Diwali 2021: ದೀಪಾವಳಿಯಲ್ಲಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ವಸ್ತುಗಳನ್ನು ಇಟ್ಟರೆ ವರ್ಷ ಪೂರ್ತಿ ಹಣ ಬರುತ್ತದೆ

Diwali 2021: ದೀಪಾವಳಿಯ 5 ದಿನಗಳಲ್ಲಿ (ದೀಪಾವಳಿ 2021), ಮನೆಯ ಮುಖ್ಯ ದ್ವಾರದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಅಂತಹ ಮನೆಗೆ ಲಕ್ಷ್ಮೀ ದೇವಿ ಪ್ರವೇಶಿಸುತ್ತಾಳೆ. ವರ್ಷವಿಡೀ ಆ ಮನೆಯಲ್ಲಿ ನೆಲೆಸುತ್ತಾಳೆ. ಮನೆಯ ಜನರಿಗೆ ಸಾಕಷ್ಟು ಪ್ರಗತಿ ಮತ್ತು ಹಣ ಸಿಗುತ್ತದೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Nov 1, 2021, 12:26 PM IST
  • ದೀಪಾವಳಿಯಂದು ಮುಖ್ಯ ದ್ವಾರದಲ್ಲಿ ಈ ಕೆಲಸ ಮಾಡಿ
  • ವರ್ಷವಿಡೀ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ
  • ರಂಗೋಲಿಯೊಂದಿಗೆ ನೀರಿನ ಪಾತ್ರೆಯನ್ನು ಇರಿಸಿ
Diwali 2021: ದೀಪಾವಳಿಯಲ್ಲಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ವಸ್ತುಗಳನ್ನು ಇಟ್ಟರೆ ವರ್ಷ ಪೂರ್ತಿ ಹಣ ಬರುತ್ತದೆ title=
Deepavali Remedies: Auspicious things on main gate

Diwali 2021: ದೀಪಾವಳಿ ಸಂದರ್ಭದಲ್ಲಿ ಮನೆ ಮತ್ತು ವ್ಯಾಪಾರ ಸ್ಥಳಗಳಲ್ಲಿ ರಂಗೋಲಿ ಹಾಕಿ ಅಲಂಕಾರ ಮಾಡಲಾಗುತ್ತದೆ. ಈ ಅಲಂಕಾರದಲ್ಲಿ ದೀಪಾಲಂಕಾರ, ಹೂವು ಮುಂತಾದ ವಸ್ತುಗಳನ್ನು ಬಳಸಲಾಗುತ್ತದೆ. ಆದರೆ ಈ ಸಮಯದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಮುಖ್ಯ ದ್ವಾರದಲ್ಲಿ ಇಡುವುದರಿಂದ ವರ್ಷವಿಡೀ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಮನೆಯ ಸದಸ್ಯರು ವರ್ಷವಿಡೀ ಪ್ರಗತಿ ಮತ್ತು ವಿತ್ತೀಯ ಲಾಭವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ದೀಪಾವಳಿಯ ಸಂದರ್ಭದಲ್ಲಿ, ಮಾ ಲಕ್ಷ್ಮಿಯ ಆಗಮನಕ್ಕಾಗಿ ಮನೆಯನ್ನು ಅಲಂಕರಿಸುವಾಗ ಈ ವಸ್ತುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.

ದೀಪಾವಳಿಯ 5 ದಿನಗಳಲ್ಲಿ (Diwali 2021), ಮನೆಯ ಮುಖ್ಯ ದ್ವಾರದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಅಂತಹ ಮನೆಗೆ ಲಕ್ಷ್ಮೀ ದೇವಿ ಪ್ರವೇಶಿಸುತ್ತಾಳೆ. ವರ್ಷವಿಡೀ ಆ ಮನೆಯಲ್ಲಿ ಮಾತೆ ಲಕ್ಷ್ಮೀ ನೆಲೆಸುತ್ತಾಳೆ. ಮನೆಯ ಜನರಿಗೆ ಸಾಕಷ್ಟು ಪ್ರಗತಿ ಮತ್ತು ಹಣ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Monthly Horoscope: ಈ 6 ರಾಶಿಯವರಿಗೆ ಅದ್ಭುತವಾಗಿರಲಿದೆ ನವೆಂಬರ್, ಹೊಳೆಯಲಿದೆ ಅದೃಷ್ಟ

