PF Interest Rate: ಆರ್ಥಿಕ ವರ್ಷ 2020-21ಕ್ಕಾಗಿ ಉದ್ಯೋಗಿಗಳ ಭವಿಷ್ಯ ನಿಧಿಯ (Provident Fund) ಮೇಲೆ ಶೇ. 8.5 ರಷ್ಟು ಬಡ್ಡಿ ದರ ನೀಡಲು ಕೇಂದ್ರದ ಮೋದಿ ಸರ್ಕಾರ (Modi Government)ಅನುಮೋದನೆ ನೀಡಿದೆ. ಹೀಗಾಗಿ ದೇಶದ ಸುಮಾರು ಆರು ಕೋಟಿಗೂ ಅಧಿಕ ಚಂದಾದಾರರಿಗೆ ಕೇಂದ್ರ ಸರಕಾರ ದೀಪಾವಳಿಗೂ (Diwali 2021) ಮುನ್ನವೇ ಒಳ್ಳೆಯ ಸುದ್ದಿ ನೀಡಿದಂತಾಗಿದೆ. ಈ ವರ್ಷದ ಮಾರ್ಚ್ನಲ್ಲಿ, ಕಾರ್ಮಿಕ ಸಚಿವರ ನೇತೃತ್ವದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (Central Board Of Trusties), ಹಿಂದಿನ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ (Employee Provident Fund) ಠೇವಣಿಗಳ ಮೇಲೆ 8.5 ಶೇಕಡಾ ಬಡ್ಡಿ ದರವನ್ನು ನಿಗದಿಪಡಿಸಿತ್ತು. CBT ಇಪಿಎಫ್ಒ (EPFO)ದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.
"ಹಣಕಾಸು ಸಚಿವಾಲಯವು (Finance Ministry) 2020-21 ರ ಇಪಿಎಫ್ ಮೇಲಿನ ಬಡ್ಡಿ ದರವನ್ನು ಅನುಮೋದಿಸಿದೆ ಮತ್ತು ಈಗ ಅದನ್ನು ಆರು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು." ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ-Electric Bike:ಮಾರುಕಟ್ಟೆಗೆ ಬಿಡುಗಡೆಯಾಗಿದೆ ಈ ಹೊಸ e-Bike, ಒಂದೇ ಚಾರ್ಜ್ ನಲ್ಲಿ 160 ಕಿ.ಮೀ ಮೈಲೇಜ್
ಕಳೆದ ವರ್ಷ ಮಾರ್ಚ್ನಲ್ಲಿ, ಇಪಿಎಫ್ಒ (EPFO) ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಶೇಕಡಾ 8.5 ಕ್ಕೆ ಇಳಿಸಿತ್ತು, ಇದು ಏಳು ವರ್ಷಗಳಲ್ಲಿ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. 2018-19ರಲ್ಲಿ ಇದು ಶೇ 8.65ರಷ್ಟಿತ್ತು. 2019-20 ರ ಆರ್ಥಿಕ ವರ್ಷಕ್ಕೆ ಒದಗಿಸಲಾದ EPF (ಉದ್ಯೋಗಿಗಳ ಭವಿಷ್ಯ ನಿಧಿ) ಬಡ್ಡಿ ದರವು 2012-13 ಕ್ಕಿಂತ ಕಡಿಮೆಯಾಗಿತ್ತು. 2012-13ರಲ್ಲಿ ಇದನ್ನು ಶೇ 8.5ಕ್ಕೆ ಇಳಿಸಲಾಗಿತ್ತು.
ಇದನ್ನೂ ಓದಿ-Aadhaar Upadate: ನಿಮ್ಮ ಆಧಾರ್ ಕಾರ್ಡ್ ಅನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಯಮದ ಬಗ್ಗೆ ತಿಳಿಯಿರಿ
EPFO 2016-17 ರಲ್ಲಿ ತನ್ನ ಚಂದಾದಾರರಿಗೆ ಶೇ. 8.65 ಮತ್ತು 2017-18 ರಲ್ಲಿ ಶೇ. 8.55 ರಷ್ಟು ಬಡ್ಡಿಯನ್ನು ಪಾವತಿಸಿದೆ. 2015-16ರಲ್ಲಿ ಬಡ್ಡಿ ದರವು ಶೇ 8.8 ಕ್ಕೆ ಹೆಚ್ಚಿಸಲಾಗಿತ್ತು.
ಇದನ್ನೂ ಓದಿ-Gold Price Today: ದೀಪಾವಳಿಗೆ ಖುಷಿ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