿಲ್ಲ, 130 ಕೋಟಿ ದೇಶವಾಸಿಗಳ ಆಶೀರ್ವಾದವನ್ನು ನಿಮಗಾಗಿ ತಂದಿದ್ದೇನೆ- ಪ್ರಧಾನಮಂತ್ರಿ ನರೇಂದ್ರ ಮೋದಿ

ಇದನ್ನೂ ಓದಿ- Cat Viral Video: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆಕ್ಕು ವಾಷಿಂಗ್ ಮೆಷಿನ್‌ನಲ್ಲಿ ಏನು ಮಾಡಬಹುದು! ಈ ವೈರಲ್ ವಿಡಿಯೋ ನೋಡಿ

>> ಇಂದು ಸಂಜೆ ದೀಪಾವಳಿಯ ದೀಪ, ನಿಮ್ಮ ಶೌರ್ಯ, ತ್ಯಾಗ ಮತ್ತು ತಪಸ್ಸಿನ ಹೆಸರಿನಲ್ಲಿ, ಭಾರತದ ಪ್ರತಿಯೊಬ್ಬ ಪ್ರಜೆಯೂ ಆ ದೀಪದ ಬೆಳಕಿನೊಂದಿಗೆ ನಿಮಗೆ ಅನೇಕ ಶುಭ ಹಾರೈಸುವುದನ್ನು ಮುಂದುವರಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

>> ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಇಲ್ಲಿನ ಬ್ರಿಗೇಡ್‌ನ ಪಾತ್ರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ತಂದಿದೆ. ನೌಶೇರಾದ ಸೈನಿಕರ ಪರಾಕ್ರಮದ ಮುಂದೆ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಲಾಯಿತು. ಭಾರತೀಯ ಸೇನೆಯ ಶಕ್ತಿ ಎಷ್ಟಿದೆ ಎಂಬುದು ಆರಂಭದ ದಿನಗಳಲ್ಲಿಯೇ ಶತ್ರುಗಳಿಗೆ ಅರಿವಾಗಿತ್ತು  ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ನುಡಿದರು.

>> ರಕ್ಷಣಾ ಬಜೆಟ್‌ನ ಸುಮಾರು 65% ದೇಶದೊಳಗಿನ ಖರೀದಿಗೆ ಖರ್ಚು ಮಾಡಲಾಗುತ್ತಿದೆ. ಇಂದು ದೇಶದೊಳಗೆ ಅರ್ಜುನ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ, ತೇಜಸ್‌ನಂತಹ ವಿಮಾನಗಳನ್ನು ದೇಶದೊಳಗೆ ನಿರ್ಮಿಸಲಾಗುತ್ತಿದೆ. ವಿಜಯದಶಮಿಯಂದು 7 'ರಕ್ಷಣಾ ಕಂಪನಿ'ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು  ಎಂದು ಪ್ರಧಾನಿ ಮೋದಿ ಹೇಳಿದರು.

>> ಸೇನೆಗೆ ಸೇರುವುದು ನಿಮ್ಮ ಕೆಲಸವಲ್ಲ. ಮೊದಲನೇ ತಾರೀಖಿನಂದು ಸಂಬಳ ಬರುತ್ತೆ ಎಂಬ ಕಾರಣಕ್ಕಾಗಿ ನೀವಿಲ್ಲಿಗೆ ಬಂದಿಲ್ಲ. ಋಷಿಮುನಿಗಳು ಸಾಧನೆ ಮಾಡುವಂತೆ ಸೇನೆಗೆ ಸೇರುವುದು ನಿಮಗೆ ಒಂದು ಸಾಧನ. ನಿಮ್ಮ ಹೃದಯದೊಳಗೆ ಆ ಅನ್ವೇಷಕನ ರೂಪವನ್ನು ನೋಡುತ್ತಿದ್ದೇನೆ. ನೀವು ಭಾರತ ಮಾತೆಗೆ ಸೇವೆ ಸಲಿಸುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು (PM Modi With Solidiers) ಹೊಗಳಿದರು.

ಇದನ್ನೂ ಓದಿ- Samsung: ಕಡಿಮೆ ಬೆಲೆಯಲ್ಲಿ ಅದ್ಭುತ 5G ಸ್ಮಾರ್ಟ್‌ಫೋನ್ ಅನ್ನು ತರುತ್ತಿದೆ ಸ್ಯಾಮ್ಸಂಗ್

>> ಬದಲಾಗುತ್ತಿರುವ ಜಗತ್ತು, ಬದಲಾಗುತ್ತಿರುವ ಯುದ್ಧದ ಸ್ವರೂಪದೊಂದಿಗೆ ಇಂದು ನಾವು ನಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಬೇಕಾಗಿದೆ. ಅದನ್ನೂ ಹೊಸ ಹುರುಪಿನಿಂದ ರೂಪಿಸಬೇಕು. ಜಗತ್ತಿನಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಗೆ ಅನುಗುಣವಾಗಿ ನಾವು ನಮ್ಮ ಸಿದ್ಧತೆಗಳನ್ನು ಅಳವಡಿಸಿಕೊಳ್ಳಬೇಕು ಎಂದವರು ಸೈನಿಕರಿಗೆ ಕರೆ ನೀಡಿದರು.

ವಾಸ್ತವವಾಗಿ ಮೋದಿಯವರು ಪ್ರಧಾನಿಯಾದ ನಂತರ 2014ರಲ್ಲಿ ಸಿಯಾಚಿನ್‌ಗೆ ಭೇಟಿ ನೀಡಿದ್ದರು. ಅಂದಿನಿಂದ ಪ್ರತಿ ವರ್ಷ ದೀಪಾವಳಿಯಂದು ಗಡಿ ಪ್ರದೇಶಕ್ಕೆ ತೆರಳಿ ಸೈನಿಕರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ತಮ್ಮ ನಿವಾಸದಿಂದ ನಿರ್ಗಮಿಸುವಾಗ ಕನಿಷ್ಠ ಭದ್ರತಾ ವ್ಯವಸ್ಥೆಗಳಿದ್ದು, ಜನರಿಗೆ ತೊಂದರೆಯಾಗದಂತೆ ಸಂಚಾರ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಬುಧವಾರ ರಜೌರಿ ಸೇರಿದಂತೆ ಮುಂಚೂಣಿ ಪ್ರದೇಶಗಳಿಗೆ ವೈಮಾನಿಕ ಪ್ರವಾಸವನ್ನು ನಡೆಸಿದ್ದರು ಮತ್ತು ಈ ಸಂದರ್ಭದಲ್ಲಿ ಜಮ್ಮು ಪ್ರದೇಶದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News