ದೀಪಾವಳಿ ಅಲಂಕಾರದಲ್ಲಿ ಈ ವಸ್ತುಗಳನ್ನು ಬಳಸಿ:
ಸ್ವಸ್ತಿಕ್ : 

ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್ ಇರುವುದು ತುಂಬಾ ಶುಭ. ಇದು ವರ್ಷವಿಡೀ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ. ಸಾಧ್ಯವಾದರೆ, ಬಾಗಿಲಿನ ಮೇಲೆ ಬೆಳ್ಳಿಯ ಸ್ವಸ್ತಿಕವನ್ನು ಹಾಕಿ. ಇದು ಸಾಧ್ಯವಾಗದಿದ್ದರೆ, ರೋಲಿಯಿಂದ ಸ್ವಸ್ತಿಕವನ್ನು ಮಾಡಿ. ದೀಪಾವಳಿಯ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಸ್ವಸ್ತಿಕ್ ಹಾಕುವುದರಿಂದ ನಕಾರಾತ್ಮಕತೆಯು ಮನೆಯೊಳಗೆ ಪ್ರವೇಶಿಸುವುದಿಲ್ಲ. 

ಲಕ್ಷ್ಮೀ ಜೀ ಪಾದಗಳು: 
ದೀಪಾವಳಿಯ (Deepavali) ಸಂದರ್ಭದಲ್ಲಿ, ಮನೆಯ ಮುಖ್ಯ ದ್ವಾರದಲ್ಲಿ ಲಕ್ಷ್ಮಿಯ ಪಾದಗಳನ್ನು ಖಂಡಿತವಾಗಿ ಇರಿಸಿ. ಇದನ್ನು ಮಾಡುವುದು ತುಂಬಾ ಒಳ್ಳೆಯದು ಮತ್ತು ಲಕ್ಷ್ಮಿ ದೇವಿಯು ವರ್ಷವಿಡೀ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುವುದು.

ಇದನ್ನೂ ಓದಿ- Diwali 2021: ಧನತ್ರಯೋದಶಿಯ ದಿನ ತಪ್ಪಿಯೂ ಈ ತಪ್ಪಾಗದಂತೆ ಎಚ್ಚರವಹಿಸಿ, ಜೀವನಪೂರ್ತಿ ಎದುರಾಗಲಿದೆ ಸಮಸ್ಯೆ

ಚತುರ್ಮುಖ ದೀಪ: 
ದೀಪಾವಳಿಯಂದು ಮನೆಯ ಬಾಗಿಲಲ್ಲಿ ನಾಲ್ಕು ಮುಖದ ದೀಪವನ್ನು ಹಚ್ಚಬೇಕು. ಇದರಿಂದ ಮನೆಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ತೋರಣ :
ಅಲಂಕಾರಕ್ಕೆ ತಾಜಾ ಹೂ ಅಥವಾ ಪ್ಲಾಸ್ಟಿಕ್ ಹೂಗಳನ್ನು ಬಳಸುತ್ತಿದ್ದರೂ ಮನೆಯ ಮುಖ್ಯ ಗೇಟಿಗೆ ಮಾವು, ಬಾಳೆ ಎಲೆಗಳನ್ನು ಹಾಕಲು ಮರೆಯದಿರಿ. ಸಾಧ್ಯವಾದರೆ, ಈ ತೋರಣವನ್ನು ಐದು ದಿನಗಳವರೆಗೆ ಸ್ಥಾಪಿಸಿ. 

ರಂಗೋಲಿ:
ಅಲಂಕಾರಕ್ಕಾಗಿ ಮತ್ತು ಸೌಂದರ್ಯಕ್ಕಾಗಿ ಮನೆಯ ಹೊರಗೆ ರಂಗೋಲಿಯನ್ನು ಹಾಕುವ ಸಂಪ್ರದಾಯವಿದೆ. ಆದರೆ ಅದರ ಮಹತ್ವವು ಸೌಂದರ್ಯಕ್ಕಿಂತ ಹೆಚ್ಚು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು, ರಂಗೋಲಿ ಬಳಿ ನೀರು ತುಂಬಿದ ಹೂದಾನಿ ಇರಿಸಿ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News