Detox Drinks: ಹಬ್ಬದ ಸಮಯದಲ್ಲಿ ದೇಹವನ್ನು ಡಿಟಾಕ್ಸ್ ಮಾಡಲು ಸಹಾಯಕ ಈ 5 ಡ್ರಿಂಕ್ಸ್

Detox Drink: ಚಯಾಪಚಯವನ್ನು ಹೆಚ್ಚಿಸಲು, ಕಾಲಕಾಲಕ್ಕೆ ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ. ಹಬ್ಬದ ಸಮಯದಲ್ಲಿ, ನೀವು ರುಚಿಗೆ ತಕ್ಕಂತೆ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೀರಿ. ಈ ಕಾರಣದಿಂದಾಗಿ, ದೇಹದಲ್ಲಿ ವಿಷವು ರೂಪುಗೊಳ್ಳಲು ಪ್ರಾರಂಭಿಸುತ್ತದೆ.  

Written by - Yashaswini V | Last Updated : Nov 4, 2021, 01:20 PM IST
  • ಕಾಲಕಾಲಕ್ಕೆ ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ
  • ನಿಂಬೆ ಮತ್ತು ಶುಂಠಿ ಪಾನೀಯವು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ
  • ದೇಹವನ್ನು ನಿರ್ವಿಷಗೊಳಿಸಲು ನೀವು ಅರಿಶಿನ ಹಾಲನ್ನು ಕುಡಿಯಬಹುದು
Detox Drinks: ಹಬ್ಬದ ಸಮಯದಲ್ಲಿ ದೇಹವನ್ನು ಡಿಟಾಕ್ಸ್ ಮಾಡಲು ಸಹಾಯಕ ಈ 5 ಡ್ರಿಂಕ್ಸ್ title=
Detox Drink benefits

Detox Drink: ಹಬ್ಬ ಹರಿದಿನಗಳಲ್ಲಿ ನಾನಾ ಬಗೆಯ ತಿನಿಸು, ಸಿಹಿತಿಂಡಿ, ಕರಿದ ಪದಾರ್ಥಗಳನ್ನು ಒಟ್ಟಿಗೆ ತಿನ್ನುತ್ತೇವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ದೇಹವನ್ನು ನಿರ್ವಿಷಗೊಳಿಸುವುದು ಮುಖ್ಯ. ಚಯಾಪಚಯವನ್ನು ಹೆಚ್ಚಿಸಲು, ಕಾಲಕಾಲಕ್ಕೆ ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ. ಹಬ್ಬದ ಸಮಯದಲ್ಲಿ, ನೀವು ರುಚಿಗೆ ತಕ್ಕಂತೆ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೀರಿ. ಈ ಕಾರಣದಿಂದಾಗಿ, ದೇಹದಲ್ಲಿ ವಿಷವು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಆದರೆ, ಈ ಬಗ್ಗೆ ಸರಿಯಾಗಿ ನಿಗಾ ವಹಿಸದಿದ್ದರೆ ನಿಮಗೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಹಬ್ಬದ ಸಮಯದಲ್ಲಿ ತಪ್ಪದೇ ದೇಹವನ್ನು ಡಿಟಾಕ್ಸ್ ಮಾಡುವುದು ತುಂಬಾ ಅವಶ್ಯಕ. ದೇಹವನ್ನು ನಿರ್ವಿಷಗೊಳಿಸಲು ನೀವು ಹೆಚ್ಚು ಕಷ್ಟ ಪಡಬೇಕಿಲ್ಲ ಕೆಲವು ಸಿಂಪಲ್ ಪಾನೀಯಗಳು ನಿಮಗೆ ಸಹಾಯಕ ಎಂದು ಸಾಬೀತುಪಡಿಸಬಹುದು.

ದೇಹವನ್ನು ಡಿಟಾಕ್ಸ್ ಮಾಡಲು ಸಹಾಯಕ ಈ 5 ಡ್ರಿಂಕ್ಸ್:
* ದಾಲ್ಚಿನ್ನಿ ಜೊತೆ ಡಿಟಾಕ್ಸ್ ಡ್ರಿಂಕ್ ತಯಾರಿಸಿ:

ಒಂದು ಲೋಟ ನೀರಿನಲ್ಲಿ ನಾಲ್ಕನೇ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸ್ವಲ್ಪ ಸಮಯ ಕುದಿಸಿ. ಇದರ ನಂತರ, ಅದಕ್ಕೆ ಅರ್ಧ ನಿಂಬೆ ಮತ್ತು ಒಂದು ಚಮಚ ಜೇನುತುಪ್ಪವನ್ನು (Honey) ಸೇರಿಸಿ. ಈ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.

