ನವದೆಹಲಿ : ಐಪಿಎಲ್ 2022ರ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಹೊಸ ತಂಡ ಅಹಮದಾಬಾದ್ (Ahmedabad) ಫ್ರಾಂಚೈಸಿ ಮುಂದಿನ ವರ್ಷ ಪ್ರಶಸ್ತಿ ಗೆಲ್ಲುವ ತಂಡವನ್ನು ರಚಿಸಲು ಸಿದ್ಧತೆ ನಡೆಸಿದೆ. ಸಿವಿಸಿ ಕ್ಯಾಪಿಟಲ್ (CVC Capital) ಈ ತಂಡದ ಮಾಲೀಕತ್ವವನ್ನು 5166 ಕೋಟಿ ರೂ.ಗೆ ಪಡೆದುಕೊಂಡಿದೆ.
ಈ ಇಬ್ಬರು ಆಟಗಾರರ ಮಧ್ಯೆ ನಾಯಕತ್ವಕ್ಕಾಗಿ ಪೈಪೋಟಿ :
CVC ಕ್ಯಾಪಿಟಲ್ (CVC Capital) ಹೊಸ IPL ತಂಡಗಳಿಗೆ ಎರಡನೇ ಅತಿ ಹೆಚ್ಚು ಬಿಡ್ ಮಾಡಿದ ಅಂತರಾಷ್ಟ್ರೀಯ ಹೂಡಿಕೆ ಸಂಸ್ಥೆಯಾಗಿದೆ. ಈ ತಂಡದ ಹೋಮ್ ಗ್ರೌಂಡ್ ನರೇಂದ್ರ ಮೋದಿ ಕ್ರೀಡಾಂಗಣವಾಗಲಿದೆ (Narendra Modi Stadium). ಅಹಮದಾಬಾದ್ ತಂಡದ ನಾಯಕನ ಬಗ್ಗೆ ಮಾತನಾಡುವುದಾದರೆ ಸದ್ಯಕ್ಕೆ ಇಬ್ಬರ ಹೆಸರು ಕೇಳಿ ಬರುತ್ತಿದೆ.
1. ಡೇವಿಡ್ ವಾರ್ನರ್ :
ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಡೇವಿಡ್ ವಾರ್ನರ್ (David Warner) ನಿರ್ಗಮನ ನಿಶ್ಚಿತವಾಗಿದ್ದು, ತಾವು ಹರಾಜು ಪೂಲ್‌ನಲ್ಲಿರುವುದಾಗಿಯೂ (Auction Pool)ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಹಮದಾಬಾದ್ ತಂಡದ ನಾಯಕತ್ವದ ಜವಾಬ್ದಾರಿ ನೀಡುವ ಬಗ್ಗೆ ಯೋಚಿಸಬಹುದು. ವಾರ್ನರ್ ಇದುವರೆಗೆ ಐಪಿಎಲ್‌ನಲ್ಲಿ (IPL) 41.59 ಸರಾಸರಿಯಲ್ಲಿ 5449 ರನ್ ಗಳಿಸಿದ್ದಾರೆ ಮತ್ತು 4 ಶತಕಗಳು ಮತ್ತು 50 ಅರ್ಧ ಶತಕಗಳು ಸೇರಿದಂತೆ ಸುಮಾರು 140 ಸ್ಟ್ರೈಕ್ ರೇಟ್‌ಗಳನ್ನು ಗಳಿಸಿದ್ದಾರೆ. IPL 2021 ರಲ್ಲಿ SRH ತಂಡದ ಪ್ರದರ್ಶನವು ತುಂಬಾ ಕಳಪೆಯಾಗಿದ್ದು ಇದರ ಜವಾಬ್ದಾರಿಯನ್ನು ವಾರ್ನರ್ ತೆಗೆದುಕೊಳ್ಳಬೇಕಾಯಿತು. ನಿರಂತರವಾಗಿ Playing XI ನಿಂದ ಹೊರಗಿಡಲಾಯಿತು. ಈಗ ಆಸ್ಟ್ರೇಲಿಯನ್ ಸ್ಟಾರ್ ಹೊಸ ಆರಂಭಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಐಸಿಸಿ ಟಿ 20 ವಿಶ್ವಕಪ್ ಮೂಲಕ ಅವರು ಫಾರ್ಮ್‌ಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ದೊಡ್ಡ ಜವಾಬ್ದಾರಿಗೆ ಅವರ ಹೆಸರು ಕೇಳಿಬಂದಿದೆ.
2. ಶ್ರೇಯಸ್ ಅಯ್ಯರ್ :
ಮುಂದಿನ ವರ್ಷ ಶ್ರೇಯಸ್ ಅಯ್ಯರ್ (Shreyas Iyer) ಅವರು ತಂಡವನ್ನು ಮುನ್ನಡೆಸುವ ಇಚ್ಛೆಯಿಂದ ಬೇರೆ ತಂಡದಲ್ಲಿ ಆಡಬಹುದು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಫ್ರಾಂಚೈಸ್ ರಿಷಬ್ ಪಂತ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.ಇಂತಹ ಪರಿಸ್ಥಿತಿಯಲ್ಲಿ, ಅಯ್ಯರ್ ಹರಾಜು ಪೂಲ್‌ಗೆ ಬಂದರೆ, ಅಹಮದಾಬಾದ್ ತಂಡವು ಶ್ರೇಯಸ್ ಅಯ್ಯರ್ ಮೇಲೆ ಬೆಟ್ ಆಡಬಹುದು. ಅಯ್ಯರ್ ನಾಯಕತ್ವದಲ್ಲಿ 2020 ರಲ್ಲಿ ದೆಹಲಿ ತಂಡವನ್ನು ಐಪಿಎಲ್ ಫೈನಲ್ (IPL Final) ಪ್ರವೇಶಿಸಿತ್ತು. ಅಹಮದಾಬಾದ್ ಮಾಲೀಕರು ದೀರ್ಘಾವಧಿಯ ನಾಯಕನನ್ನು ಹುಡುಕುತ್ತಿದ್ದರೆ, 26 ವರ್ಷದ ಅಯ್ಯರ್ ಸರಿಯಾದ ಆಯ್ಕೆಯಾಗಬಹುದು.
ಇದನ್ನೂ ಓದಿ : T20 World Cup 2021: ದೀಪಾವಳಿಗೂ ಮೊದಲು ಭಾರತೀಯರಿಗೆ ಟೀಂ ಇಂಡಿಯಾ ಭರ್ಜರಿ ಉಡುಗೊರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