* ನಿಂಬೆ ಮತ್ತು ಶುಂಠಿ ಪಾನೀಯ: 
ನಿಂಬೆ ಮತ್ತು ಶುಂಠಿ ಪಾನೀಯವು ದೇಹದಿಂದ ವಿಷವನ್ನು ಹೊರಹಾಕಲು ಸಹ ಸಹಾಯ ಮಾಡುತ್ತದೆ. ಇದಕ್ಕಾಗಿ ಅರ್ಧ ನಿಂಬೆಹಣ್ಣು ಮತ್ತು ಒಂದು ಇಂಚಿನ ಶುಂಠಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ. ನೀರಿನ ಪ್ರಮಾಣ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ. ಅದರ ನಂತರ ಅದನ್ನು ಒಂದು ಕಪ್ನಲ್ಲಿ ಶೋಧಿಸಿ. ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ನೀವು ಅದನ್ನು ಕುಡಿಯಬಹುದು.

ಇದನ್ನೂ ಓದಿ- Diwali Diet Tips: ದೀಪಾವಳಿಯಲ್ಲಿ ಶುಗರ್ ನಿಯಂತ್ರಣದಲ್ಲಿಡಲು ಮಧುಮೇಹಿಗಳು ಈ 5 ಸಲಹೆ ಅನುಸರಿಸಿ

* ಅರಿಶಿನ ಹಾಲು:
ಹಬ್ಬ ಹರಿದಿನಗಳಲ್ಲಿ ಅರಿಶಿನದ ಹಾಲನ್ನು ಸೇವಿಸಿ ದೇಹವನ್ನು ನಿರ್ವಿಷಗೊಳಿಸಬಹುದು. ಹಾಲನ್ನು ಬಿಸಿ ಮಾಡಿ ಅದಕ್ಕೆ ಒಂದು ತುಂಡು ದಾಲ್ಚಿನ್ನಿ, ಕರಿಮೆಣಸು, ಲವಂಗ, ಏಲಕ್ಕಿ ಮತ್ತು ಒಂದು ಚಮಚ ಅರಿಶಿನ ಸೇರಿಸಿ. ಈ ವಸ್ತುಗಳನ್ನು ಮಿಶ್ರಣ ಮಾಡಿ ಮತ್ತು ಹಾಲನ್ನು 5 ನಿಮಿಷಗಳ ಕಾಲ ಕುದಿಸಿ. ಅದರ ನಂತರ ಅದಕ್ಕೆ ಜೇನುತುಪ್ಪ ಸೇರಿಸಿ. ಈ ಡಿಟಾಕ್ಸ್ ಪಾನೀಯವು ನಿಮಗೆ ಪ್ರಯೋಜನವನ್ನು ನೀಡುತ್ತದೆ.

* ಬೀಟ್ರೂಟ್ ಪಾನೀಯ:
ಬೀಟ್ರೂಟ್ ಪಾನೀಯವು (Detox Drink) ದೇಹವನ್ನು ನಿರ್ವಿಷಗೊಳಿಸಲು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ಮಾಡಲು, ಬೀಟ್ರೂಟ್ ತುಂಡುಗಳನ್ನು ಅರ್ಧ ಗ್ಲಾಸ್ ನೀರಿನಲ್ಲಿ ಕುದಿಸಿ ಮತ್ತು ನೀರಿನಿಂದ ಮ್ಯಾಶ್ ಮಾಡಿ. ಬಳಿಕ ಅದಕ್ಕೆ ಉಪ್ಪು, ಮೆಣಸು ಮತ್ತು ನಿಂಬೆ ಸೇರಿಸಿ ಕುಡಿಯಿರಿ.

ಇದನ್ನೂ ಓದಿ- Diwali Diet: ದೀಪಾವಳಿಯ ದಿನ ಈ ಆಹಾರದ ತಪ್ಪುಗಳನ್ನು ಮಾಡಬೇಡಿ, ಆರೋಗ್ಯಕ್ಕೆ ಹಾನಿಯಾದೀತು!

* ಗ್ರೀನ್ ಟೀ:
ದಿನಕ್ಕೆ ಎರಡರಿಂದ ಮೂರು ಬಾರಿ ಗ್ರೀನ್ ಟೀ ಕುಡಿಯಿರಿ. ನೀವು ಹಸಿರು ಚಹಾದಲ್ಲಿ ನಿಂಬೆ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಕೂಡ ಸೇವಿಸಬಹುದು. ಇದನ್ನು ಉತ್ತಮ ಡಿಟಾಕ್ಸ್ ಪಾನೀಯವೆಂದು ಪರಿಗಣಿಸಲಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.  ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News